ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನು ದೇವರೆಂದು ಕರೆದಿದ್ದ ಸೂರ್ಯಕುಮಾರ್ ಯಾದವ್ ಹಳೆಯ ಟ್ವೀಟ್ ವೈರಲ್

I Have Seen God Bat At No. 3: Suryakumar Yadavs Old Tweets Praising Kohli Goes Viral

ಕಳೆದ ಕೆಲವು ಐಪಿಎಲ್‌ ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ಸ್ಟಾರ್‌ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ತಂಡಕ್ಕೆ ಕಡೆಗಣಿಸಲ್ಪಟ್ಟ ನಂತರ ಭಾರೀ ಚರ್ಚೆ ಕಾರಣವಾಗಿದ್ದಾರೆ.

ಅಬುಧಾಬಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 79 ರನ್‌ಗಳಿಸಿರುವ ಸೂರ್ಯಕುಮಾರ್ ಆಟಕ್ಕೆ ಅನೇಕ ಕ್ರಿಕೆಟ್ ದಿಗ್ಗಜರು ಪ್ರಶಂಸೆ ವ್ಯಕ್ತಪಡಿಸಿದರು. ಸ್ವತಃ ಆರ್‌ಸಿಬಿ ಕೋಚ್ ಸೈಮನ್ ಕ್ಯಾಟಿಚ್ ಕೂಡ ಸೂರ್ಯಕುಮಾರ್ ಆಟವನ್ನ ಮೆಚ್ಚಿಕೊಂಡರು.

ನ್ಯೂಜಿಲೆಂಡ್ ಪರ ಸೂರ್ಯಕುಮಾರ್ ಆಡಬೇಕೆಂದು ಬಯಸಿದ ಸ್ಕಾಟ್‌ ಸ್ಟ್ರೈರಿಸ್ನ್ಯೂಜಿಲೆಂಡ್ ಪರ ಸೂರ್ಯಕುಮಾರ್ ಆಡಬೇಕೆಂದು ಬಯಸಿದ ಸ್ಕಾಟ್‌ ಸ್ಟ್ರೈರಿಸ್

ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ರನ್ ಚೇಸ್ ಇನ್ನಿಂಗ್ಸ್‌ ವೇಳೆ 13 ನೇ ಓವರ್ ಸಮಯದಲ್ಲಿ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್‌ರನ್ನು ಸ್ಲೆಡ್ಜಿಂಗ್ ಮಾಡಿದರು. ಚೆಂಡನ್ನು ಎತ್ತಿಕೊಂಡು ಸೀದಾ ಸೂರ್ಯಕುಮಾರ್ ಯಾದವ್ ಕಡೆಗೆ ಬಂದ ಕೊಹ್ಲಿ, ಮುಂಬೈ ಬ್ಯಾಟ್ಸ್‌ಮನ್ ಅನ್ನು ಗುರಾಯಿಸುತ್ತಾ ಹತ್ತಿರ ಸಮೀಪಿಸಿದರು. ಇದನ್ನು ಕಂಡ ಅಂಪೈರ್ಸ್‌ ಇನ್ನೇನು ಕೊಹ್ಲಿ-ಸೂರ್ಯಕುಮಾರ್ ನಡುವೆ ವಾಗ್ವಾದ ನಡೆಯಬಹುದು ಎನ್ನುವಷ್ಟರಲ್ಲಿ ಅಲ್ಲಿ ನಡೆದಿದ್ದೇ ಬೇರೆ.

ವಾಗ್ವಾದ ನಡೆಯುತ್ತದೆ ಎಂದು ಬಿಂಬಿತವಾಗುವಷ್ಟರಲ್ಲಿ ಓವರ್ ಮುಕ್ತಾಯಗೊಂಡಿತ್ತು. ಪರಿಣಾಮ ಕೊಹ್ಲಿ ತನ್ನ ಹತ್ತಿರ ಬಂದು ದೀರ್ಘ ನೋಟ ಬೀರಿದ್ದರೂ ಸೂರ್ಯಕುಮಾರ್ ಸ್ಟ್ರೈಕರ್ ಅಲ್ಲದ ಅಂತ್ಯಕ್ಕೆ ಹೊರಟರು.

ಪಂದ್ಯದ ನಂತರ, ಮುಂಬೈ ಇಂಡಿಯನ್ಸ್‌ ಬ್ಯಾಟ್ಸ್‌ಮನ್‌ನ ಬಗ್ಗೆ ಟೀಕೆಗಳು ಸಹ ವ್ಯಕ್ತವಾಯಿತು. ಅನೇಕ ಅಭಿಮಾನಿಗಳು ಕೊಹ್ಲಿಯ ಕ್ರಮವನ್ನು ಒಪ್ಪಿಕೊಳ್ಳದಿದ್ದರೂ, ಕೆಲವರು ವಿರಾಟ್ ಕೊಹ್ಲಿ ಬಗ್ಗೆ ಸೂರ್ಯಕುಮಾರ್ ಯಾದವ್‌ರ ಹಳೆಯ ಟ್ವೀಟ್‌ಗಳನ್ನು ಹರಿಬಿಟ್ಟರು. ಹಳೆಯ ಟ್ವೀಟ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಕೊಹ್ಲಿಯನ್ನು ಹೊಗಳಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುವವನಲ್ಲಿ ದೇವರಂತೆ ಕಂಡಿದ್ದೇನೆ ಎಂದು ಭಾರತೀಯ ಕ್ರಿಕೆಟ್ ನಾಯಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Story first published: Friday, October 30, 2020, 10:01 [IST]
Other articles published on Oct 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X