ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನಲ್ಲಿ ತೆಗೆದುಕೊಳ್ಳದ ವಿಶ್ರಾಂತಿ, ಭಾರತ ಪರ ಆಡುವಾಗ ಏಕೆ? ಹಿರಿಯ ಆಟಗಾರರಿಗೆ ಸುನಿಲ್ ಗವಾಸ್ಕರ್ ಪ್ರಶ್ನೆ

Sunil gavaskar

ಟೀಂ ಇಂಡಿಯಾದಲ್ಲಿ ಪ್ರತಿ ಸರಣಿಗೆ ಆಟಗಾರರು ಹಾಗೂ ನಾಯಕತ್ವ ಬದಲಾವಣೆಯನ್ನ ಕಳೆದೊಂದು ವರ್ಷದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಅದ್ರಲ್ಲೂ ಹಿರಿಯ ಆಟಗಾರರು ಒಂದು ಸರಣಿ ಆಡಿದ್ರೆ, ಮತ್ತೊಂದು ಸರಣಿಯಲ್ಲಿ ವಿಶ್ರಾಂತಿ ಬಯಸಿದ್ದಾರೆ. ಬಿಸಿಸಿಐ ಕೂಡ ಆಟಗಾರರು ಬಯಸಿದ ರೀತಿಯಲ್ಲಿ ಅವಕಾಶ ನೀಡುತ್ತಿರುವ ಉದಾಹರಣೆಗಳನ್ನ ನಾವು ಕಾಣಬಹುದು.

ಐಪಿಎಲ್‌ 2022ರ ಸೀಸನ್‌ ಮುಗಿದ ಬಳಿಕ ಕಳೆದ ದಕ್ಷಿಣ ಆಫ್ರಿಕಾ, ಐರ್ಲೆಂಡ್ ವಿರುದ್ಧದ ಚುಟುಕು ಸರಣಿಗಳಲ್ಲಿ ಪ್ರಮುಖ ಸ್ಟಾರ್‌ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು. ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿ ಬಳಿಕ ವಿಂಡೀಸ್ ಪ್ರವಾಸದಲ್ಲಿ ಮತ್ತೆ ಸ್ಕ್ವಾಡ್ ಮತ್ತು ನಾಯಕತ್ವ ಬದಲಾಗಿದೆ. ಹೀಗಾಗಿ ಐಪಿಎಲ್‌ನಲ್ಲಿ ತೆಗೆದುಕೊಳ್ಳದ ವಿಶ್ರಾಂತಿ, ಅಂತರಾಷ್ಟ್ರೀಯ ಕ್ರಿಕೆಟ್‌ ಸರಣಿಗೆ ಏಕೆ? ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಪ್ರಶ್ನಿಸಿದ್ದಾರೆ.

ಹಿರಿಯ ಆಟಗಾರರಿಗೆ ಸುನಿಲ್ ಗವಾಸ್ಕರ್ ನೇರ ಪ್ರಶ್ನೆ

ಹಿರಿಯ ಆಟಗಾರರಿಗೆ ಸುನಿಲ್ ಗವಾಸ್ಕರ್ ನೇರ ಪ್ರಶ್ನೆ

ಟೀಂ ಇಂಡಿಯಾದ ಹಿರಿಯ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲವು ಆಟಗಾರರು ಈ ವಿಶ್ರಾಂತಿ ಮೊರೆ ಹೋಗುವುದು ಎಷ್ಟು ಸರಿ ಎಂಬುದು ಗವಾಸ್ಕರ್ ಪ್ರಶ್ನೆಯಾಗಿದೆ. ಅದ್ರಲ್ಲೂ ರನ್‌ ಕಲೆಹಾಕಲು ವಿಫಲರಾಗಿರುವ ಕೊಹ್ಲಿ ಮತ್ತು ರೋಹಿತ್‌ಗೆ ಏಕೆ ವಿಶ್ರಾಂತಿ ಎಂಬುದು ಗವಾಸ್ಕರ್ ಅಭಿಪ್ರಾಯವಾಗಿದೆ.

ವಿಂಡೀಸ್‌ ವಿರುದ್ಧದ ಸರಣಿಗೂ ಸ್ಟಾರ್ ಆಟಗಾರರಿಲ್ಲ!

