ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್ ಫೈನಲ್: ಭಾರತವನ್ನು ಎದುರಿಸಲು ಇಷ್ಟವಿಲ್ಲ ಎಂದ ಆಸ್ಟ್ರೇಲಿಯಾ ಬೌಲರ್

I just hate playing India says Australia pacer Megan Schutt

ಮುಂದಿನ ಭಾನುವಾರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ. ಈ ಫೈನಲ್‌ಗೆ ಟೀಮ್ ಇಂಡಿಯಾ ವನಿತೆಯರು ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಬೌಲರ್ ಮೆಗನ್ ಸ್ಕಟ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಆಸ್ಟ್ರೇಲಿಯಾ ತಂಡ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಡಿಲ್ ನಿಯಮದ ಪ್ರಕಾರ 5 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಮತ್ತೊಂದು ಕಡೆ ಟೀಮ್ ಇಂಡಿಯಾ ಫೈನಲ್‌ಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಬೌಲರ್ ಮೆಗನ್ ಸ್ಕಟ್ ಐಸಿಸಿ ಅಧಿಕೃತ ವೆಬ್‌ಸೈಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಫೈನಲ್‌ಗೆ ಫ್ರೀ ಪಾಸ್‌ಗಿಂತ ಸೋಲು ಉತ್ತಮ ಎಂದ ದ. ಆಫ್ರಿಕಾ ನಾಯಕಿಫೈನಲ್‌ಗೆ ಫ್ರೀ ಪಾಸ್‌ಗಿಂತ ಸೋಲು ಉತ್ತಮ ಎಂದ ದ. ಆಫ್ರಿಕಾ ನಾಯಕಿ

ಮೆಗನ್ ಈ ರೀತಿ ಹೇಳಿಕೆಯನ್ನು ನೀಡಲು ಕಾರಣವೇನು ಮುಂದೆ ಓದಿ.

ಮೆಗನ್ ಹೇಳಿದ ಮಾತು!

ಮೆಗನ್ ಹೇಳಿದ ಮಾತು!

ಮೆಗನ್ ಸ್ಕಟ್ ಐಸಿಸಿ ಅಧಿಕೃತ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೆಗನ್ 'ಭಾರತದ ವಿರುದ್ದ ಆಡಲು ನನಗೆ ಇಷ್ಟವಿಲ್ಲ' ಎಂಬ ಮಾತನ್ನು ಹೇಳಿದ್ದಾರೆ. ಆದರೆ ಈ ಮಾತನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಪಡೆಯನ್ನು ಪ್ರಶಂಸಿಸುತ್ತಾ ಹೇಳಿದ್ದಾರೆ ಎನ್ನುವುದು ಗಮನಾರ್ಹ.

ತ್ರಿಕೋನ ಸರಣಿ ಘಟನೆ

ತ್ರಿಕೋನ ಸರಣಿ ಘಟನೆ

ವಿಶ್ವಕಪ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಜೊತೆಗೆ ಟಿ20 ತ್ರಿಕೋನ ಸರಣಿಯನ್ನಾಡಿತ್ತು. ಈ ಸರಣಿಯ ಪಂದ್ಯವನ್ನು ದೃಷ್ಟಿಯಲ್ಲಿಕ್ಕೊಂಡು ಮೆಗನ್ ಈ ಹೇಳಿಕೆಯನ್ನು ನೀಡಿದ್ದಾರೆ.

ಅತಿ ದೊಡ್ಡ ಸಿಕ್ಸರ್ ಅದು

ಅತಿ ದೊಡ್ಡ ಸಿಕ್ಸರ್ ಅದು

ತ್ರಿಕೋನ ಸರಣಿಯಲ್ಲಿ ಸ್ಮೃತಿ ಮತ್ತು ಶೆಫಾಲಿ ಸಂಪೂರ್ಣವಾಗಿ ನನ್ನನ್ನು ಆವರಸಿಕೊಂಡಿದ್ದರು. ಅಲ್ಲಿ ಶೆಫಾಲಿ ವರ್ಮ ಸಿಡಿಸಿದ ಸಿಕ್ಸ್ ಬಹುಶಃ ನನ್ನ ಎಸೆತದಲ್ಲಿ ಬಂದ ಅತಿ ದೊಡ್ಡ ಸಿಕ್ಸರ್ ಆಗಿರಬಹುದು ಎಂದು ಮೆಗನ್ ಹೇಳಿದ್ದಾರೆ.

ಗ್ರೂಪ್ ಹಂತದಲ್ಲೂ ಮುಖಾಮುಖಿ

ಗ್ರೂಪ್ ಹಂತದಲ್ಲೂ ಮುಖಾಮುಖಿ

ಆಸ್ಟ್ರೇಲಿಯಾ ಮತ್ತು ಭಾರತ ಗ್ರೂಪ್ ಹಂತದ ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಭಾರತದ ವನಿತೆಯರು ಆಸ್ಟ್ರೇಲಿಯಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮ ಸ್ಪೋಟಕ ಆಟವನ್ನು ಪ್ರದರ್ಶಿಸಿದರು.

ಭಾನುವಾರ ಫೈನಲ್ ಕದನ

ಭಾನುವಾರ ಫೈನಲ್ ಕದನ

ಇದೇ ಭಾನುವಾರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ವನಿತೆಯರು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದ್ದಾರೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವುದು ಟೀಮ್ ಇಂಡಿಯಾ ವನಿತೆಯರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ.

Story first published: Saturday, March 7, 2020, 12:24 [IST]
Other articles published on Mar 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X