ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬುಮ್ರಾ, ಶಮಿ, ಭುವಿ ನನಗೆ ಸ್ಫೂರ್ತಿಯೇ ಹೊರತು ವಕಾರ್ ಯೂನಿಸ್ ಅಲ್ಲ: ಉಮ್ರಾನ್ ಮಲ್ಲಿಕ್

Umran malik

ಭಾರತದ ಉದಯೋನ್ಮುಖ ವೇಗದ ಬೌಲರ್ ಉಮ್ರಾನ್ ಮಲ್ಲಿಕ್ ತನ್ನ ಸ್ಫೂರ್ತಿ ಟೀಂ ಇಂಡಿಯಾ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿಯೇ ಹೊರತು, ಪಾಕಿಸ್ತಾನಿ ಮಾಜಿ ಬೌಲರ್ ವಕಾರ್ ಯೂನಿಸ್ ಅಲ್ಲ, ಅವರ ರೀತಿಯ ಬೌಲಿಂಗ್ ಶೈಲಿಯನ್ನು ನಾನು ಹೊಂದಿಲ್ಲ ಎಂದಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಇತ್ತೀಚೆಗಷ್ಟೇ ಉಮ್ರಾನ್ ಮಲ್ಲಿಕ್ ಪಾಕ್ ಮಾಜಿ ಆಟಗಾರ ವಕಾರ್ ಯೂನಿಸ್ ರೀತಿಯ ಬೌಲಿಂಗ್ ಶೈಲಿಯನ್ನ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದರೆ. ಆದ್ರೆ ಜಮ್ಮು ಕಾಶ್ಮೀರದ ಬೌಲರ್ ಉಮ್ರಾನ್ ತಾನು ಭಾರತದ ಅನುಭವಿ ತ್ರಿವಳಿ ಬೌಲರ್‌ಗಳನ್ನ ಅನುಸರಿಸುತ್ತಾ ಬಂದಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಾನು ವಕಾರ್ ಯೂನಿಸ್ ಅನ್ನು ಎಂದು ಫಾಲೋ ಮಾಡಿಲ್ಲ!

ನಾನು ವಕಾರ್ ಯೂನಿಸ್ ಅನ್ನು ಎಂದು ಫಾಲೋ ಮಾಡಿಲ್ಲ!

ಬ್ರೆಟ್‌ ಲೀ ಹೇಳಿಕೆ ಕುರಿತಾಗಿ ತುಂಬಾ ಸೀರಿಯಸ್ ಆಗಿಯೇ ಕಮೆಂಟ್ ಮಾಡಿರುವ ಉಮ್ರಾನ್ ಮಲ್ಲಿಕ್ ತಾನೆಂದು ವಕಾರ್ ಯೂನಿಸ್ ಬೌಲಿಂಗ್‌ ಅನಸರಿಸಿಲ್ಲ ಎಂದಿದ್ದಾರೆ.

"ನಾನು ವಕಾರ್ ಯೂನಿಸ್ ಅವರನ್ನು ಅನುಸರಿಸಿಲ್ಲ. ನನ್ನದು ಸಹಜ ಬೌಲಿಂಗ್ ಕ್ರಿಯೆ. ನನ್ನ ಐಡಲ್‌ಗಳಲ್ಲಿ (ಜಸ್ಪ್ರೀತ್) ಬುಮ್ರಾ, (ಮೊಹಮ್ಮದ್) ಶಮಿ ಮತ್ತು ಭುವನೇಶ್ವರ್ (ಕುಮಾರ್) ಭಾಯ್ ಸೇರಿದ್ದಾರೆ. ನಾನು ಒಂದೊಂದೇ ಹಂತವನ್ನು ದಾಟಿ ಬರುವಾಗ ಅವರನ್ನು ಅನುಸರಿಸುತ್ತಿದ್ದೆ "ಎಂದು ಮಲಿಕ್ ಇಂಡಿಯನ್ ಎಕ್ಸ್‌ಪ್ರೆಸ್ ಐಡಿಯಾ ಎಕ್ಸ್‌ಚೇಂಜ್‌ನಲ್ಲಿ ಹೇಳಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ಜೋ ರೂಟ್‌ಗೆ ಶಹಬ್ಬಾಸ್‌ಗಿರಿ ನೀಡಿದ ಬಿಸಿಸಿಐ ಬಾಸ್

ಉಮ್ರಾನ್ ಮಲ್ಲಿಕ್‌ನ ದೊಡ್ಡ ಅಭಿಮಾನಿ ಎಂದಿದ್ದ ಬ್ರೆಟ್‌ ಲೀ

ಉಮ್ರಾನ್ ಮಲ್ಲಿಕ್‌ನ ದೊಡ್ಡ ಅಭಿಮಾನಿ ಎಂದಿದ್ದ ಬ್ರೆಟ್‌ ಲೀ

"ನಾನು ಆತನ ದೊಡ್ಡ ಅಭಿಮಾನಿ. ಉಮ್ರಾನ್ ಮಲಿಕ್ ಇನ್ನಷ್ಟು ಸಾಕಷ್ಟು ವೇಗವನ್ನು ಪಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಒಳ್ಳೆಯ ಸ್ಪರ್ಧಿ, ಉನ್ನತ ವ್ಯಕ್ತಿ, ಅವರು ಹಿಂದೆ ಕಂಡತಹ ಬಹಳಷ್ಟು ವೇಗದ ಬೌಲರ್‌ಗಳಂತೆ ಓಡುತ್ತಾರೆ. ಆತನನ್ನ ನೋಡಿದ್ರೆ ವಕಾರ್ ಯೂನಿಸ್ ನೆನಪಿಗೆ ಬರುತ್ತಾರೆ ಎಂದು ಬ್ರೆಟ್‌ ಲೀ ಎಎನ್‌ಐಗೆ ತಿಳಿಸಿದ್ದರು.

