ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಶಾಂತ್ ಶರ್ಮಾ ಬದಲು ಸಿರಾಜ್ ಕಣಕ್ಕಿಳಿದ್ರೆ ಭಾರತಕ್ಕೆ ಪ್ಲಸ್ ಪಾಯಿಂಟ್: MSK ಪ್ರಸಾದ್

Mohammad siraj
ಮೊಹಮ್ಮದ್ ಸಿರಾಜ್ ಅವರನ್ನು ಹಾಡಿ ಹೊಗಳಿದ ಸಚಿನ್ ತೆಂಡೂಲ್ಕರ್ | Oneindia Kannada

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಡಿಸೆಂಬರ್ 26ರಂದು ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್‌ಪಾರ್ಕ್‌ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಲಿದ್ದು, ಮೊಹಮ್ಮದ್ ಸಿರಾಜ್‌ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಬೇಕು ಎಂದು ಆಟಗಾರರ ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವನ್ನು ಸಾಧಿಸಬೇಕಾದ್ರೆ, ಟೀಂ ಇಂಡಿಯಾ ಪ್ರಬಲ ಬೌಲಿಂಗ್ ಪಡೆಯನ್ನೇ ಕಣಕ್ಕಿಳಿಸಬೇಕು. ಇಲ್ಲದಿದ್ರೆ ಕಬ್ಬಿಣದ ಕಡಲೆಯಾಗಿರುವ ಗೆಲುವು ದಕ್ಕುವುದು ಅಸಾಧ್ಯದ ಮಾತು ಎಂಬುದು ಎಂಎಸ್‌ಕೆ ಮಾತಿನ ಹಿಂದಿನ ಮರ್ಮವಾಗಿದೆ.

ಭಾರತವು ಐದು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವುದೇ ಆದ್ರೆ, ಶಾರ್ದೂಲ್ ಠಾಕೂರ್‌ರನ್ನ ಕಣಕ್ಕಿಳಿಸಬೇಕು. ಇವರು ಬೌಲಿಂಗ್ ಮಾಡುವುದರ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರು ಎಂದು ಎಂಎಸ್‌ಕೆ ಅಭಿಪ್ರಾಯವಾಗಿದೆ.

ಉತ್ತಮ ಫಾರ್ಮ್‌ನಲ್ಲಿರುವ ಶಾರ್ದೂಲ್ ಠಾಕೂರ್

ಉತ್ತಮ ಫಾರ್ಮ್‌ನಲ್ಲಿರುವ ಶಾರ್ದೂಲ್ ಠಾಕೂರ್

ಬೌಲಿಂಗ್ ಆಲ್‌ರೌಂಡರ್ ಈ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಮೂರು ಟೆಸ್ಟ್‌ಗಳಲ್ಲಿ 22.07 ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 37.20 ರ ಬ್ಯಾಟಿಂಗ್ ಸರಾಸರಿಯಲ್ಲಿ 232 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳೂ ಸೇರಿವೆ. ತುಂಬಾ ಮೆಚ್ಚುಗೆಯ ವಿಷಯವೆಂದ್ರೆ ಅವರ ಎಲ್ಲಾ ಅರ್ಧ ಶತಕಗಳು ತಂಡವು ಸಂದಿಗ್ದ ಪರಿಸ್ಥಿತಿಯಲ್ಲಿದ್ದಾಗ ಬಂದಿವೆ.

ದ್ರಾವಿಡ್ ಸೋಲಿನ ಭಯದೊಂದಿಗೆ ಆಡುತ್ತಿದ್ದರು, ಆದರೆ ವಿರಾಟ್ ಹಾಗಲ್ಲ ಎಂದ ಕೊಹ್ಲಿಯ ಗುರು!

ಟೀಂ ಇಂಡಿಯಾ ಗೆಲುವಿನಲ್ಲಿ ಕೊಡುಗೆ ನೀಡಿದ್ದ ಮುಂಬೈ ಆಲ್‌ರೌಂಡರ್

ಟೀಂ ಇಂಡಿಯಾ ಗೆಲುವಿನಲ್ಲಿ ಕೊಡುಗೆ ನೀಡಿದ್ದ ಮುಂಬೈ ಆಲ್‌ರೌಂಡರ್

ಶಾರ್ದೂಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯಂತ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ್ದರು. ಅವರು ಬೌಲ್‌ನೊಂದಿಗೆ ಗಬ್ಬಾ ಮತ್ತು ಓವಲ್‌ ಪಿಚ್‌ನಲ್ಲಿ ಬ್ಯಾಟ್‌ನೊಂದಿಗೆ ತಮ್ಮ ತಂಡಕ್ಕೆ ನೆರವಾಗುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿನಿರ್ಣಾಯಕ ಪಾತ್ರವನ್ನು ವಹಿಸಿದರು. ಹೀಗಾಗಿ, ಮಾಜಿ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್ ಅವರು ಸೆಂಚುರಿಯನ್‌ನಲ್ಲಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಶಾರ್ದೂಲ್‌ರನ್ನ ಕಾಣಲು ಬಯಸಿದ್ದಾರೆ.

