ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾತಾಡಲಿ ಬಿಡಿ, ಅವರ ಟೀಕೆಗಳಿಗೆ ನಾನು ಯೋಗ್ಯನೆ: ಹಾರ್ದಿಕ್ ಪಾಂಡ್ಯ

I’m worthy enough that they’re (critics) talking about me: Hardik Pandya

ನವದೆಹಲಿ, ಅಕ್ಟೋಬರ್ 18: ಟೀಮ್ ಇಂಡಿಯಾದಿಂದ ಸದ್ಯ ಹೊರಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ತನ್ನ ಬಗ್ಗೆ ಮಾತಾಡುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಟೀಕಿಸಲು ನಾನು ಯೋಗ್ಯ ವ್ಯಕ್ತಿಯೆ. ಟೀಕಿಸಲಿ ಬಿಡಿ ಎಂದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಉಮೇಶ್ ಆಯ್ಕೆವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಉಮೇಶ್ ಆಯ್ಕೆ

ಏಷ್ಯಾ ಕಪ್ ಪಂದ್ಯಾಟದ ವೇಳೆ ಗಾಯಕ್ಕೀಡಾದ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರ ನಡೆಯುವಂತಾಗಿತ್ತು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಂಡ್ಯ ಪಾಲ್ಗೊಂಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಇನ್ನುಳಿದ ಏಕದಿನ, ಟಿ20ಯಲ್ಲೂ ಪಾಂಡ್ಯ ಪಾಲ್ಗೊಳ್ಳುವ ಸಾಧ್ಯತೆ ಬಹುತೇಕ ಇಲ್ಲ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಜೊತೆ ಮೈಂಡ್ ಗೇಮ್ ಆಡಿದ್ದೆ: ಅಮೀರ್ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ ಜೊತೆ ಮೈಂಡ್ ಗೇಮ್ ಆಡಿದ್ದೆ: ಅಮೀರ್

ಸಂದರ್ಶನವೊಂದರಲ್ಲಿ ಮಾತನಾಡಿದ ಪಾಂಡ್ಯ, 'ನನ್ನ ಬಗ್ಗೆ ಮಾತನಾಡುವ ವ್ಯಕ್ತಿಗಳ ಬಗ್ಗೆ ನಾನು ತೀರಾ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗೋಲ್ಲ' ಎಂದರು. ಇಂಗ್ಲೆಂಡ್ ಪ್ರವಾಸ ಸಂದರ್ಭ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಮತ್ತು ವಿಂಡೀಸ್ ಮಾಜಿ ಕ್ರಿಕೆಟಿಗ ಮೈಕೆಲ್ ಹೋಲ್ಡಿಂಗ್, ಪಾಂಡ್ಯಗಿರುವ 'ಆಲ್ ರೌಂಡರ್' ಬಿರುದಿನ ಬಗ್ಗೆ ಮಾತನಾಡಿದ್ದರು.

ಮಾತಾಡಲಿ ಬಿಡಿ

ಮಾತಾಡಲಿ ಬಿಡಿ

ತನ್ನ ಬಗ್ಗೆ ಮಾತನಾಡಿದ್ದ ಗವಾಸ್ಕರ್ ಮತ್ತು ಹೋಲ್ಡಿಂಗ್ ಉಲ್ಲೇಖಿಸಿ ಪಾಂಡ್ಯ, 'ಅವರು ಬಹಳಷ್ಟು ಕ್ರಿಕೆಟ್ ಆಡಿದ ಅನುಭವವುಳ್ಳವರು. ಮಾತನಾಡಲಿ ಬಿಡಿ ಪರವಾಗಿಲ್ಲ. ನಾನವರ ಬಗ್ಗೆ ತುಂಬಾ ಕೇಳಿದ್ದೇನೆ. ಹಾಗಾಗಿ ನಾನವರಿಗೆ ಗೌರವಿಸುತ್ತೇನೆ. ಅವರ ಟೀಕೆಗೆ ನಾನು ಯೋಗ್ಯನೆ' ಎಂದಿದ್ದಾರೆ.

ವಿಶ್ವ ಕಪ್ ವೇಳೆ ತಂಡ ಸೇರ್ಪಡೆ ಸಾಧ್ಯತೆ

ವಿಶ್ವ ಕಪ್ ವೇಳೆ ತಂಡ ಸೇರ್ಪಡೆ ಸಾಧ್ಯತೆ

'ಅವರು ಏನೇ ಅಂದರೂ ನಾನದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ' ಎಂದು ಪಾಂಡ್ಯ ತಿಳಿಸಿದರು. ಸದ್ಯ ವಿಶ್ರಾಂತಿಯಲ್ಲಿರುವ ಹಾರ್ದಿಕ್ ಗೆ ಇನ್ನೂ ಕೊಂಚ ಕಾಲ ವಿಶ್ರಾಂತಿ ನೀಡಲು ತಂಡ ನಿರ್ವಹಣಾ ಸಮಿತಿ ಬಯಸಿದೆ. ಕಾರಣ; ಮುಂಬರಲಿರುವ ವಿಶ್ವಕಪ್ ವೇಳೆಗೆ ಪಾಂಡ್ಯ ಬಲವನ್ನು ತಂಡದಲ್ಲಿ ಬಳಸಿಕೊಳ್ಳೋದು.

ಕ್ಯಾಪ್ಟನ್, ಕೋಚ್, ತಂಡ ಮುಖ್ಯ

ಕ್ಯಾಪ್ಟನ್, ಕೋಚ್, ತಂಡ ಮುಖ್ಯ

ಮಾತು ಮುಂದುವರೆಸಿದ ಹಾರ್ದಿಕ್, 'ತಂಡಕ್ಕೆ ಸೇರ್ಪಡೆ, ವಿಶ್ರಾಂತಿ ಎಲ್ಲವೂ ತಂಡಕ್ಕೆ ಸಂಬಂಧಿಸಿದ್ದು. ನಾನವುಗಳ ಬಗ್ಗೆ ಯಾವತ್ತೂ ಏನನ್ನೂ ಮಾತನಾಡಲಾರೆ. ನಾನು ಈವರೆಗೂ ಹೀಗೇ ಆಡಿಕೊಂಡು ಬಂದವನು. ನನ್ನ ತಂಡದ ನಾಯಕ, ಕೋಚ್ ಮತ್ತು ತಂಡದ ಬೇಡಿಕೆಗನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ' ಎಂದರು.

ಯಾವ ಮಾದರಿಯ ಕ್ರಿಕೆಟ್ ಗೂ ಸಿದ್ಧ

ಯಾವ ಮಾದರಿಯ ಕ್ರಿಕೆಟ್ ಗೂ ಸಿದ್ಧ

ನೀನು ಇಂಥ ಮಾದರಿಯ ಕ್ರಿಕೆಟ್ ಗೆ ಫಿಟ್ ಅಂತ ಅವರು ಬಯಸಿದರೆ ನಾನದಕ್ಕೆ ಬದ್ಧ ಎಂದು ತಿಳಿಸಿದ ಪಾಂಡ್ಯ ಎಂಎಸ್ ಧೋನಿ ಮತ್ತು ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿ, 'ಆಟದ ಸುಧಾರಣೆಗೆ ಸಂಬಂಧಿಸಿ ನಾನವರಿಂದ ವೈಯಕ್ತಿಕವಾಗಿ ತುಂಬಾ ಕಲಿತಿದ್ದೇನೆ' ಎಂದರು.

Story first published: Thursday, October 18, 2018, 12:27 [IST]
Other articles published on Oct 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X