ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಹ ಆಟಗಾರರ ನಡವಳಿಕೆಯಿಂದ ನಿವೃತ್ತಿ ಘೋಷಿಸಲು ಚಿಂತಿಸಿದ್ದೆ ಎಂದು ಆ ಕೆಟ್ಟ ಘಟನೆ ಬಿಚ್ಚಿಟ್ಟ ಅಶ್ವಿನ್!

I thought about retirement for a lot of reasons in between 2018 and 2020 says Ravichandran Ashwin

ರವಿಚಂದ್ರನ್ ಅಶ್ವಿನ್, ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತ ತಂಡದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿರುವಂತಹ ಪ್ರತಿಭಾವಂತ ಕ್ರಿಕೆಟಿಗ. ಸದ್ಯ ಟೆಸ್ಟ್ ಸರಣಿ ಯಾವುದೇ ದೇಶದ ನೆಲದಲ್ಲಿರಲಿ, ಎಂತಹದ್ದೇ ಪಿಚ್ ಆಗಿರಲಿ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ರವಿಚಂದ್ರನ್ ಅಶ್ವಿನ್ ಅವರು ಇದ್ದರೆ ವಿಕೆಟ್ ಕಬಳಿಸಲಿದ್ದಾರೆ ಎಂಬ ನಂಬಿಕೆ ಅಭಿಮಾನಿಗಳದ್ದು. ಹೀಗೆ ಸದ್ಯ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಖಾಯಂ ಸದಸ್ಯನಾಗಿರುವ ರವಿಚಂದ್ರನ್ ಅಶ್ವಿನ್ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಿಗೂ ಕಡ್ಡಾಯವಾಗಿ ಬೇಕಿರುವ ಸ್ಪಿನ್ ಮಾಂತ್ರಿಕ.

ಪಾಕ್ ಸ್ಟಾರ್ ಕ್ರಿಕೆಟಿಗರ ಕರ್ಮಕಾಂಡ: ಬಾಬರ್ ನಂತರ ಮತ್ತೋರ್ವನ ವಿರುದ್ಧ ಅತ್ಯಾಚಾರ ಆರೋಪ!ಪಾಕ್ ಸ್ಟಾರ್ ಕ್ರಿಕೆಟಿಗರ ಕರ್ಮಕಾಂಡ: ಬಾಬರ್ ನಂತರ ಮತ್ತೋರ್ವನ ವಿರುದ್ಧ ಅತ್ಯಾಚಾರ ಆರೋಪ!

ಪ್ರಸ್ತುತ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಸಾಲುಸಾಲು ಅವಕಾಶಗಳನ್ನು ಪಡೆದುಕೊಂಡು ಕಣಕ್ಕಿಳಿಯುವಂತಹ ಆಟಗಾರನಾಗಿರುವ ರವಿಚಂದ್ರನ್ ಅಶ್ವಿನ್ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಯನ್ನಾಡಲು ಸಜ್ಜಾಗುತ್ತಿರುವ ಭಾರತ ತಂಡದಲ್ಲಿಯೂ ಸ್ಥಾನ ಪಡೆದುಕೊಂಡಿದ್ದಾರೆ. ಹೌದು, ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯನ್ನಾಡಲು ಮೈದಾನಕ್ಕಿಳಿದು ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದು ರವಿಚಂದ್ರನ್ ಅಶ್ವಿನ್ ಇದೇ ಸಮಯದಲ್ಲಿ ಈ ಹಿಂದೆ ತಾವು ಎದುರಿಸಿದ್ದ ಕಠಿಣ ಸಮಯಗಳನ್ನು ಮೆಲುಕು ಹಾಕಿದ್ದಾರೆ.

IPL 2022: ಆಟಗಾರರ ಹರಾಜು ಪ್ರಕ್ರಿಯೆ ಮತ್ತಷ್ಟು ವಿಳಂಬ, ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆIPL 2022: ಆಟಗಾರರ ಹರಾಜು ಪ್ರಕ್ರಿಯೆ ಮತ್ತಷ್ಟು ವಿಳಂಬ, ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ

ಹೌದು, ರವಿಚಂದ್ರನ್ ಅಶ್ವಿನ್ ಈಗ ಬಹುಬೇಡಿಕೆಯ ಸ್ಪಿನ್ನರ್ ಇರಬಹುದು. ಆದರೆ ಕಳೆದ 3 ವರ್ಷಗಳ ಹಿಂದೆ ಗಾಯದ ಸಮಸ್ಯೆಗೆ ಒಳಗಾಗಿದ್ದ ರವಿಚಂದ್ರನ್ ಅಶ್ವಿನ್ ಅನುಭವಿಸಿದ್ದ ಪಾಡು ಒಂದೆರಡಲ್ಲ. 2018- 2020ರವರೆಗೆ ಸತತ 2 ವರ್ಷಗಳ ಕಾಲ ಅವಕಾಶ ಸಿಗದೇ ತಾವು ಪರಿತಪಿಸಿದ್ದ ಸಮಯದ ಕುರಿತು ರವಿಚಂದ್ರನ್ ಅಶ್ವಿನ್ ಹಂಚಿಕೊಂಡಿದ್ದು ಈ ಕೆಳಕಂಡಂತೆ ತಮ್ಮ ಕೆಟ್ಟ ದಿನಗಳನ್ನು ಮೆಲುಕು ಹಾಕಿದ್ದಾರೆ..

