ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಹೆಚ್ಚು ಆಡುವ ಅವಕಾಶ ದೊರೆತಿದ್ದರೆ ಭಾರತದ ಶ್ರೇಷ್ಠ ಆಲ್‌ರೌಂಡರ್ ಎನಿಸಿಕೊಳ್ಳುತ್ತಿದ್ದೆ"

I Could Have Been The Best All-rounder That India Ever Produce

ನನಗೆ ಉತ್ತಮ ಬೆಂಬಲ ದೊರೆತಿದ್ದರೆ ಸಾರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಆಗುವ ಸಾಧ್ಯತೆ ಇತ್ತು. ಆದರೆ ನನಗೆ ತಂಡದಲ್ಲಿ ಬೆಂಬಲ ದೊರೆಯಲಿಲ್ಲ. ನನ್ನನ್ನು ಕಡೆಗಣಿಸಲಾಯಿತು ಎಂದು ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

"ಸಾಧನೆಯ ವಿಷಯದಲ್ಲಿ, ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಆಲ್‌ರೌಂಡರ್ ಎನಿಸಿಕೊಳ್ಳಬಹುದಿತ್ತು. ಆದರೆ ನನಗೆ ಕ್ರಿಕೆಟ್ ಕೆರಿಯರ್ ಬಹುಬೇಗನೆ ಅಂತ್ಯವಾಯತು. ನನ್ನ 27ನೇ ವಯಸ್ಸಿನಲ್ಲಿ ಭಾರತಕ್ಕಾಗಿ ನನ್ನ ಕೊನೆಯ ಪಂದ್ಯವನ್ನು ಆಡಿದ್ದೆ ಎಂದು ರೆಡಿಫ್.ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಪಠಾಣ್ ಹೇಳಿದ್ದಾರೆ.

40 ಶತಕ 15,000 ರನ್: 1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!40 ಶತಕ 15,000 ರನ್: 1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!

35 ವಯಸ್ಸಿನವರೆಗೆ ಆಡುವ ಅವಕಾಶ ದೊರೆತಿದ್ದರೆ ದೊಡ್ಡ ಬದಲಾವಣೆಯಾಗಿರುತ್ತಿತ್ತು. ಆದರೆ ಈಗ ಎಲ್ಲವೂ ಅಂತ್ಯವಾಗಿದೆ. ಆದರೆ ನಾನು ಯಾವೆಲ್ಲಾ ಪಂದ್ಯಗಳನ್ನು ಆಡಿದ್ದೇನೋ ಅಲ್ಲಿ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದೇನೆ, ತಂಡದಲ್ಲಿ ಬದಲಾವಣೆಗೆ ಕಾರಣನಾಗಿದ್ದೇನೆ. ಬ್ಯಾಟಿಂಗ್‌ನಲ್ಲೂ ನಾನು ಪ್ರದರ್ಶನ ನೀಡಿದ ಪಂದ್ಯಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ ಎಂದು ಪಠಾಣ್ ಹೇಳಿದ್ದಾರೆ.

ಟೀಮ್ ಇಮಡಿಯಾದ ವೇಗಿ ಮೊಹಮದ್ ಶಮಿ ವೇಗವಾಗಿ 100 ವಿಕೆಟ್ ಪಡೆದ ಬಾರತೀಯ ಬೌಲರ್ ಎಂಬ ದಾಖಲೆಯನ್ನು ಹೊಂದುವ ಮುನ್ನ ಈ ದಾಖಲೆ ಇರ್ಫಾನ್ ಪಠಾಣ್ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. ಏಕದಿನ ಕ್ರಿಕೆಟ್‌ನ ಮೊದಲ 59 ಪಂದ್ಯಗಳಲ್ಲಿ ಇರ್ಫಾನ್ ಪಠಾಣ್ 100 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.

ಸಚಿನ್ ವಿದಾಯ ಭಾಷಣ ವೆಸ್ಟ್ ಇಂಡೀಸ್ ದಿಗ್ಗಜನ ಕಣ್ಣಲ್ಲೂ ನೀರು ತರಿಸಿತ್ತು!ಸಚಿನ್ ವಿದಾಯ ಭಾಷಣ ವೆಸ್ಟ್ ಇಂಡೀಸ್ ದಿಗ್ಗಜನ ಕಣ್ಣಲ್ಲೂ ನೀರು ತರಿಸಿತ್ತು!

ಗಾಯ ತಂಡದ ತನ್ನ ಕೆರಿಯರ್‌ನ ಮೇಲೆ ಪರಿಣಾಮ ಬೀರಿತು ಎಂದು ಪಠಾಣ್ ಹೇಳಿದ್ದು ತಂಡದಲ್ಲಿ ನನ್ನನ್ನು ರಕ್ಷಣಾತ್ಮಕ ಬೌಲರ್ ಆಗಿ ಬಳಸಿಕೊಳ್ಳಲಾಯಿತು. ಅದು ನನ್ನ ಪ್ರದರ್ಶನದಲ್ಲಿ ವಿಕೆಟ್‌ಗಳ ಸಂಖ್ಯೆಯ ಮೇಲೂ ಪರಿಣಾಮ ಬೀರಿತು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

Story first published: Monday, June 22, 2020, 9:51 [IST]
Other articles published on Jun 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X