ಇದರ ಜೊತೆಗೆ ಲೀ ಅವರು ಉಮ್ರಾನ್ ಅವರ ಬೌಲಿಂಗ್ ಆ್ಯಕ್ಷನ್‌ನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಸಲಹೆ ನೀಡಿದರು. ಏಕೆಂದರೆ ಅದು ಎಂದಿಗೂ ಪರಿಪೂರ್ಣವಾಗುವುದಿಲ್ಲ, ಹೀಗಾಗಿ ಆತ ಅದನ್ನು ಮತ್ತಷ್ಟು ಸುಧಾರಿಸಲು ಮುಂದಾಗಬೇಕು ಎಂದಿದ್ದಾರೆ.

ಐಪಿಎಲ್: 20ನೇ ಓವರ್‌ಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಡೇಂಜರಸ್ ಆಟಗಾರರ ಟಾಪ್ 5 ಪಟ್ಟಿ

ಐಪಿಎಲ್‌ನಲ್ಲಿ ಬೊಂಬಾಟ್ ಬೌಲಿಂಗ್ ಮಾಡಿದ ಉಮ್ರಾನ್

ಐಪಿಎಲ್‌ನಲ್ಲಿ ಬೊಂಬಾಟ್ ಬೌಲಿಂಗ್ ಮಾಡಿದ ಉಮ್ರಾನ್

ಐಪಿಎಲ್ 15ನೇ ಸೀಸನ್‌ನಲ್ಲಿ 20.18ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲ್ಲಿಕ್ 22 ವಿಕೆಟ್‌ಗಳನ್ನ ಕಬಳಿಸಿದರು. ಆದ್ರೆ ಆತ ಸಾಧಾರಣ ಎಕಾನಮಿ ದರವನ್ನು ಹೊಂದಿದ್ದು , ಬೌಲಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಿದೆ.

ಅಂದು ಗಂಭೀರ್ ಬಗ್ಗೆ ಟೀಕೆ ಮಾಡಿದವ್ರು ಇಂದು ಶಹಬ್ಬಾಸ್ ಹೇಳುತ್ತಿರೋದು ಯಾಕೆ? | OneIndia Kannada
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಮಲ್ಲಿಕ್

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ಮಲ್ಲಿಕ್

ಉಮ್ರಾನ್ ಮಲ್ಲಿಕ್ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಚೊಚ್ಚಲ ಬಾರಿಗೆ ಟೀಂ ಇಂಡಿಯಾ ಸ್ಕ್ವಾಡ್ ಸೇರಿದ್ದಾರೆ.

"ನನ್ನ ದೇಶಕ್ಕಾಗಿ ನನ್ನ ಕೈಲಾದದ್ದನ್ನು ಮಾಡಲು ನಾನು ಬಯಸುತ್ತೇನೆ. ಈ ಐದು (ಟಿ20 ಅಂತರಾಷ್ಟ್ರೀಯ) ಪಂದ್ಯಗಳಲ್ಲಿ (ದಕ್ಷಿಣ ಆಫ್ರಿಕಾ ವಿರುದ್ಧ) ನನಗೆ ಅವಕಾಶ ಸಿಕ್ಕಿದೆ. ಎಲ್ಲಾ ಐದು ಪಂದ್ಯಗಳನ್ನು ಗೆಲ್ಲುವುದು ನನ್ನ ಗುರಿಯಾಗಿದೆ, ನಾನು ಉತ್ತಮ ಪ್ರದರ್ಶನ ನೀಡುತ್ತೇನೆ ಮತ್ತು ಭಾರತಕ್ಕಾಗಿ ಆ ಪಂದ್ಯಗಳನ್ನು ಏಕಾಂಗಿಯಾಗಿಗೆಲ್ಲುತ್ತೇನೆ'' ಎಂದು ಉಮ್ರಾನ್ ಮಲ್ಲಿಕ್ ಹೇಳಿದ್ದಾರೆ.

"ಮೊದಲನೆಯದಾಗಿ, ಭಾರತದಾದ್ಯಂತ ನನಗೆ ಸಿಗುತ್ತಿರುವ ಎಲ್ಲಾ ಪ್ರೀತಿ ಮತ್ತು ಗೌರವಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಸಂಬಂಧಿಕರು ಮತ್ತು ಇತರ ಜನರು ಮನೆಗೆ ಬರುತ್ತಲೇ ಇರುತ್ತಾರೆ, ಅದು ತುಂಬಾ ಒಳ್ಳೆಯದು. ಐಪಿಎಲ್ ನಂತರ ನಾನು ಸ್ವಲ್ಪ ಬ್ಯುಸಿಯಾಗಿದ್ದೇನೆ, ಆದರೆ ತರಬೇತಿ ಮತ್ತು ಅಭ್ಯಾಸವನ್ನು ತಪ್ಪಿಸಿಲ್ಲ, "ಎಂದು ಮಲಿಕ್ ಹೇಳಿದರು.

Story first published: Monday, June 6, 2022, 14:29 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X