ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಸುದ್ದಿಗಾರರ ಪ್ರಶ್ನೆಗೆ ಕಿಡಿಯಾದ ಸ್ಪಿನ್ನರ್ ರಶೀದ್ ಖಾನ್!

I dont play for Gulbadin or cricket board: Rashid Khan

ಸೌತಾಂಪ್ಟನ್, ಜೂನ್ 21: ನಾನು ತಂಡದ ನಾಯಕ ಗುಲ್ಬಾದಿನ್ ನೈಬ್ ಅಥವಾ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌(ಎಸಿಬಿ)ಗಾಗಿ ಆಡುತ್ತಿಲ್ಲ. ಬದಲಿಗೆ ನಾನು ಅಫ್ಘಾನಿಸ್ತಾನ ದೇಶಕ್ಕೋಸ್ಕರ ಆಡುತ್ತಿದ್ದೇನೆ' ಎಂದು ಅಫ್ಘಾನ್ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ತಂಡದ ನಾಯಕನ ಬದಲಾವಣೆ ಬಳಿಕ ಈಗಿನ ಕಪ್ತಾನ ಗುಲ್ಬಾದಿನ್ ನೈಬ್ ಜೊತೆ ಸಂಬಂಧ ಹೇಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ರಶೀದ್ ಕೊಂಚ ಖಾರವಾಗೇ ಪ್ರತಿಕ್ರಿಯಿಸಿದರು. ವಿಶ್ವಕಪ್ ಶುರುವಾಗಲು ಒಂದು ತಿಂಗಳು ಬಾಕಿಯಿರುವಾಗಲೇ ಅಫ್ಘಾನ್ ಕ್ರಿಕೆಟ್ ಬೋರ್ಡ್ ನಾಯಕನನ್ನು ಬದಲಿಸಿತ್ತು. ಅಸ್ಘರ್ ಅಫ್ಘಾನ್ ಸ್ಥಾನಕ್ಕೆ ಗುಲ್ಬಾದಿನ್ ನೈಬ್ ಅವರನ್ನು ತಂದಿತ್ತು.

ವಿಶ್ವಕಪ್: ಟಾಪ್ 10 ಅತ್ಯಧಿಕ ರನ್ ಪಟ್ಟಿಯಲ್ಲಿ ಒಬ್ಬನೇ ಭಾರತೀಯನಿಗೆ ಸ್ಥಾನವಿಶ್ವಕಪ್: ಟಾಪ್ 10 ಅತ್ಯಧಿಕ ರನ್ ಪಟ್ಟಿಯಲ್ಲಿ ಒಬ್ಬನೇ ಭಾರತೀಯನಿಗೆ ಸ್ಥಾನ

ಅಸ್ಘರ್ ಅಫ್ಘಾನ್ ಸ್ಥಾನಕ್ಕೆ ಗುಲ್ಬಾದಿನ್ ನೈಬ್ ಅವರನ್ನು ಆರಿಸಿದ್ದಕ್ಕೆ ರಶೀದ್ ಖಾನ್ ಮತ್ತು ಅನುಭವಿ ಆಲ್ ರೌಂಡರ್ ಮೊಹಮ್ಮದ್ ನಬಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆ ಅಫ್ಘಾನ್ ಕ್ರಿಕೆಟ್ ಬೋರ್ಡ್ ಕ್ಯಾರೇ ಅಂದಿರಲಿಲ್ಲ. ಬೋರ್ಡ್‌ನ ಈ ನಿಲುವೇ ಅಲ್ಲಿ ಏನೋ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ಒದಗಿಸಿತ್ತು.

ಕ್ರಿಕೆಟ್‌ ಆಟವೇ ಮಹಾನ್‌ ಗುರು ಎಂದ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಕೊಹ್ಲಿ!ಕ್ರಿಕೆಟ್‌ ಆಟವೇ ಮಹಾನ್‌ ಗುರು ಎಂದ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಕೊಹ್ಲಿ!

'ನನಗನ್ನಿಸುವ ಮಟ್ಟಿಗೆ ನನ್ನ ಮತ್ತು ಗುಲ್ಬಾದಿನ್ ಮಧ್ಯೆ ಯಾವ ಮನಸ್ತಾಪವೂ ಇಲ್ಲ. ಅಸ್ಫರ್‌ಗೆ ನೀಡಿದ ಬೆಂಬಲವನ್ನು ಗುಲ್ಬಾದಿನ್‌ಗೂ ನೀಡುತ್ತೇನೆ. ಮೈದಾನದಲ್ಲಿ ಅಸ್ಘರ್‌ಗೆ 50 ಶೇ. ಬೆಂಬಲಿಸಿದ್ದರೆ, ನೈಬ್‌ಗೆ 100 ಶೇ. ಬೆಂಬಲ ನೀಡಿತ್ತೇನೆ' ಎಂದು ಭಾರತ vs ಅಫ್ಘಾನ್ ಪಂದ್ಯಕ್ಕೂ ಮುನ್ನಾದಿನ (ಜೂನ್ 21) ಮಾತನಾಡಿದ ರಶೀದ್ ಹೇಳಿಕೊಂಡಿದ್ದಾರೆ.

ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!ವಿಶ್ವಕಪ್: ತೆಂಡೂಲ್ಕರ್, ಲಾರಾ ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ!

2019ರ ಐಸಿಸಿ ವಿಶ್ವಕಪ್‌ನಲ್ಲಿ ಅಫ್ಘಾನ್ ತಂಡದ ಪ್ರದರ್ಶನ ಚೆನ್ನಾಗಿಲ್ಲ. ಆಡಿರುವ ಐದೂ ಪಂದ್ಯಗಳನ್ನೂ ಸೋತು ಅಫ್ಘಾನ್ ಅಂಕಪಟ್ಟಿಯ ತಳ ಸೇರಿದೆ. ಹಿಂದಿನ ಪಂದ್ಯದಲ್ಲಿ ಗುಲ್ಬಾದಿನ ಬಳಗ ಆತಿಥೇಯ ಇಂಗ್ಲೆಂಡ್ ವಿರುದ್ಧ 150 ರನ್ ಸೋಲನುಭವಿಸಿತ್ತು. ದುರದೃಷ್ಟಕರ ಸಂಗತಿಯೆಂದರೆ ಈ ಪಂದ್ಯದಲ್ಲಿ ರಶೀದ್ 9 ಓವರ್‌ಗೆ ವಿಕೆಟ್ ಪಡೆಯದೆ 110 ರನ್ ನೀಡಿದ್ದರು.

Story first published: Friday, June 21, 2019, 18:00 [IST]
Other articles published on Jun 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X