ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಮೈಲಿಗಲ್ಲುಗಳ ಬಗ್ಗೆ ಬಹಳಷ್ಟು ಹಿಂದೆಯೇ ಯೋಚಿಸುವುದು ಬಿಟ್ಟಿದ್ದೇನೆ"

I have stopped thinking about landmarks long back: Ashwin

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್‌ ಆರ್ ಅಶ್ವಿನ್ ತಾನು ಬಹಳ ಹಿಂದೆಯೇ ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದು ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಈಗ ಪ್ರತಿ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಕೊಡುಗೆ ನೀಡುವ ಬಗ್ಗೆ ಯೋಚನೆಯನ್ನು ನಡೆಸುತ್ತೊರುತ್ತೇನೆ ಎಂದು ಅವರು ಹೇಳಿದ್ದಾರೆ.

ಆರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ 400 ವಿಕೆಟ್‌ಗಳ ಮೈಲುಗಲ್ಲು ತಲುಪಿದರು. ಈ ಮೂಲಕ ಭಾರತೀಯ ಬೌಲರ್‌ಗಳ ಪೈಕಿ ಈ ಸಾಧನೆಯನ್ನು ಮಾಡಿದ ನಾಲ್ಕನೇ ಬೌಲರ್ ಎನಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಬೌರ್‌ಗಳ ಪೈಕಿ ಅತಿ ಹೆಚ್ಚು ವಿಕೆಟ್ ಪಡೆದ ಅನಿಲ್ ಕುಂಬ್ಳೆ ದಾಖಲೆ 619 ವಿಕೆಟ್‌ಗಳ ಸಾಧನೆಯನ್ನು ಹಿಮ್ಮೆಟ್ಟುವ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು.

ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

ಇದಕ್ಕೆ ಆರ್ ಅಶ್ವಿನ್ ಪ್ರತಿಕ್ರಿಯಿಸಿದರು. "ಪ್ರಾಯೋಗಿಕವಾಗಿ ಆ ಬಗ್ಗೆ ನೀವು ಯೋಚಿಸಿದರೂ ಅದು 218 ವಿಕೆಟ್‌ಗಳಷ್ಟು ದೂರದಲ್ಲಿದೆ" ಎಂದು ಅಶ್ವಿನ್ ಹೇಳಿದ್ದಾರೆ. ಜೊತೆಗೆ "ನಾನು ಈ ಎಲ್ಲಾ ಮೈಲಿಗಲ್ಲುಗಳ ಬಗ್ಗೆ ಯೋಚಿಸುವುದನ್ನು ಬಹಳ ಬಹಳ ಹಿಂದೆಯೇ ಬಿಟ್ಟದ್ದೇನೆ" ಎಂದಿದ್ದಾರೆ.

"ಈಗ ನಾನು ಏನು ಮಾಡಲು ಸಾಧ್ಯವಿದೆ. ನನ್ನಿಂದ ಉತ್ತಮ ಪ್ರದರ್ಶನ ನೀಡಲು ಏನು ಮಾಡಬಹುದು, ತಂಡಕ್ಕಾಗಿ ನಾನು ಇನ್ನಷ್ಟು ಯಾವ ರೀತಿಯಲ್ಲಿ ಕೊಡುಗೆಯನ್ನು ನೀಡಬಹುದು ಎಂಬುದು ಬಹಳ ಮುಖ್ಯವಾಗುತ್ತದೆ, ಯಾಕೆಂದರೆ ನಾನೀಗ ಟೆಸ್ಟ್ ಕ್ರಿಕೆಟ್‌ಅನ್ನು ಮಾತ್ರವೇ ಆಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ

"ನಾನು ವೈಯಕ್ತಿಕವಾಗಿ ಹಾಗೂ ಕ್ರಿಕೆಟಿಗನಾಗಿ ಮತ್ತಷ್ಟು ಉತ್ತಮವಾಗಿರಲು ಚಿತ್ತ ನೆಡುತ್ತೇನೆ. ಅದೇ ಕಾರಣಕ್ಕಾಗಿ ನಾನು ನಿಜವಾಗಿಯೂ ತುಂಬಾ ಸಂತೀಷದಿಮದ ಇರುತ್ತೇನೆ ಮತ್ತು ನನ್ನ ಆಟವನ್ನು ಸಾಕಷ್ಟು ಆನಂದಿಸುತ್ತೇನೆ. ಬಹುಶಃ ಇದೇ ಕಾರಣದಿಂದ ಕಳೆದ 15 ವರ್ಷಗಳಿಂದ ಉತ್ತಮವಾಗಿರುವುದನ್ನು ಸಾಧಿಸಲು ಸಾಧ್ಯವಾಗಿದೆ" ಎಂದು ಆರ್ ಅಶ್ವಿನ್ ಹೇಳಿದ್ದಾರೆ.

Story first published: Sunday, February 28, 2021, 9:56 [IST]
Other articles published on Feb 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X