ನಿವೃತ್ತಿ ಘೋಷಿಸಲು ಚಿಂತಿಸಿದ್ದೆ ಎಂದ ರವಿಚಂದ್ರನ್ ಅಶ್ವಿನ್

ನಿವೃತ್ತಿ ಘೋಷಿಸಲು ಚಿಂತಿಸಿದ್ದೆ ಎಂದ ರವಿಚಂದ್ರನ್ ಅಶ್ವಿನ್

"ನಾನು ಹಲವಾರು ಕಾರಣಗಳಿಂದ ಕ್ರಿಕೆಟ್ ನಿವೃತ್ತಿ ಪಡೆಯುವ ಚಿಂತನೆಯನ್ನು ನಡೆಸಿದ್ದೆ. ನಾನೂ ಗಾಯಕ್ಕೊಳಗಾಗಿದ್ದರು ಸಹ ಯಾರೊಬ್ಬರೂ ನನ್ನ ಬೆಂಬಲಕ್ಕೆ ಬರಲಿಲ್ಲ, ಹೀಗಾಗಿ ಜನರಿಗೆ ನನ್ನ ಗಾಯದ ಸಮಸ್ಯೆ ಸೂಕ್ಷ್ಮವಾದ ವಿಚಾರವಲ್ಲ ಎಂದು ನನಗೆ ಅನಿಸಿತ್ತು. ಹೀಗೆ ಗಾಯದ ಸಮಸ್ಯೆಗೆ ಒಳಗಾದ ಹಲವಾರು ಆಟಗಾರರನ್ನು ಬೆಂಬಲಿಸಿದ್ದ ಸದಸ್ಯರು ನನಗೇಕೆ ಬೆಂಬಲ ನೀಡಲಿಲ್ಲ ಎಂಬ ಪ್ರಶ್ನೆಯೂ ಕಾಡಿತ್ತು" ಎಂದು ರವಿಚಂದ್ರನ್ ಅಶ್ವಿನ್ ಬೇಸರ ವ್ಯಕ್ತಪಡಿಸಿದರು.

ನಾನು ತಂಡಕ್ಕೆ ಅಪಾರ ಕೊಡುಗೆ ನೀಡಿದ್ದೆ, ಆದರೆ ತಂಡದಿಂದ ಬೆಂಬಲ ಬರಲಿಲ್ಲ

ನಾನು ತಂಡಕ್ಕೆ ಅಪಾರ ಕೊಡುಗೆ ನೀಡಿದ್ದೆ, ಆದರೆ ತಂಡದಿಂದ ಬೆಂಬಲ ಬರಲಿಲ್ಲ

ಹೀಗೆ ಗಾಯದ ಸಮಸ್ಯೆಗೆ ಒಳಗಾಗಿ ಅವಕಾಶಗಳನ್ನು ಕಳೆದುಕೊಂಡು ಬೆಂಬಲ ಸಿಗದೇ ಒಂಟಿಯಾಗಿದ್ದ ದಿನಗಳನ್ನು ಮೆಲುಕು ಹಾಕಿರುವ ರವಿಚಂದ್ರನ್ ಅಶ್ವಿನ್ ನಾನು ತಂಡಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದು ಹಲವಾರು ಪಂದ್ಯಗಳನ್ನು ಗೆಲ್ಲಿಸಿದ್ದೇನೆ, ಆದರೂ ಸಹ ನನಗೆ ತಂಡದಿಂದ ಸಿಗಬೇಕಾದ ಬೆಂಬಲ ಮಾತ್ರ ಸಿಗದೇ ಇದ್ದದ್ದು ಮನಸ್ಸಿಗೆ ತುಂಬಾ ಬೇಸರ ತಂದೊಡ್ಡಿತ್ತು ಎಂದು ರವಿಚಂದ್ರನ್ ಅಶ್ವಿನ್ ಆ ಕೆಟ್ಟ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿ | Oneindia Kannada
ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ಈ ಇಬ್ಬರೇ ಎಂದ ಅಶ್ವಿನ್

ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ಈ ಇಬ್ಬರೇ ಎಂದ ಅಶ್ವಿನ್

2018ರಲ್ಲಿ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯ ಮತ್ತು ಅದೇ ವರ್ಷ ಅಡಿಲೇಡ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ನಂತರ ಗಾಯದ ಸಮಸ್ಯೆಗೆ ಒಳಗಾಗಿ ಹೊರಬಿದ್ದ ರವಿಚಂದ್ರನ್ ಅಶ್ವಿನ್ ಆ ಸಮಯದಲ್ಲಿ ತಂಡದ ಸದಸ್ಯರಾರೂ ಬೆಂಬಲ ಸೂಚಿಸದೆ ಇದ್ದಾಗ ತನಗೆ ಸಂಪೂರ್ಣ ಬೆಂಬಲ ನೀಡಿದ ತನ್ನ ಪತ್ನಿ ಮತ್ತು ತಂದೆಯನ್ನು ಹೊಗಳಿದ್ದಾರೆ. ಆ ಸಮಯದಲ್ಲಿ ತನ್ನ ಪತ್ನಿ ಸದಾ ತನ್ನೊಡನೆ ಮಾತನಾಡುತ್ತಾ ಧೈರ್ಯ ತುಂಬುತ್ತಿದ್ದರು ಮತ್ತು ತನ್ನ ತಂದೆ ವೈಟ್ ಬಾಲ್ ಕ್ರಿಕೆಟ್ ಮಾದರಿಗಳಲ್ಲಿ ಮತ್ತೆ ತನ್ನನ್ನು ಸಾಯುವುದರೊಳಗೆ ಖಂಡಿತಾ ನೋಡುತ್ತೇನೆ ಎಂದು ಧೈರ್ಯವನ್ನು ತುಂಬಿದರು ಎಂದು ರವಿಚಂದ್ರನ್ ಅಶ್ವಿನ್ ಹೇಳಿಕೊಂಡಿದ್ದಾರೆ.

Story first published: Tuesday, December 21, 2021, 14:53 [IST]
Other articles published on Dec 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X