''ಟೀಂ ಇಂಡಿಯಾ ಐದು ಬೌಲರ್‌ಗಳೊಂದಿಗೆ ಹೋದರೆ ಶಾರ್ದೂಲ್ ಠಾಕೂರ್ ಅತ್ಯುತ್ತಮ ಆಯ್ಕೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಅವರು ಸ್ಥಿರವಾದ ನಂ.7 ಬ್ಯಾಟರ್‌ನ ಆಯ್ಕೆಯನ್ನು ಸಹ ನೀಡುತ್ತಾರೆ. ಜೊತೆಗೆ ನಮ್ಮಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಇದ್ದಾರೆ" ಎಂದು ಇಂಡಿಯಾ ಟುಡೇ ಉಲ್ಲೇಖಿಸಿದಂತೆ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ಹೀಗಾಗಿ, 30 ವರ್ಷ ವಯಸ್ಸಿನ ಶಾರ್ದೂಲ್ ಕೆಳಕ್ರಮಾಂಕದಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಬಲಪಡಿಸಬಹುದು ಎಂಬುದನ್ನ ತಿಳಿಸಿದ್ದಾರೆ.

ಇಶಾಂತ್ ಶರ್ಮಾ ಬದಲು ಸಿರಾಜ್ ಕಣಕ್ಕಿಳಿಯಬೇಕು

ಇಶಾಂತ್ ಶರ್ಮಾ ಬದಲು ಸಿರಾಜ್ ಕಣಕ್ಕಿಳಿಯಬೇಕು

ಟೀಂ ಇಂಡಿಯಾದಲ್ಲಿ ದೀರ್ಘ ಸ್ವರೂಪದ ಫಾರ್ಮೆಟ್‌ನಲ್ಲಿ ಹಲವು ವರ್ಷದಿಂದ ಆಡುತ್ತಿರುವ ಇಶಾಂತ್ ಶರ್ಮಾ ಬದಲು , ಅದ್ಭುತ ಫಾಮ್‌ನಲ್ಲಿರುವ ಯುವ ವೇಗಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಬೇಕು ಎಂದು ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ. 27 ವರ್ಷದ ಸಿರಾಜ್‌ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ಪಡೆದ್ರೆ ಟೀಂ ಇಂಡಿಯಾಗೆ ಪ್ಲಸ್ ಪಾಯಿಂಟ್ ಎಂದಿದ್ದಾರೆ.

"ಈ ಸಾಲಿನಲ್ಲಿ ನಾಲ್ವರು ಬೌಲರ್‌ಗಳು ಈಗ ಎಲ್ಲರೂ ಫಿಟ್ ಆಗಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದು ಇಶಾಂತ್ ಅವರನ್ನು ಸಿರಾಜ್‌ ಬದಲು ಪರಿಗಣಿಸಲಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ, "ಎಂದು ಅವರು ಹೇಳಿದರು.

2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 8 ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ

2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 8 ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ

ಮಧ್ಯಮ ವೇಗಿ ಇಶಾಂತ್ ಶರ್ಮಾ, 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 8 ವಿಕೆಟ್ ಪಡೆದಿದ್ದರು. ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಭಾಗಿಯಾಗಿದ್ದ ಇಶಾಂತ್, 18.75ರ ಬೌಲಿಂಗ್ ಸರಾಸರಿಯಲ್ಲಿ 8 ವಿಕೆಟ್ ಪಡೆದು ಮಿಂಚಿದ್ದಾರೆ. ಈತನ ಬೆಸ್ಟ ಬೌಲಿಂಗ್ ಇನ್ನಿಂಗ್ಸ್‌ವೊಂದರಲ್ಲಿ 3/46 ಆಗಿದ್ದು, ಪಂದ್ಯದಲ್ಲಿ 86 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ.

Story first published: Thursday, December 23, 2021, 17:07 [IST]
Other articles published on Dec 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X