ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾವುದೇ ಕ್ರಮಾಂಕದಲ್ಲಿ ಅವಕಾಶ ನೀಡಿದರೂ ಬ್ಯಾಟಿಂಗ್‌ಗೆ ಸಿದ್ಧ: ರೋಹಿತ್ ಶರ್ಮಾ

Im happy to bat anywhere says Rohit Sharma

ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಿಂದ ಆರಂಭಿಕನಾಗಿ ಅದ್ಭುತ ಯಶಸ್ಸು ಸಾಧಿಸಿದ ರೋಹಿತ್ ಶರ್ಮಾ ತನ್ನ ಜವಾಬ್ಧಾರಿಯನ್ನು ಆನಂದಿಸುತ್ತಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತನ್ನ ಬ್ಯಾಟಿಂಗ್ ಕ್ರಮಾಂಕದ ಕುರಿತಂತೆ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ತಾನು ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಸಿದ್ಧ ಎಂದಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಕ್ರಮಾಂಕದ ಜವಾಬ್ಧಾರಿಯ ಬಗ್ಗೆ ಪ್ರತಿಕ್ರಿಯಿಸಿದರು. "ತಂಡದ ಮ್ಯಾನೇಜ್‌ಮೆಂಟ್ ನನಗೆ ನೀಡುವ ಜವಾಬ್ಧಾರಿಯನ್ನು ವಹಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ಆದರೆ ನನ್ನ ಆರಂಭಿಕ ಆಟಗಾರನ ಸ್ಥಾನದಿಂದ ಬದಲಾಯಿಸುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐ

"ವಿರಾಟ್ ಕೊಹ್ಲಿ ತಂಡದಿಂದ ಹೊರಬಂದ ಬಳಿಕ ತಂಡದಲ್ಲಿನ ಆಯ್ಕೆಗಳು ಯಾವುದು, ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬ ಬಗ್ಗೆ ಈಗಾಗಲೇ ಆಸ್ಟ್ರೇಲಿಯಾದಲ್ಲಿರುವ ತಂಡ ಲೆಕ್ಕಾಚಾರ ಮಾಡಿರುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

"ನಾನು ಆಸ್ಟ್ರೇಲಿಯಾಗೆ ತೆರಳಿ ತಂಡವನ್ನು ಸೇರಿಕೊಂಡ ನಂತರ ಅಲ್ಲಿನ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಅದರೆ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರೂ ನಾನು ಸಿದ್ಧನಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್

ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪಿಚ್‌ನಲ್ಲಿನ ಬೌನ್ಸ್‌ಬಗ್ಗೆ ನಡೆಯುವ ಚರ್ಚೆಗೂ ಅಭಿಪ್ರಾಯ ವ್ಯಕ್ತಪಡಿಸಿದರು. ಈಗ ನಡೆಯುವತ್ತಿರುವ ಚರ್ಚೆಯ ಮಟ್ಟಿಗೆ ಆಸ್ಟ್ರೇಲಿಯಾದಲ್ಲಿ ಬೌನ್ಸ್‌ಗಳು ಹೆಚ್ಚಿನ ಪರಿಣಾಮವನ್ನು ಬೀರಲಾರದು ಎನಿಸುತ್ತದೆ. ಪರ್ತ್ ಹೊರತು ಪಡಿಸಿ ಕಳೆದ ಕೆಲ ವರ್ಗಳಿಂದ ಉಳಿದ ಪಿಚ್‌ಗಳು ದೊಡ್ಡ ಪ್ರಮಾಣದಲ್ಲಿ ಬೌನ್ಸ್ ಉಂಟುಮಾಡುತ್ತದೆ ಎನಿಸುತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Story first published: Monday, November 23, 2020, 10:05 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X