ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಸಿರಾಜ್ ನಡೆದುಕೊಂಡ ರೀತಿ ಸರಿಯಲ್ಲ ಎಂದು ಬುದ್ಧಿ ಹೇಳಿದ ದಿನೇಶ್ ಕಾರ್ತಿಕ್

IND vs ENG: I feel it was unnecessary for Mohammed Siraj to shush batsmen after dismissing them says Dinesh Karthik

ಮೊಹಮ್ಮದ್ ಸಿರಾಜ್ ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಸ್ಟ್ರೇಲಿಯಾ ವಿರುದ್ಧ ಅತ್ಯದ್ಭುತ ಪ್ರದರ್ಶನವನ್ನು ನೀಡಿದ ಮೊಹಮ್ಮದ್ ಸಿರಾಜ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಈ ಹಿಂದೆ ಸಿರಾಜ್ ಬೌಲಿಂಗ್ ನೋಡಿ ಕಾಲೆಳೆಯುತ್ತಿದ್ದವರೆಲ್ಲ ಸಿರಾಜ್ ಬೌಲಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಸಿರಾಜ್ ಖಾಯಂ ಆಟಗಾರನ ಸ್ಥಾನ ಪಡೆದುಕೊಳ್ಳುವಂತಹ ಆಟಗಾರ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಭಾರತ vs ಇಂಗ್ಲೆಂಡ್: ಟೆಸ್ಟ್ ಸರಣಿಯಿಂದ ಹೊರಬಿದ್ದು ಭಾವುಕರಾದ ಸ್ಟುವರ್ಟ್ ಬ್ರಾಡ್ಭಾರತ vs ಇಂಗ್ಲೆಂಡ್: ಟೆಸ್ಟ್ ಸರಣಿಯಿಂದ ಹೊರಬಿದ್ದು ಭಾವುಕರಾದ ಸ್ಟುವರ್ಟ್ ಬ್ರಾಡ್

ಹೀಗೆ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಸಹ ಮಿಂಚಿದರು. ಈ ಕಾರಣದಿಂದಲೇ ಮೊಹಮ್ಮದ್ ಸಿರಾಜ್ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಪ್ರವಾಸದಲ್ಲಿ ಯಶಸ್ವಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡರು.

ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಹೆಚ್ಚು ಪಂದ್ಯ ಗೆದ್ದಿರುವರಾರು ಗೊತ್ತಾ?ಭಾರತ vs ಇಂಗ್ಲೆಂಡ್: ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಹೆಚ್ಚು ಪಂದ್ಯ ಗೆದ್ದಿರುವರಾರು ಗೊತ್ತಾ?

ಜಾನಿ ಬೇರ್‌ಸ್ಟೋ ವಿಕೆಟ್ ಪಡೆದು ವಿಭಿನ್ನವಾಗಿ ಸಂಭ್ರಮಿಸಿದ್ಧ ಮೊಹಮ್ಮದ್ ಸಿರಾಜ್

ಜಾನಿ ಬೇರ್‌ಸ್ಟೋ ವಿಕೆಟ್ ಪಡೆದು ವಿಭಿನ್ನವಾಗಿ ಸಂಭ್ರಮಿಸಿದ್ಧ ಮೊಹಮ್ಮದ್ ಸಿರಾಜ್

ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡ ಮೊಹಮ್ಮದ್ ಸಿರಾಜ್ 3 ವಿಕೆಟ್‍ಗಳನ್ನು ಪಡೆದರು. ಮೊದಲನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‍ಗಳನ್ನು ಪಡೆದರು. ರೋರಿ ಬರ್ನ್ ಮತ್ತು ಜಾನಿ ಬೇರ್‌ಸ್ಟೋ ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಜಾನಿ ಬೇರ್‌ಸ್ಟೋ ವಿಕೆಟ್ ಪಡೆದ ಸಂದರ್ಭದಲ್ಲಿ 'ಶ್...' ಎಂದು ಬೇರ್‌ಸ್ಟೋ ಮುಂದೆ ಹೋಗಿ ಸಂಭ್ರಮಾಚರಣೆಯನ್ನು ಮಾಡಿದ್ದರು.

