ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗೆ 50 ಅನ್ನು 100 ಆಗಿ ಪರಿವರ್ತಿಸಲು ಚೆನ್ನಾಗಿ ತಿಳಿದಿದೆ: ಶತಕದ ಬರ ಎದುರಿಸುತ್ತಿರುವ ಪ್ರಶ್ನೆಗೆ ಧವನ್ ಉತ್ತರ

Shikhar dhawan

ವೆಸ್ಟ್ ಇಂಡೀಸ್‌ ವಿರುದ್ಧ ಏಕದಿನ ಸರಣಿಯಲ್ಲಿ ಆಟಗಾರನಾಗಿ ಹಾಗೂ ನಾಯಕನಾಗಿ ಮಿಂಚಿದ ಶಿಖರ್ ಧವನ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯರನ್ನ ವೈಟ್‌ ವಾಶ್ ಮಾಡುವ ಮೂಲಕ ವಿಶೇಷ ಸಾಧನೆಗೆ ಕಾರಣವಾಗಿದ್ದಾರೆ.

ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಮೂರು ರನ್‌ಗಳಲ್ಲಿ ಶತಕವಂಚಿತನಾದ ಧವನ್ 97ರನ್‌ಗಳಿಸಿ ಔಟಾದ್ರೆ, ಮೂರನೇ ಏಕದಿನ ಪಂದ್ಯದಲ್ಲಿ 74 ಎಸೆತಗಳಲ್ಲಿ 58 ರನ್ ದಾಖಲಿಸಿದ್ರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಕೂಡ ಒಳಗೊಂಡಿತ್ತು. ಏಕದಿನ ಫಾರ್ಮೆಟ್‌ಗೆ ಕಂಬ್ಯಾಕ್ ಮಾಡಿದ ಬೆನ್ನಲ್ಲೇ ಭರ್ಜರಿ ಆಟವಾಡಿದ ಶಿಖರ್ ಧವನ್ ಸೆಂಚುರಿ ಸಿಡಿಸಿ ತುಂಬಾ ಸಮಯವೇ ಕಳೆದು ಹೋಗಿದೆ.

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಶುಭಮನ್ ಮತ್ತು ಧವನ್

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಶುಭಮನ್ ಮತ್ತು ಧವನ್

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಶುಭಮನ್ ಗಿಲ್ ಮತ್ತು ಶಿಖರ್ ಧವನ್ ಬೊಂಬಾಟ್ ಆಟವಾಡಿದ್ರು. 113 ರನ್‌ಗಳ ಜೊತೆಯಾಟವಾಡಿದ ಧವನ್ ಮತ್ತು ಗಿಲ್‌ ಭಾರತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ರೂ ಸಹ ಒಂದೆಡೆ 98ರನ್‌ಗಳೊಂದಿಗೆ ಅಜೇಯರಾಗಿ ಉಳಿದ ಗಿಲ್ ಒಂದೆಡೆಯಾದ್ರೆ, ಶತಕದ ಜೊತೆಯಾಟದ ಬಳಿಕ ನಾಯಕ ಶಿಖರ್ ಧವನ್ ನಿರ್ಗಮಿಸಿದ್ರು.

23ನೇ ಓವರ್‌ನಲ್ಲಿ ಹೇಡನ್ ವಾಲ್ಷ್ ಸ್ಪಿನ್‌ ದಾಳಿಯಲ್ಲಿ ನಿಕೋಲಸ್ ಪೂರನ್‌ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ ಶಿಖರ್ ಧವನ್ ಸರಣಿಯಲ್ಲಿ ಎರಡನೇ ಅರ್ಧಶತಕ ದಾಖಲಿಸಿ ವಿಕೆಟ್‌ ಒಪ್ಪಿಸಿದ್ರು.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 168ರನ್ ಕಲೆಹಾಕಿದ ಧವನ್ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮರಣೀಯ 97ರನ್ ಆಟವಾಡಿದ್ದು ಮರೆಯಲಾಗದು. ಶುಭಮನ್ ಗಿಲ್ 205ರನ್‌ಗಳೊಂದಿಗೆ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರೂ ಸಹ, ಧವನ್ ಸರಣಿಯ ಎರಡನೇ ಅತಿ ಹೆಚ್ಚು ರನ್‌ಗಳಿಸಿ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

2019ರಿಂದ ಒಂದು ಶತಕವನ್ನೂ ಸಿಡಿಸಿಲ್ಲ ಗಬ್ಬರ್

2019ರಿಂದ ಒಂದು ಶತಕವನ್ನೂ ಸಿಡಿಸಿಲ್ಲ ಗಬ್ಬರ್

2019ರ ಐಸಿಸಿ ವಿಶ್ವಕಪ್‌ನಿಂದಲೂ ಶಿಖರ್ ಧವನ್ ಬ್ಯಾಟ್‌ನಿಂದ ಒಂದೇ ಒಂದು ಶತಕ ಹೊರಬಂದಿಲ್ಲ. ಅಲ್ಲಿಂದ 1013 ರನ್ ಕಲೆಹಾಕಿರುವ ಶಿಖರ್ 10 ಅರ್ಧಶತಕಗಳನ್ನ ದಾಖಲಿಸಿದ್ದಾರೆ. ಜೊತೆಗೆ ಇಂಗ್ಲೆಂಡ್‌ನಲ್ಲಿ ನಡೆದ ಕಳೆದ ಏಕದಿನ ವಿಶ್ವಕಪ್ ಬಳಿಕ ಏಕದಿನ ಫಾರ್ಮೆಟ್‌ನಲ್ಲಿ ಭಾರತದ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟರ್ ಆಗಿದ್ದಾರೆ.

ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟೀಂ ಇಂಡಿಯಾ ನಾಯಕರು(ODI)

ನನಗೆ 50 ಅನ್ನು 100 ಆಗಿ ಪರಿವರ್ತಿಸಲು ಚೆನ್ನಾಗಿ ತಿಳಿದಿದೆ!

ನನಗೆ 50 ಅನ್ನು 100 ಆಗಿ ಪರಿವರ್ತಿಸಲು ಚೆನ್ನಾಗಿ ತಿಳಿದಿದೆ!

"50 ಗಳನ್ನು 100 ಕ್ಕೆ ಪರಿವರ್ತಿಸುವುದು ಹೇಗೆ ಎಂದು ನನಗೆ ತಿಳಿದಿದೆ. ಮೊದಲ ಗೇಮ್‌ನಲ್ಲಿ 97 ರನ್ ಗಳಿಸಿ ಔಟಾದರು, ಸಹ ಇಂದಿಗೂ ನಾನು ಉತ್ತಮ ಪ್ರದರ್ಶನ ನೀಡಿದ್ದೆ. ನಾನು ರನ್ ದರವನ್ನು ಹೆಚ್ಚಿಸಲು ಅಪಾಯವನ್ನು ತೆಗೆದುಕೊಂಡೆ ಮತ್ತು ಔಟಾಗಿದ್ದೇನೆ, ಆದ್ದರಿಂದ ಅದು ಉತ್ತಮವಾಗಿದೆ, "ಎಂದು ಭಾರತದ 3-0 ಸರಣಿಯ ಗೆಲುವಿನ ನಂತರ ಧವನ್ ಹೇಳಿದರು.

"ನನ್ನ ಫಾರ್ಮ್‌ನಿಂದ ನಾನು ಸಾಕಷ್ಟು ಸಂತಸಗೊಂಡಿದ್ದೇನೆ, ನಾನು ಈ ಸ್ವರೂಪವನ್ನು ಬಹಳ ಸಮಯದಿಂದ ಆಡುತ್ತಿದ್ದೇನೆ" ಎಂದು ಅವರು ಹೇಳಿದರು.

ಲೆಜೆಂಡ್ಸ್ ಲೀಗ್ ಸೀಸನ್ 2: ಕಣಕ್ಕಿಳಿಯುವುದನ್ನು ಖಚಿತಪಡಿಸಿದ ಕಿವಿಸ್, ದ. ಆಫ್ರಿಕಾ ದಿಗ್ಗಜರು! 6301.html

ಶತಕ ಮಿಸ್ ಮಾಡಿಕೊಂಡ ಶುಭಮನ್ ಗಿಲ್‌ ಕುರಿತು ಗಬ್ಬರ್ ಬೇಸರ

ಶತಕ ಮಿಸ್ ಮಾಡಿಕೊಂಡ ಶುಭಮನ್ ಗಿಲ್‌ ಕುರಿತು ಗಬ್ಬರ್ ಬೇಸರ

ಶಿಖರ್ ಧವನ್‌ ಜೊತೆಗೆ ಮೊದಲ ವಿಕೆಟ್‌ಗೆ ಉತ್ತಮ ಆಟವಾಡಿದ ಶುಭಮನ್ ಗಿಲ್‌ ಕುರಿತು ಶಿಖರ್ ಧವನ್ ಮಾತನಾಡಿದ್ದು, ಆತ ಶತಕ ಮಿಸ್‌ ಮಾಡಿಕೊಂಡಿದ್ದು ಬೇಸರವಾಯ್ತು ಎಂದಿದ್ದಾರೆ.

ಶುಭಮನ್‌ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ಶತಕ ಸಿಡಿಸುವ ಹಾದಿಯಲ್ಲಿದ್ದರು. ಆದ್ರೆ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡು ಭಾರತದ ಇನ್ನಿಂಗ್ಸ್‌ ಕೇವಲ 36ಓವರ್‌ಗೆ ಮುಕ್ತಾಯಗೊಂಡಿತು. ಈ ವೇಳೆಯಲ್ಲಿ ಶುಭಮನ್ 98 ಎಸೆತಗಳಲ್ಲಿ ಅಜೇಯ 98 ರನ್ ಕಲೆಹಾಕಿದ್ದರು. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು.

Story first published: Thursday, July 28, 2022, 14:21 [IST]
Other articles published on Jul 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X