ವಿಂಡೀಸ್‌ ವಿರುದ್ಧದ ಸರಣಿಗೂ ಸ್ಟಾರ್ ಆಟಗಾರರಿಲ್ಲ!

ಮುಂಬರುವ ವೆಸ್ಟ್‌ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಜಸ್ಪ್ರೀತ್ ಬುಮ್ರಾ ಜೊತೆಗೆ ವಿರಾಟ್ ಕೊಹ್ಲಿಗೆ ವಿಂಡೀಸ್ ವಿರುದ್ಧದ 50 ಓವರ್‌ಗಳ ಫಾರ್ಮೆಟ್‌ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಶಿಖರ್ ಧವನ್ ನಾಯಕರಾಗಿ ತಂಡವನ್ನ ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್‌ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪ್ರಶ್ನಿಸಿದವರಿಗೆ ಜಾಡಿಸಿದ ಬಾಲ್ಯದ ಕೋಚ್

20 ಓವರ್‌ಗಳಿಗೆ ಏಕೆ ವಿಶ್ರಾಂತಿ ಎಂದ ಗವಾಸ್ಕರ್

20 ಓವರ್‌ಗಳಿಗೆ ಏಕೆ ವಿಶ್ರಾಂತಿ ಎಂದ ಗವಾಸ್ಕರ್

ಕ್ರಿಕೆಟರ್‌ಗಳು ಪದೇ ಪದೇ ವಿಶ್ರಾಂತಿ ಪಡೆಯುವುದು ಏಕೆ ಎಂಬುದು ಗವಾಸ್ಕರ್ ಪ್ರಶ್ನೆಯಾಗಿದೆ. 20 ಓವರ್‌ಗಳ ಪಂದ್ಯವನ್ನಾಡಲು ಹೆಚ್ಚಿನ ತೊಂದರೆಯಾಗದು ಮತ್ತು ದೈಹಿಕವಾಗಿ ಯಾವುದೇ ಪರಿಣಾಮ ಕೂಡ ಬೀರದು. ಹೀಗಿರುವಾಗ ಸ್ಟಾರ್ ಆಟಗಾರರು ಈ ರೀತಿಯಾಗಿ ಗೈರಾಗುವುದು ಎಷ್ಟು ಸರಿ ಎಂಬುದು ಗವಾಸ್ಕರ್ ಅಭಿಪ್ರಾಯವಾಗಿದೆ.

"ನೋಡಿ (ಭಾರತದ ಪಂದ್ಯಗಳ ಸಮಯದಲ್ಲಿ) ಆಟಗಾರರು ವಿಶ್ರಾಂತಿ ಪಡೆಯುವುದನ್ನು ನಾನು ಒಪ್ಪುವುದಿಲ್ಲ. ಇಲ್ಲವೇ ಇಲ್ಲ. ನೀವು ಭಾರತಕ್ಕಾಗಿ ಆಡುತ್ತಿದ್ದೀರಿ. ನೀವು ಐಪಿಎಲ್ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಆದರೆ ಭಾರತಕ್ಕಾಗಿ ಆಡುವಾಗ ವಿಶ್ರಾಂತಿ ಪಡೆಯುವುದನ್ನ ನಾನು ಒಪ್ಪುವುದಿಲ್ಲ. ನೀವು ಭಾರತಕ್ಕಾಗಿ ಆಡಬೇಕಾಗುತ್ತದೆ. ವಿಶ್ರಾಂತಿಯ ಬಗ್ಗೆ ಮಾತನಾಡಬೇಡಿ. ಟಿ20 ಇನ್ನಿಂಗ್ಸ್‌ನಲ್ಲಿ ಕೇವಲ 20 ಓವರ್‌ಗಳಿರುತ್ತವೆ. ಅದು ನಿಮ್ಮ ದೇಹಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಟೆಸ್ಟ್ ಪಂದ್ಯಗಳಲ್ಲಿ, ಮನಸ್ಸು ಮತ್ತು ದೇಹವು ಹೆಚ್ಚು ಕಂಟ್ರೋಲ್ ತೆಗೆದುಕೊಳ್ಳುತ್ತದೆ, ಆದರೆ ಟಿ 20 ಕ್ರಿಕೆಟ್‌ನಲ್ಲಿ (ಆಡುವಲ್ಲಿ) ಹೆಚ್ಚಿನ ಸಮಸ್ಯೆ ಇಲ್ಲ, " ಎಂದು ಗವಾಸ್ಕರ್ ಟೀಕಿಸಿದ್ದಾರೆ.

