ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೇ ಗೊತ್ತಿಲ್ಲದೆ ನನಗೆ ಕೊರೊನಾ ತಗುಲಿತ್ತು: ಮಾರ್ಕ್ ಬೌಚರ್

I had virus without knowing it: South Africa coach Mark Boucher

ಕೇಪ್‌ಟೌನ್: ನನಗೇ ಗೊತ್ತಿಲ್ಲದಂತೆ ನಾನು ಕೊರೊನಾವೈರಸ್‌ಗೆ ತುತ್ತಾಗಿದ್ದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಗುರುವಾರ (ನವೆಂಬರ್ 19) ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಸರಣಿಗೂ ಮುನ್ನ ಮಾತನಾಡಿದ ಬೌಚರ್ ಇದನ್ನು ಹೇಳಿಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಡಿ ದಾಟುವಾಸೆ: ನೇಥನ್ ಲಿಯಾನ್ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಡಿ ದಾಟುವಾಸೆ: ನೇಥನ್ ಲಿಯಾನ್

ನವೆಂಬರ್ 27ರಿಂದ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಪ್ರವಾಸ ಸರಣಿ ಆರಂಭವಾಗಲಿದೆ. ಕೇಪ್‌ಟೌನ್‌ನಲ್ಲಿ ಟಿ20ಐ ಪಂದ್ಯದ ಮೂಲಕ ಸರಣಿ ಶುರುವಾಗಲಿದೆ. ಇತ್ತಂಡಗಳ ಸರಣಿ ಆರಂಭದ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು. ಸರಣಿ ಸಂಬಂಧ ದಕ್ಷಿಣ ಆಫ್ರಿಕಾ ಆಟಗಾರರು ಒಂದೆಡೆ ಸೇರಿಕೊಂಡಾಗ ಸೋಂಕು ತಗುಲಿದ್ದು ಪತ್ತೆಯಾಗಿತ್ತು.

ಮಾರ್ಕ್ ಬೌಚರ್ ಮತ್ತು ಬೌಚರ್ ಸಂಪರ್ಕಕ್ಕೆ ಬಂದಿದ್ದ ಇನ್ನಿಬ್ಬರು ಆಟಗಾರರನ್ನು ತಂಡದಿಂದ ಸದ್ಯ ದೂರ ಇಡಲಾಗಿದೆ. ಮೂವರೂ ಈಗ ಐಸೊಲೇಶನ್‌ನಲ್ಲಿದ್ದು, ತಂಡದ ವೈದ್ಯಕೀಯ ಸಿಬ್ಬಂದಿ ಮೂವರ ಮೇಲೆ ನಿಗಾ ಇಟ್ಟಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿದೆ. ಮೂವರಿಗೂ ರೋಗದ ಲಕ್ಷಣಗಳಿರಲಿಲ್ಲ ಎಂದು ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಇಂಡಿಯಾ vs ಆಸ್ಟ್ರೇಲಿಯಾ: NCAನಲ್ಲಿ ತರಬೇತಿ ಆರಂಭಿಸಿದ ರೋಹಿತ್ ಶರ್ಮಾಇಂಡಿಯಾ vs ಆಸ್ಟ್ರೇಲಿಯಾ: NCAನಲ್ಲಿ ತರಬೇತಿ ಆರಂಭಿಸಿದ ರೋಹಿತ್ ಶರ್ಮಾ

'ಆರು-ಏಳು ದಿನಗಳ ಕಾಲ ಒಬ್ಬಂಟಿಯಾಗಿ ರೂಮಲ್ಲಿ ಕಳೆಯೋದು ಕಠಿಣ ಕೆಲಸ,' ಎಂದು ಬೌಚರ್ ಹೇಳಿದ್ದಾರೆ. ತನಗೆ ರೋಗದ ತೀವ್ರತೆ ಕಡಿಮೆಯಿದ್ದಿದ್ದು ಅದೃಷ್ಟ ಎಂದು ಬೌಚರ್ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿ 3 ಏಕದಿನ, 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Friday, November 20, 2020, 9:36 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X