ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಆಯೋಜನಾ ಸಮಯದ ಬಗ್ಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯೆ

‘I Don’t Think It’s A Good Idea,’ Akram On Hosting T20 World Cup

ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಕಪ್ ಆಯೋಜನೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಇನ್ನಷ್ಟು ಕಾಲ ಕಾಯಬೇಕಿ ಎಂದು ಅವರು ಹೇಳಿದ್ದಾರೆ. ಈ ವರ್ಷದ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ವಿಶ್ವಕಪ್ ಆಯೋಜನೆ ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಅತಂತ್ರವಾಗಿದೆ.

ವಿಶ್ವಕಪ್ ಆಯೋಜನೆ ಮಾಡುವ ಬಗ್ಗೆ ಐಸಿಸಿ ಕಳೆದ ತಿಂಗಳ ಅಂತ್ಯದಲ್ಲಿ ಸಭೆಯನ್ನು ಕರೆದಿತ್ತು. ಆದರೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿರಲಿಲ್ಲ. ಇದೇ ತಿಂಗಳ ಹತ್ತನೇ ತಾರೀಕಿನಂದು ಐಸಿಸಿ ಮತ್ತೆ ಸಭೆ ಸೇರಲಿದೆ. ಈ ಸಭೆಯಲ್ಲಿ ಐಸಿಸಿ ವಿಶ್ವಕಪ್ ಆಯೋಜನೆಯ ಬಗ್ಗೆ ತನ್ನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ವಿಶ್ವದ ಬೆಸ್ಟ್ ಯಾರ್ಕರ್ ಬೌಲರ್ ಯಾರು? ಬೂಮ್ರಾ ಹೇಳಿದ್ದಾರೆ ಉತ್ತರವಿಶ್ವದ ಬೆಸ್ಟ್ ಯಾರ್ಕರ್ ಬೌಲರ್ ಯಾರು? ಬೂಮ್ರಾ ಹೇಳಿದ್ದಾರೆ ಉತ್ತರ

ಈಗಾಗಲೇ ನಿಗದಿಯಾಗಿರುವ ದಿನಾಂಕದಂದು ಐಪಿಎಲ್ ಆಯೋಜನೆ ಬಗ್ಗೆ ವಾಸಿಮ್ ಅಕ್ರಮ್ ಪ್ರತಿಕ್ರಿಯಿಸಿದರು. ವೈಯಕ್ತಿಕವಾಗಿ ನನಗೆ ಅದು ಸರಿ ಎಂದು ಅನಿಸುವುದಿಲ್ಲ. ವೀಕ್ಷಕರಿಲ್ಲದೇ ವಿಶ್ವಕಪ್‌ನಂತಾ ಟೂರ್ನಿಯನ್ನು ಆಯೋಜನೆ ಮಾಡಲು ಹೇಗೆ ಸಾಧ್ಯ ಎಂದು ಅಕ್ರಮ್ ಪ್ರಸ್ನಿಸಿದ್ದಾರೆ.

ವಿಶ್ವಕಪ್ ಎಂದರೆ ಪ್ರೇಕ್ಷಕರು ತಮ್ಮ ತಂಡಗಳನ್ನು ಬೆಂಬಲಿಸಲು ಜಗತ್ತಿನ ಎಲ್ಲ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ವಿಶ್ವಕಪ್‌ನಂತಾ ಟೂರ್ನಿ ಆ ವಾತಾವರಣದಲ್ಲೇ ಆಡಬೇಕು. ಪ್ರೇಕ್ಷಕರಿಲ್ಲದೆ ಮುಚ್ಚಿದ ಬಾಗಿಲುಗಳ ಮಧ್ಯೆ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ವಾಸಿಮ್ ಅಕ್ರಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಯಾಚಿಂಗ್ ಅಭ್ಯಾಸಕ್ಕೆ ಅಪ್ಪ ಸಹಾಯ ಮಾಡುತ್ತಿದ್ದಾರೆ: ವೃದ್ಧಿಮಾನ್ ಸಹಾಕ್ಯಾಚಿಂಗ್ ಅಭ್ಯಾಸಕ್ಕೆ ಅಪ್ಪ ಸಹಾಯ ಮಾಡುತ್ತಿದ್ದಾರೆ: ವೃದ್ಧಿಮಾನ್ ಸಹಾ

ಇದೇ ಸಂದರ್ಭದಲ್ಲಿ ವಾಸಿಮ್ ಅಕ್ರಮ್ ಎಂಜಲು ಬಳಕೆಯ ನಿಷೇಧದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಎಂಜಲು ಬಳಕೆ ನಿಷೇಧ ಮಾಡಿದರೆ ಅದಕ್ಕೆ ಪ್ರತಿಯಾಗಿ ಸೂಕ್ತವಾದ ಪರಿಹಾರವನ್ನೂ ಬೌಲರ್‌ಗಳಿಗೆ ಸೂಚಿಸಬೇಕಾಗುತ್ತದೆ. ಇಲ್ಲವಾಗಲ್ಲಿ ಬೌಲರ್‌ಗಳ ಪಾಲಿಗೆ ಕಠಿಣವಾಗಿರುತ್ತದ ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ.

Story first published: Friday, June 5, 2020, 16:55 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X