ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿಯಿಂದ ಅತಿಹೆಚ್ಚು ಬೈಸಿಕೊಂಡಿದ್ದೇನೆ; ಮಾಹಿ ಕುರಿತು ಚೆನ್ನೈ ಯುವ ಬೌಲರ್ ಮಾತು

 I have been scolded by MS Dhoni a lot says Deepak Chahar
Dhoni ನನಗೆ ಅಷ್ಟು ಬಾರಿ ಬೈದಿದ್ದರಿಂದಲೇ ನನ್ನ ಆಟ ಸುಧಾರಿಸಿದೆ | Oneindia Kannada

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಯಶಸ್ಸಿನ ಹಾದಿಗೆ ಮರಳಿದೆ. ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ 5 ಪಂದ್ಯಗಳಲ್ಲಿ ಜಯಗಳಿಸಿ 2 ಪಂದ್ಯಗಳಲ್ಲಿ ಸೋಲುವುದರ ಮೂಲಕ ಐಪಿಎಲ್ ಮುಂದೂಡಲ್ಪಟ್ಟ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ತಮ್ಮ ವೃತ್ತಿಜೀವನಕ್ಕೆ ಮುಳುವಾದ ಆ ಒಂದು ಕಾರಣವನ್ನು ಬಿಚ್ಚಿಟ್ಟ ರಾಬಿನ್ ಉತ್ತಪ್ಪ

ಈ ಬಾರಿಯ ಟೂರ್ನಿಯಲ್ಲಿ ಕಳೆದ ಬಾರಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ದೀಪಕ್ ಚಾಹರ್ ಕೂಡ ಯಶಸ್ಸಿನ ಹಾದಿಗೆ ಮರಳಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 8 ವಿಕೆಟ್ ಪಡೆದು ಮಿಂಚಿರುವ ದೀಪಕ್ ಚಾಹರ್ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ವಿರುದ್ಧದ ಪಂದ್ಯಗಳಲ್ಲಿ 4 ವಿಕೆಟ್‍ಗಳ ಗೊಂಚಲನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಐಪಿಎಲ್ ಮುಂದೂಡಲ್ಪಟ್ಟ ನಂತರ ಮಾತನಾಡಿದ ದೀಪಕ್ ಚಾಹರ್ ಧೋನಿಗೆ ತನ್ನ ಬೌಲಿಂಗ್ ಮೇಲಿರುವ ನಂಬಿಕೆಯನ್ನು ಬಿಚ್ಚಿಟ್ಟಿದ್ದಾರೆ.

ಮುಂದಿನ ಐಪಿಎಲ್ ಹರಾಜಿನಲ್ಲಿ ಇಶಾನ್ ಕಿಶನ್‌ರನ್ನು ಖರೀದಿಸಬಹುದಾದ 3 ತಂಡಗಳಿವು

'ಮಹೇಂದ್ರ ಸಿಂಗ್ ಧೋನಿ ನನಗೆ ಮೈದಾನದಲ್ಲಿ ಸಾಕಷ್ಟು ಬಾರಿ ಬೈದಿದ್ದಾರೆ, ಹೀಗಾಗಿಯೇ ನಾನು ನನ್ನ ತಪ್ಪುಗಳನ್ನು ತಿದ್ದುಕೊಂಡು ಒಬ್ಬ ಅತ್ಯುತ್ತಮ ಬೌಲರ್ ಆಗಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ. ಧೋನಿ ಯಾವಾಗಲೂ ನೀನು ನನ್ನ ಪವರ್‌ಪ್ಲೇ ಬೌಲರ್ ಎಂದು ಹೇಳುತ್ತಾರೆ, ಅನೇಕ ಪಂದ್ಯಗಳಲ್ಲಿ ಮೊದಲನೇ ಓವರ್ ಮಾಡುವ ಅವಕಾಶವನ್ನು ಧೋನಿ ನನಗೆ ನೀಡಿದ್ದಾರೆ. ಧೋನಿಗೆ ಯಾವ ಬೌಲರ್‌ಗೆ ಪವರ್‌ಪ್ಲೇನಲ್ಲಿ ಬೌಲಿಂಗ್ ನೀಡಬೇಕು, ಯಾರಿಗೆ ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್ ನೀಡಬೇಕು ಮತ್ತು ಯಾರಿಗೆ ಅಂತಿಮ ಓವರ್‌ಗಳಲ್ಲಿ ಬೌಲಿಂಗ್ ನೀಡಬೇಕು ಎಂಬ ವಿಷಯ ಚೆನ್ನಾಗಿ ಗೊತ್ತಿದೆ, ಹೀಗಾಗಿಯೇ ಚೆನ್ನೈ ತಂಡದ ಬೌಲಿಂಗ್ ವಿಭಾಗ ಬಲಶಾಲಿಯಾಗಿದೆ' ಎಂದು ದೀಪಕ್ ಚಾಹರ್ ಎಂಎಸ್ ಧೋನಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Story first published: Wednesday, May 26, 2021, 11:06 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X