ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೌತಮ್ ಗಂಭೀರ್ ವೃತ್ತಿ ಬದುಕು ಅಂತ್ಯಗೊಳಿಸಿದ್ದು ನಾನೇ ಎಂದ ಪಾಕ್ ವೇಗಿ!

ಗಂಭೀರ್ ಕ್ರಿಕೆಟ್ ನಿಂದ ನಿವೃತ್ತಿ ಪಡೆಯಲು ಪಾಕ್ ಅಟಗಾರ ಕಾರಣ. | Gautam Gambhir | Oneindia Kannada
I ended Gautam Gambhir’s white-ball career: Muhammad Irfan

ನವದೆಹಲಿ, ಅಕ್ಟೋಬರ್ 7: ಭಾರತದ ಕ್ರಿಕೆಟ್‌ನಲ್ಲಿ ಗೌತಮ್ ಗಂಭೀರ್ ಅತ್ಯುತ್ತಮ ಕ್ರಿಕೆಟರ್‌ಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದವರು. ಅದರಲ್ಲೂ ನಿಯಮಿತ ಓವರ್‌ಗಳ ಕ್ರಿಕೆಟ್‌ ಮಾದರಿಯಲ್ಲಿ ಗಂಭೀರ್ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದವರು.

ರೋಹಿತ್, ಧೋನಿ ಮೀರಿಸಿ ಟಿ20ಐ ವಿಶೇಷ ದಾಖಲೆ ಬರೆದ ಹರ್ಮನ್‌ಪ್ರೀತ್!ರೋಹಿತ್, ಧೋನಿ ಮೀರಿಸಿ ಟಿ20ಐ ವಿಶೇಷ ದಾಖಲೆ ಬರೆದ ಹರ್ಮನ್‌ಪ್ರೀತ್!

ತಾನು ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿ ರಾಜಕ್ಕೀಯಕ್ಕೆ ಇಳಿಯುವುದಕ್ಕೂ ಮುನ್ನ ಗಂಭೀರ್ 147 ಏಕದಿನ ಪಂದ್ಯಗಳಲ್ಲಿ 5,238 ರನ್, 11 ಶತಕ, 34 ಅರ್ಧ ಶತಕ ಬಾರಿಸಿದ್ದರು. 37 ಟಿ20ಐ ಪಂದ್ಯಗಳಲ್ಲಿ 932 ರನ್ ದಾಖಲೆ ಹೊಂದಿದ್ದರು.

ಕಪಿಲ್ ದೇವ್, ಜಾವಗಲ್ ಶ್ರೀನಾಥ್‌ ದಾಖಲೆ ಪಟ್ಟಿ ಸೇರಿದ ಮೊಹಮ್ಮದ್ ಶಮಿಕಪಿಲ್ ದೇವ್, ಜಾವಗಲ್ ಶ್ರೀನಾಥ್‌ ದಾಖಲೆ ಪಟ್ಟಿ ಸೇರಿದ ಮೊಹಮ್ಮದ್ ಶಮಿ

ಅಲ್ಲದೆ 2007ರ ಟಿ20ಐ ವಿಶ್ವಕಪ್ ವಿಜೇತ ತಂಡದ ಸದಸ್ಯರಲ್ಲಿ ಗಂಭೀರ್ ಕೂಡ ಒಬ್ಬರು. ಇಂಥ ಪ್ರತಿಭಾನ್ವಿತ ಕ್ರಿಕೆಟಿಗ ಆಟ ನಿಲ್ಲಿಸಲು ಪಾಕ್ ಆಟಗಾರ ಕಾರಣಾನ?

ಮೊಹಮ್ಮದ್ ಇರ್ಫಾನ್ ಹೇಳಿಕೆ

ಮೊಹಮ್ಮದ್ ಇರ್ಫಾನ್ ಹೇಳಿಕೆ

2011ರ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗಂಭೀರ್ 97 ರನ್‌ ಕೊಡುಗೆಯಿಂದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಆದರೆ ಶ್ರೇಷ್ಠ ಕ್ರಿಕೆಟಿಗ ಗಂಭೀರ್ ವೃತ್ತಿ ಬದುಕು ಕೊನೆಗೊಳ್ಳಲು ತಾನು ಕಾರಣ ಎಂದು ಪಾಕಿಸ್ತಾನ ವೇಗಿ ಮುಹಮ್ಮದ್ ಇರ್ಫಾನ್ ಹೇಳಿಕೊಂಡಿದ್ದಾರೆ.

