ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ವರ್ಷ ಕೆಎಲ್ ರಾಹುಲ್ ಆರ್‌ಸಿಬಿಗೆ ಬರಬೇಕು: ಡೇಲ್ ಸ್ಟೇನ್

I have a feeling that RCB will get back KL Rahul in the next year: Dale Steyn

ಕೇಪ್‌ಟೌನ್: ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಆಡಬೇಕು ಎಂದು ದಕ್ಷಿಣ ಆಫ್ರಿಕಾದ ಮಾಜಿ ಮಾರಕ ವೇಗಿ ಡೇಲ್ ಸ್ಟೇನ್ ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೆಗಾ ಆಕ್ಷನ್ ಉದ್ದೇಶಿಸಿ ಸ್ಟೇನ್ ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಮ್ಮ ಕರ್ನಾಟಕದ ಫ್ರಾಂಚೈಸಿ ಆದರೂ ಕೂಡ ಈ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡದ ಆಟಗಾರರಿಲ್ಲ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರಿದ್ದಾರೆ. ಪಂಜಾಬ್‌ ತಂಡದ ಕೋಚ್ ಅನಿಲ್ ಕುಂಬ್ಳೆ ಕೂಡ ಕನ್ನಡಿಗ. ಅಲ್ಲದೆ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಕೂಡ ಕನ್ನಡದವರೆ.

ಇಎಸ್‌ಪಿಎನ್ ಕ್ರಿಕ್‌ ಇನ್ಫೋ ಜೊತೆ ಮಾತನಾಡಿದ ಡೇಲ್ ಸ್ಟೇನ್, "ಮುಂದಿನ ವರ್ಷ ಐಪಿಎಲ್ ಹರಾಜು ನಡೆಯುವಾಗ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಮತ್ತೆ ತಂಡಕ್ಕೆ ತಂದುಕೊಳ್ಳಬೇಕು ಎಂದು ನನಗನ್ನಿಸುತ್ತಿದೆ," ಎಂದು ಹೇಳಿದ್ದಾರೆ. ಅಸಲಿಗೆ ಆರಂಭದಲ್ಲಿ ಆರ್‌ಸಿಬಿ ತಂಡದಲ್ಲೇ ರಾಹುಲ್ ಇದ್ದು ಆ ಬಳಿಕ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು.

ಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿ

ಶತೃ ದೇಶಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಸ್ನೇಹಾ ದುಬೆ ಈಗ ಟ್ರೆಂಡಿಂಗ್ | Oneindia Kannada

ಆರ್‌ಸಿಬಿ ತಂಡದಲ್ಲಿದ್ದಾಗ ರಾಹುಲ್ ಅಂಥ ಪ್ರದರ್ಶನ ಕೂಡ ನೀಡುತ್ತಿರಲಿಲ್ಲ. ಆದರೆ ಪಂಜಾಬ್‌ಗೆ ಸೇರಿದ ಬಳಿಕ ರಾಹುಲ್‌ಗೆ ತಂಡದ ನಾಯಕ ನಾಯಕತ್ವ ಲಭಿಸಿತ್ತಲ್ಲದೆ, ಅವರ ಬ್ಯಾಟಿಂಗ್ ಕೂಡ ಸುಧಾರಿಸಿತ್ತು. ಆದರೆ 2022ರಲ್ಲಿ ನಡೆಯುವ ಮಹಾನ್ ಹರಾಜಿನಲ್ಲಿ ರಾಹುಲ್ ಅವರನ್ನು ಮತ್ತೆ ಆರ್‌ಸಿಬಿಗೆ ತಂದರೆ ಆರ್‌ಸಿಬಿ ತಂಡ ಹೆಚ್ಚು ಬಲಗೊಳ್ಳುತ್ತದೆ ಎಂದು ಸ್ಟೇನ್ ಈ ಹೇಳಿಕೆ ನೀಡಿದ್ದಾರೆ. ಅಂದ್ಹಾಗೆ ಸ್ಟೇನ್ ಕೂಡ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮುನ್ನ ಆರ್‌ಸಿಬಿ ತಂಡದ ಪರವೇ ಆಡುತ್ತಿದ್ದರು.

Story first published: Monday, September 27, 2021, 10:29 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X