ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನ ಆರೋಗ್ಯದ ದೃಷ್ಟಿಯಿಂದ ಇಂಗ್ಲೆಂಡ್ ಪ್ರವಾಸ ಅಗತ್ಯ: ಆಸಿಸ್ ಕೋಚ್

I Think We Have To Go To England: Australia Coach Justin Langer

ಕೊರೊನಾ ವೈರಸ್‌ನ ಕಾರಣದಿಂದಾಗಿ ನಿಂತಿದ್ದ ಕ್ರಿಕೆಟ್ ಮತ್ತೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕ್ರಿಕೆಟ್‌ನ ಆರೋಗ್ಯದ ದೃಷ್ಟಿಯಿಂದ ಕೆಲ ನಿರ್ಧಾರಗಳು ಮುಖ್ಯವಾಗುತ್ತದೆ ಎಂದು ಆಸ್ಟ್ರೇಲಿಯಾದ ಕೋಚ್ ಆಗಿರವ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ ಅಟ್ಟಹಾಸದ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಾಗಿ ಸೆಪ್ಟೆಂಬರ್‌ನಲ್ಲಿ ಪ್ರವಾಸವನ್ನು ಕೈಗೊಳ್ಳಲಿದೆ. ಕ್ರಿಕೆಟ್‌ನ ಆರೋಗ್ಯದ ದೃಷ್ಟಿಯಿಂದ ಈ ಪ್ರವಾಸ ಅಗತ್ಯವಾಗಿದೆ ಎಂದು ಜಸ್ಟಿನ್ ಲ್ಯಾಂಗರ್ ಹೇಳಿಕೆ ನೀಡಿದ್ದಾರೆ.

ಧೋನಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಮ್ಯಾನೇಜರ್ಧೋನಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಮ್ಯಾನೇಜರ್

ನನ್ನ ಪ್ರಕಾರ ನಾವು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲೇ ಬೇಕಾಗಿದೆ. ಖಂಡಿತಾ ಇಲ್ಲಿ ಸಾಕಷ್ಟು ಸವಾಲುಗಳಿವೆ. ಆದರೆ ಅದು ಸಾಧ್ಯವಾದರೆ ಖಂಡಿತಾ ನಾವು ಪರಿಹಾರವನ್ನು ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಸ್ಟಿನ್ ಲ್ಯಾಂಗರ್ ಡೈಲಿ ಟೆಲಿಗ್ರಾಫ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಲ್ಯಾಂಗರ್ ತಿಳಿಸಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ಆಸಿಸ್ ಆಟಗಾರರ ಪಾಲ್ಗೊಳ್ಳುವಿಕೆ ಬಗ್ಗೆಯೂ ಲ್ಯಾಂಗರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಈ ವರ್ಷ ನಡೆಯುವುದು ಸಾಧ್ಯವಾದರೆ ಪ್ರಮುಖ ಆಟಗಾರರಿಗೆ ಅವಕಾಶ ಸಿಗಬೇಕು. ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್ ಆರಂಭವಾದರೂ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಪ್ಯಾಟ್ ಕಮ್ಮಿನ್ಸ್ ಅವರಂತಾ ಆಟಗಾರರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದಿದ್ದಾರೆ.

ಏಷ್ಯಾ ಕಪ್ 2020 ರದ್ದುಗೊಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಏಷ್ಯಾ ಕಪ್ 2020 ರದ್ದುಗೊಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಕೊರೊನಾ ವೈರಸ್‌ನ ಕಾರಣದಿಂದಾಗಿ ಪ್ರಮುಖ ಟೂರ್ನಿಗಳು ಮುಂದೂಡಲ್ಪಟ್ಟಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ಆರಂಭವಾಗಬೇಕಿದ್ದ ವಿಶ್ವಕಪ್ ಮುಂದೂಡಿಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಈ ಬಗ್ಗೆ ಐಸಿಸಿ ಇನ್ನೂ ತನ್ನ ನಿಲುವು ಅಧಿಕೃತಪಡಿಸಿಲ್ಲ.

Story first published: Thursday, July 9, 2020, 16:15 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X