4 ಬಾರಿ ಗಂಭೀರ್ ಔಟ್

4 ಬಾರಿ ಗಂಭೀರ್ ಔಟ್

ಸಂದರ್ಶನವೊಂದರಲ್ಲಿ ಮಾತನಾಡಿದ ಇರ್ಫಾನ್, 2012ರ ದ್ವಿಪಕ್ಷೀಯ ಸರಣಿಯಲ್ಲಿ ತನ್ನ ಬೌಲಿಂಗ್‌ಗೆ ಗಂಭೀರ್ ಅವರಿಗೆ ಆಡಲಾಗುತ್ತಿರಲಿಲ್ಲ. ಹೀಗಾಗಿಯೇ ಗಂಭೀರ್ ನಿಯಮಿತ ಓವರ್‌ಗಳ ಕ್ರಿಕೆಟ್‌ ಬದುಕನ್ನು ನಿಲ್ಲಿಸಿದರು ಎಂದಿದ್ದಾರೆ. 7 ಅಡಿ 1 ಇಂಚು ಎತ್ತರವಿದ್ದ ಇರ್ಫಾನ್, ಆ ದ್ವಿಪಕ್ಷೀಯ ಸರಣಿಯಲ್ಲಿ (ಟಿ20 ಮತ್ತು ಏಕದಿನ) 4 ಬಾರಿ ಗಂಭೀರ್ ಅವರನ್ನು ಔಟ್ ಮಾಡಿದ್ದರು.

ಬ್ಯಾಟಿಂಗ್‌ ಮಾಡಲಾಗುತ್ತಿರಲಿಲ್ಲ

ಬ್ಯಾಟಿಂಗ್‌ ಮಾಡಲಾಗುತ್ತಿರಲಿಲ್ಲ

'ನಾನು ಭಾರತದ ವಿರುದ್ಧ ಆಡುವಾಗ ಅವರಿಗೆ ನನ್ನೆದುರು ಸರಿಯಾಗಿ ಬ್ಯಾಟಿಂಗ್‌ ಮಾಡಲಾಗುತ್ತಿರಲಿಲ್ಲ. ನಾನು ಎತ್ತರವಾಗಿದ್ದರಿಂದ ನನ್ನ ಎಸೆತವನ್ನು ಅಂದಾಜಿಲಾಗುತ್ತಿಲ್ಲ, ನನ್ನ ಎಸೆತದ ವೇಗವನ್ನು ಗುರುತಿಸಲಾಗುತ್ತಿಲ್ಲ ಎಂದು 2012ರ ಸರಣಿ ವೇಳೆ ಭಾರತದ ಕೆಲ ಆಟಗಾರರು ನನ್ನಲ್ಲಿ ಹೇಳಿಕೊಂಡಿದ್ದರು,' ಎಂದು ಸಮಾ ಚಾನೆಲ್ ಜೊತೆ ಮಾತನಾಡುತ್ತ ಇರ್ಫಾನ್ ಹೇಳಿದ್ದಾರೆ.

ಆತ ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದ

ಆತ ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದ

'ಪಂದ್ಯ ಅಥವಾ ಅಭ್ಯಾಸದ ವೇಳೆ ಆತ (ಗಂಭೀರ್) ನನ್ನನ್ನು ಎದುರುಗೊಳ್ಳಲು ಇಷ್ಟಪಡುತ್ತಿರಲಿಲ್ಲ. ಮುಖ ಮುಖ ನೋಡಿ ಮಾತನಾಡಲೂ ಆತ ತಪ್ಪಿಸಿಕೊಳ್ಳುತ್ತಿದ್ದ. 2012ರ ನಿಯಮಿತ ಓವರ್‌ಗಳ ಸರಣಿಯಲ್ಲಿ ನಾನು ಗಂಭೀರ್‌ನನ್ನು 4 ಬಾರಿ ಔಟ್ ಮಾಡಿದ್ದನ್ನು ನೆನಪಿಸಿಕೊಳ್ಳಬಲ್ಲೆ,' ಎಂದು ಮುಹಮ್ಮದ್ ವಿವರಿಸಿದ್ದಾರೆ. ಗಂಭೀರ್ ಅದೇ ಸರಣಿಯಲ್ಲಿ ಪಾಕ್ ವಿರುದ್ಧ ಕೊನೇ ಟಿ20 ಪಂದ್ಯವನ್ನಾಡಿದ್ದರು.

Story first published: Monday, October 7, 2019, 13:29 [IST]
Other articles published on Oct 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X