ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾ

ಟ್ವಿಟರ್‌ ಮೂಲಕ ಸಂದೇಶ ಸಾರಿದ ರೋಹಿತ್‌ ಶರ್ಮಾ | Oneindia Kannada
I walk out for my country Rohit

ಹೊಸದಿಲ್ಲಿ, ಜುಲೈ 31: ವೆಸ್ಟ್‌ ಇಂಡೀಸ್‌ ವಿರುದ್ಧದ ವಿವಿಧ ಮಾದರಿಯ ಕ್ರಿಕೆಟ್‌ ಸರಣಿಗಳ ಸಲುವಾಗಿ ಅಮೆರಿಕಕ್ಕೆ ಭಾರತ ತಂಡ ಪ್ರಯಾಣ ಬೆಳೆಸುವುದಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಮತ್ತು ಉಪನಾಯಕ ರೋಹಿತ್‌ ಶರ್ಮಾ ನಡುವೆ ಯಾವುದೇ ವೈಮನಸ್ಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಅಷ್ಟೇ ಅಲ್ಲದೆ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಒಂದು ಹೆಜ್ಜೆ ಮುಂದಿಟ್ಟು ತಂಡಕ್ಕಿಂತ ಮಿಗಿಲಾದವರು ಯಾರೂ ಇಲ್ಲ ಎಂದು ಎಂದೇ ಹೇಳಿದರು.

ಟೀಮ್‌ ಇಂಡಿಯಾ ಕೋಚ್‌ ಆಯ್ಕೆ ಬಗ್ಗೆ ಕೊಹ್ಲಿಗೆ ಬೆಂಬಲಿಸಿದ ಗಂಗೂಲಿಟೀಮ್‌ ಇಂಡಿಯಾ ಕೋಚ್‌ ಆಯ್ಕೆ ಬಗ್ಗೆ ಕೊಹ್ಲಿಗೆ ಬೆಂಬಲಿಸಿದ ಗಂಗೂಲಿ

ಇದರ ಬೆನ್ನಲ್ಲೇ ರೋಹಿತ್‌ ಶರ್ಮಾ, ತಮ್ಮ ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಫೋಟೊ ಒಂದನ್ನು ಪ್ರಕಟಿಸಿದ್ದು, "ನಾನಹು ಪ್ರತಿಬಾರಿ ಕಣಕ್ಕಿಳಿದಾಗಲೆಲ್ಲಾ ಕೇವಲ ನನ್ನ ತಂಡಕ್ಕಾಗಿ ಮಾತ್ರ ನಾನು ಮುನ್ನುಗ್ಗುವುದಿಲ್ಲ. ಇಡೀ ದೇಶಕ್ಕಾಗಿ ಮುನ್ನಡೆಯುತ್ತೇನೆ," ಎಂದು ಬರೆದುಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದ ವೇಳೆ ಬ್ಯಾಟಿಂಗ್‌ ಆರಂಭಿಸಲು ಡ್ರೆಸಿಂಗ್‌ ರೂಮ್‌ನಿಂದ ಮೈದಾನದ ಕಡೆಗೆ ಧಾವಿಸುತ್ತಿರುವ ಫೋಟೊ ಒಂದರನ್ನು ರೋಹಿತ್‌ ಶೇರ್‌ ಮಾಡಿ ಈ ರೀತಿ ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲದಕ್ಕಿಂತಲೂ ದೇಶವೇ ಮಿಗಿಲು ಎಂದು ತಮ್ಮೊಳಗಿನ ದೇಶ ಪ್ರೇಮವನ್ನು ಸಾರಿದ್ದಾರೆ.

ಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ಬಗ್ಗೆ ಬಿಷಪ್‌ ಅಭಿಪ್ರಾಯವಿದುಕೊಹ್ಲಿ ಸಾರಥ್ಯದ ಟೀಮ್‌ ಇಂಡಿಯಾ ಬಗ್ಗೆ ಬಿಷಪ್‌ ಅಭಿಪ್ರಾಯವಿದು

"ತಂಡದ ಪ್ರದರ್ಶನವನ್ನು ಗಮನಿಸಿದರೆ ಯಾರೊಬ್ಬರೂ ಕೂಡ ತಂಡಕ್ಕಿಂದ ಮಿಗಿಲಾದವರಲ್ಲ. ನಮ್ಮ ಆಟಗಾರರ ಪ್ರದರ್ಶನವನ್ನು ಗಮನಿಸಿ. ತಂಡದಲ್ಲಿ ಬಿರುಕುಂಟಾಗಿದ್ದರೆ ಯಾರಿಂದಲೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗುತ್ತಿರಲಿಲ್ಲ," ಎಂದು ಶಾಸ್ತ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಇದೇ ವೇಳೆ ನಾಯಕ ವಿರಾಟ್‌ ಕೊಹ್ಲಿ ಮಾತನಾಡಿ, "ನನ್ನ ಪ್ರಕಾರ ಇದು ಆಘಾತಕಾರಿಯಾಗಿದೆ. ಈ ರೀತಿಯ ಸುದ್ದಿ ಹಬ್ಬಿರುವುದು ಹಾಸ್ಯಾಸ್ಪದವೇ ಸರಿ. ನಾನು ವಿಶ್ವಕಪ್‌ ಬಳಿಕ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿದ್ದ ಪ್ರತಿಯೊಬ್ಬರ ಪ್ರತಿಕ್ರಿಯೆ ಅಬ್ಬ ನೀವು ಎಂಥಾ ಆಟವಾಡಿದಿರಿ ಎಂಬಂತಿತ್ತು. ಆ ಪ್ರಮಾಣದ ಗೌರವ ಕಾಣುತ್ತಿತ್ತು. ಆದರರಿಲ್ಲಿ ಬರೀ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಈ ಮೂಲಕ ನಮ್ಮ ತಂಡದ ಸಾಧನೆಯ ಕಡೆಗೆ ಮಣ್ಣೆರಚಲಾಗುತ್ತಿದೆ. ಇದರಿಂದ ಯಾವುದನ್ನು ನಾವು ನಂಬಬೇಕು ಎಂಬುದು ನಮಗೇ ತಿಳಿಯುತ್ತಿಲ್ಲ," ಎಂದು ಹೇಳಿದ್ದರು.

ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌

"ಬಹಳ ಸಮಯದಿಂದ ಇದೇ ರೀತಿ ಆಗುತ್ತಿದೆ. ವೈಯಕ್ತಿಕ ವಿಷಯಗಳನ್ನು ಎಳೆದು ತರಲಾಗುತ್ತಿದೆ. ಇದು ಅಗೌರವ ತರುವಂಥದ್ದು. ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ. ನನಗೆ ಯಾರಾದರು ಹಿಡಿಸಿಲ್ಲ ಎಂದರೆ ಅದು ನನ್ನ ಮುಖಭಾವನೆಯಲ್ಲೇ ತಿಳಿದುಬಿಡುತ್ತದೆ. ತಂಡದಲ್ಲಿನ ವಾತಾವರಣ ಸರಿ ಇಲ್ಲವೆಂದೆಲ್ಲಾ ಮಾತನಾಡಲಾಗುತ್ತಿದೆ. ಒಂದು ವೇಳೆ ಇದು ಸತ್ಯವೇ ಆಗಿದ್ದಲ್ಲಿ. ನಾವು ಅಷ್ಟು ಉತ್ತಮವಾಗಿ ಆಡಲು ಸಾಧ್ಯವಾಗುತ್ತಿರಲಿಲ್ಲ," ಎಂದು ತಂಡದಲ್ಲಿ ಯಾವುದೇ ಒಡಕಿಲ್ಲ ಎಂಬುದನ್ನು ಕೊಹ್ಲಿ ವಿವರಿಸಿದ್ದರು.

Story first published: Thursday, August 1, 2019, 17:23 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X