ಸ್ಕ್ಯಾನಿಂಗ್ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಮೊದಲ ODI ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನ

ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವವರ ಗ್ರೇಡ್ ಕಡಿಮೆ ಮಾಡಿ!

ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುವವರ ಗ್ರೇಡ್ ಕಡಿಮೆ ಮಾಡಿ!

ಬಿಸಿಸಿಐ ವಾರ್ಷಿಕ ಒಪ್ಪಂದದ ಪ್ರಕಾರ ಗ್ರೇಡ್ Aನಲ್ಲಿ ಇರುವವರು ಮತ್ತು A+ನಲ್ಲಿ ಇರುವಂತಹ ಆಟಗಾರರು ಹೆಚ್ಚಿನ ವೇತನ ಪಡೆಯುತ್ತಾರೆ. ಹೀಗಿರುವಾಗ ಇಂತಹ ಆಟಗಾರರು ಪದೇ ಪದೇ ವಿಶ್ರಾಂತಿ ಪಡೆಯುವುದೇ ಆದಲ್ಲಿ ಹೆಚ್ಚಿನ ಹಣ ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಹೆಚ್ಚಿನ ವಿಶ್ರಾಂತಿ ಬಯಸಿದ್ದಲ್ಲಿ ಅಂತಹ ಆಟಗಾರರ ಗ್ರೇಡ್‌ ಅನ್ನು ತಗ್ಗಿಸಿ ಎಂದು ಸಲಹೆ ನೀಡಿದ್ದಾರೆ.

"ಬಿಸಿಸಿಐ ಈ ವಿಶ್ರಾಂತಿ ಪರಿಕಲ್ಪನೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಎಲ್ಲಾ ಗ್ರೇಡ್ ಎ ಕ್ರಿಕೆಟಿಗರು ಉತ್ತಮ ಒಪ್ಪಂದಗಳನ್ನು ಪಡೆದಿದ್ದಾರೆ. ಅವರು ಪ್ರತಿ ಪಂದ್ಯಕ್ಕೂ ಪಾವತಿಯನ್ನು ಸ್ವೀಕರಿಸುತ್ತಾರೆ. ಯಾವುದಾದರೂ ಕಂಪನಿಯ ಸಿಇಒ, ಅಥವಾ ಎಂಡಿಗಳು ಇಷ್ಟು ಸಮಯ ಬಿಡುವು ಪಡೆದಿದ್ದರೆ ಹೇಳಿ? ಭಾರತೀಯ ಕ್ರಿಕೆಟ್ ಹೆಚ್ಚು ವೃತ್ತಿಪರವಾಗಬೇಕಾದರೆ, ಒಂದು ಗೆರೆ ಎಳೆಯಬೇಕು ಎಂದು ನಾನು ಭಾವಿಸುತ್ತೇನೆ.

ನೀವು ವಿಶ್ರಾಂತಿ ಪಡೆಯಲು ಬಯಸಿದರೆ, ನಿಮ್ಮ ವೇತನವನ್ನು ಕಡಿಮೆ ಮಾಡಬೇಕಾಗುತ್ತದೆ. ನೀವು ಆಡಲು ಬಯಸದ ಕಾರಣ ನೀವು ವಿಶ್ರಾಂತಿ ತೆಗೆದುಕೊಳ್ಳುತ್ತೀರಿ. ಆದರೆ ನಾನು ಭಾರತ ತಂಡದಲ್ಲಿ ಆಡಲು ಬಯಸುವುದಿಲ್ಲ ಎಂದು ಯಾರಾದರೂ ಬಾಯ್ಬಿಟ್ಟು ಹೇಳಬಹುದೇ? ಅದಕ್ಕಾಗಿಯೇ ನಾನು ಈ ಪರಿಕಲ್ಪನೆಯನ್ನು ಒಪ್ಪುವುದಿಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.

Story first published: Tuesday, July 12, 2022, 16:47 [IST]
Other articles published on Jul 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X