ಮೊಹಮ್ಮದ್ ಸಿರಾಜ್ ಸಂಭ್ರಮಿಸಿದ್ದು ಅನಗತ್ಯ

ಮೊಹಮ್ಮದ್ ಸಿರಾಜ್ ಸಂಭ್ರಮಿಸಿದ್ದು ಅನಗತ್ಯ

ಮೊಹಮ್ಮದ್ ಸಿರಾಜ್ ಮಾಡಿದ ಈ ಸಂಭ್ರಮಾಚರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಸಿರಾಜ್ ಮಾಡಿದ ಈ ಸಂಭ್ರಮಾಚರಣೆಯ ಕುರಿತು ಮಾತನಾಡಿರುವ ದಿನೇಶ್ ಕಾರ್ತಿಕ್ ಸಿರಾಜ್ ಮಾಡಿದ ಸಂಭ್ರಮಾಚರಣೆ ಅನಗತ್ಯವಾದದ್ದು ಎಂದು ಟೀಕಿಸಿದ್ದಾರೆ. 'ಜಾನಿ ಬೇರ್‌ಸ್ಟೋ ವಿಕೆಟ್ ಪಡೆದ ನಂತರ ಮೊಹಮ್ಮದ್ ಸಿರಾಜ್ ಮಾಡಿದ ಸಂಭ್ರಮಾಚರಣೆ ಅನಗತ್ಯವಾದದ್ದು, ವಿಕೆಟ್ ತೆಗೆದ ಕೂಡಲೇ ಬ್ಯಾಟ್ಸ್‌ಮನ್‌ ವಿರುದ್ಧ ಆ ಬೌಲರ್ ಗೆದ್ದಂತೆ ಹೀಗಾಗಿ ವಿಕೆಟ್ ತೆಗೆದ ನಂತರವೂ ಅನಗತ್ಯವಾಗಿ ಸಂಭ್ರಮಿಸುವುದು ಸರಿಯಲ್ಲ' ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಈಗಿನ ಟೀಮ್ ಇಂಡಿಯಾ ಆಟಗಾರರು ಎದುರಾಳಿಗಳಿಗೆ ಹೆದರುವುದಿಲ್ಲ

ಈಗಿನ ಟೀಮ್ ಇಂಡಿಯಾ ಆಟಗಾರರು ಎದುರಾಳಿಗಳಿಗೆ ಹೆದರುವುದಿಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ದಿನೇಶ್ ಕಾರ್ತಿಕ್ ಈಗಿನ ಟೀಮ್ ಇಂಡಿಯಾದ ಆಟಗಾರರು ಎದುರಾಳಿ ಕ್ರಿಕೆಟಿಗರಿಗೆ ಹೆದರುವುದಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾದ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಕೋಪಗೊಂಡ ನಿದರ್ಶನಗಳು ಮುಂದಿವೆ. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ತಮ್ಮ ಕೋಪವನ್ನು ಎದುರಾಳಿಗಳ ಮುಂದೆ ಹೊರಹಾಕುವುದಿಲ್ಲ, ಆದರೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಕೆಎಲ್ ರಾಹುಲ್ ಎದುರಾಳಿಗಳ ಮುಂದೆಯೇ ತಮ್ಮ ಕೋಪವನ್ನು ಹೊರಹಾಕಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಹಾಗಂತ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ಕೋಪ ಬರುವುದಿಲ್ಲ ಎಂದಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

Sachin Tendulkar ಜೊತೆ ಆ ರೀತಿ ನಡೆದುಕೊಂಡಿದ್ದಕ್ಕೆ ಭಾರತೀಯರಿಗೆ ಹೆದರಿದ್ದ ಪಾಕ್ ವೇಗಿ | Oneindia Kannada

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಈ ಆಟಗಾರ ಇನ್ನೂ ಚೆನ್ನಾಗಿ ಆಟವಾಡಬೇಕಿದೆ ಎಂದ ಕೊಹ್ಲಿ

Story first published: Thursday, August 12, 2021, 21:52 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X