ಈ ಕಾರಣದಿಂದಲೇ ನಾನು ನನ್ನ ಮಗನ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದ ಸಚಿನ್!

ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಈ ಮೆಗಾ ಹರಾಜಿನಲ್ಲಿ 600ಕ್ಕೂ ಹೆಚ್ಚು ಕ್ರಿಕೆಟಿಗರು ಭಾಗವಹಿಸಿದ್ದು, ಈ ಪೈಕಿ 66 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 204 ಆಟಗಾರರು ಹರಾಜಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು 33 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು 324.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದವು.

ಐಪಿಎಲ್: ರೈನಾ ಬಿಕರಿಯಾಗದೇ ಇರಲು ಆತ ಧೋನಿ ವಿರುದ್ಧ ಮಾಡಿದ್ದ ಈ ಕೆಲಸ ಕಾರಣ ಎಂದ ಮಾಜಿ ಕ್ರಿಕೆಟಿಗಐಪಿಎಲ್: ರೈನಾ ಬಿಕರಿಯಾಗದೇ ಇರಲು ಆತ ಧೋನಿ ವಿರುದ್ಧ ಮಾಡಿದ್ದ ಈ ಕೆಲಸ ಕಾರಣ ಎಂದ ಮಾಜಿ ಕ್ರಿಕೆಟಿಗ

ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು 15.25 ಕೋಟಿಗೆ ಖರೀದಿಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ಬಾರಿ ಆಟಗಾರನೋರ್ವನನ್ನು ಅತಿ ಹೆಚ್ಚು ಮೊತ್ತಕ್ಕೆ ಖರೀದಿಸಿದ ಫ್ರಾಂಚೈಸಿ ಎನಿಸಿಕೊಂಡಿತು. ಇನ್ನು ಅತಿ ಹೆಚ್ಚು ಮೊತ್ತವನ್ನು ನೀಡಿ ಇಶಾನ್ ಕಿಶನ್ ಅವರನ್ನು ಖರೀದಿಸಿ ಭಾರೀ ಸುದ್ದಿ ಮತ್ತು ಚರ್ಚೆಗೆ ಕಾರಣವಾಗಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸುವುದರ ಮೂಲಕ ಟ್ರೋಲಿಗರ ಬಾಯಿಗೆ ಆಹಾರವೂ ಕೂಡ ಆಯಿತು.

'ನಾನು ಹೇಳುತ್ತಿದ್ದೇನೆ ರಿವ್ಯೂ ತಗೋ' ಎಂದ ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿತ್ತು'ನಾನು ಹೇಳುತ್ತಿದ್ದೇನೆ ರಿವ್ಯೂ ತಗೋ' ಎಂದ ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿತ್ತು

ಹೌದು, ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 20 ಲಕ್ಷ ಮೂಲಬೆಲೆಯೊಂದಿಗೆ ನೋಂದಾಯಿಸಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 30 ಲಕ್ಷಕ್ಕೆ ಖರೀದಿ ಮಾಡಿದೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಕೂಡ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದ ಅರ್ಜುನ್ ತೆಂಡೂಲ್ಕರ್ ಈ ಬಾರಿ ಕೂಡ ಅದೇ ತಂಡ ಸೇರಲಿದ್ದಾರೆ ಎಂದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಊಹಿಸಿದ್ದರು. ಅದರಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡದ ಪಾಲಾದ ಅರ್ಜುನ್ ತೆಂಡೂಲ್ಕರ್ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಇದೇ ವೇಳೆ ಇತ್ತೀಚೆಗಷ್ಟೇ ನಡೆದ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಕುರಿತು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ನಾನು ನನ್ನ ಮಗನ ಪಂದ್ಯವನ್ನು ವೀಕ್ಷಿಸುವುದೇ ಇಲ್ಲ!

ನಾನು ನನ್ನ ಮಗನ ಪಂದ್ಯವನ್ನು ವೀಕ್ಷಿಸುವುದೇ ಇಲ್ಲ!

ಅರ್ಜುನ್ ತೆಂಡೂಲ್ಕರ್ ಪ್ರದರ್ಶನದ ಕುರಿತು ಮಾತನಾಡಿರುವ ಸಚಿನ್ ತೆಂಡೂಲ್ಕರ್ ತಾನು ತನ್ನ ಮಗನ ಪಂದ್ಯಗಳನ್ನು ಹೆಚ್ಚಾಗಿ ವೀಕ್ಷಿಸುವುದೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಯಾವುದೇ ತಂದೆ ತಾಯಿಯಾಗಲಿ ತಮ್ಮ ಮಕ್ಕಳು ಕ್ರಿಕೆಟ್ ಆಡುವುದನ್ನು ನೋಡಲು ತೆರಳಿದರೆ ಆ ಮಕ್ಕಳು ಒತ್ತಡಕ್ಕೆ ಸಿಲುಕಿ ಉತ್ತಮವಾಗಿ ಆಡಲಾಗುವುದಿಲ್ಲ, ಹೀಗಾಗಿಯೇ ಅರ್ಜುನ್ ತೆಂಡೂಲ್ಕರ್ ಕೂಡ ಅದೇ ರೀತಿಯ ಒತ್ತಡಕ್ಕೆ ಸಿಲುಕಬಾರದು ಎಂದು ತಾನು ಆತನ ಪಂದ್ಯ ವೀಕ್ಷಿಸಲು ತೆರಳುವುದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಪಂದ್ಯ ವೀಕ್ಷಿಸಲು ಹೋದರೂ ಬಚ್ಚಿಟ್ಟುಕೊಳ್ಳುತ್ತೇನೆ

ಪಂದ್ಯ ವೀಕ್ಷಿಸಲು ಹೋದರೂ ಬಚ್ಚಿಟ್ಟುಕೊಳ್ಳುತ್ತೇನೆ

ಇನ್ನೂ ಮುಂದುವರೆದು ಮಾತನಾಡಿರುವ ಸಚಿನ್ ತೆಂಡೂಲ್ಕರ್ ಒಂದುವೇಳೆ ತಾನು ಅರ್ಜುನ್ ತೆಂಡೂಲ್ಕರ್ ಆಡುವ ಪಂದ್ಯವನ್ನು ವೀಕ್ಷಿಸಲು ಅಪ್ಪಿ ತಪ್ಪಿ ಹೋದರೂ ಸಹ ಯಾರ ಕಣ್ಣಿಗೂ ಕೂಡ ಕಾಣಿಸಿಕೊಳ್ಳದ ಹಾಗೆ ಬಚ್ಚಿಟ್ಟುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಹೌದು, ತಮ್ಮ ಮಗ ಒತ್ತಡಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಸಚಿನ್ ತೆಂಡೂಲ್ಕರ್ ಈ ರೀತಿ ಬಚ್ಚಿಟ್ಟುಕೊಂಡು ಆತನ ಆಟವನ್ನು ವೀಕ್ಷಿಸುತ್ತಾರಂತೆ. ಹೀಗೆ ಸಚಿನ್ ತೆಂಡೂಲ್ಕರ್ ಬಚ್ಚಿಟ್ಟುಕೊಂಡು ಪಂದ್ಯ ವೀಕ್ಷಿಸುವ ವಿಷಯ ತಮ್ಮ ಮಗನಿಗಾಗಲಿ, ಆತನ ಕೋಚ್‌ಗಾಗಲಿ ಹಾಗೂ ಅಲ್ಲಿ ನೆರೆದಿರುವ ಅಭಿಮಾನಿಗಳಿಗಾಗಲಿ ಗೊತ್ತಾಗುವುದಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

RCB ಹಂಚಿಕೊಂಡ ಹೊಸ ಪೋಸ್ಟ್ ನೋಡಿ ಅಭಿಮಾನಿಗಳು ಥ್ರಿಲ್ | Oneindia Kannada
ಅರ್ಜುನ್ ತೆಂಡೂಲ್ಕರ್ ಅಂಕಿ ಅಂಶ

ಅರ್ಜುನ್ ತೆಂಡೂಲ್ಕರ್ ಅಂಕಿ ಅಂಶ

ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ ಪ್ರಮುಖ ಟೂರ್ನಿಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಇನ್ನೂ ಸಹ ಪಡೆದುಕೊಂಡಿಲ್ಲ. ಆದರೆ ಮುಂಬೈ ಕ್ರಿಕೆಟ್ ತಂಡದ ಪರ 2 ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅರ್ಜುನ್ ತೆಂಡೂಲ್ಕರ್ ಈ 2 ಪಂದ್ಯಗಳಲ್ಲಿ 3 ರನ್ ಕಲೆಹಾಕಿದ್ದು, 42 ಎಸೆತಗಳನ್ನು ಎಸೆದು 33 ರನ್ ನೀಡಿ 2 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, February 18, 2022, 10:20 [IST]
Other articles published on Feb 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X