ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಬಗ್ಗೆ ಕಾಮೆಂಟ್ ಮಾಡಿದ ಶೋಯೆಬ್ ಅಖ್ತರ್

I thought India is better team than this, they dont need to be scared: Shoaib Akhtar

ಕರಾಚಿ: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಈಗ ಸಾಕಷ್ಟು ಸುದ್ದಿಯಲ್ಲಿದೆ. ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದ ಮೊಟೆರಾ ಸ್ಟೇಡಿಯಂ ಈಗ ಟೆಸ್ಟ್‌ ಕ್ರಿಕೆಟ್‌ಗೆ ಕೆಟ್ಟ ಸ್ಟೇಡಿಯಂ ಎಂದು ಕರೆಸಿಕೊಳ್ಳುತ್ತಿದೆ. ಈ ಸ್ಟೇಡಿಯಂನ ಪಿಚ್‌ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.

ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆರ್ಭಟ, ಮುಂಬೈಗೆ ದಾಖಲೆಯ ಗೆಲುವು!ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಆರ್ಭಟ, ಮುಂಬೈಗೆ ದಾಖಲೆಯ ಗೆಲುವು!

ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಮೊಟೆರಾ ಪಿಚ್ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅಖ್ತರ್, 'ಟೆಸ್ಟ್‌ ಪಂದ್ಯಗಳು ಇಂಥ ಪಿಚ್‌ಗಳಲ್ಲಿ ನಡೆಯಬೇಕೆ? ಖಂಡಿತಾ ಇಲ್ಲ. ಕಾರಣವಿಲ್ಲದೆ ಬೇಕಾಬಿಟ್ಟಿ ತಿರುಗುವ, ಎರಡನೇ ದಿನದಲ್ಲಿ ಪಂದ್ಯ ಮುಗಿಯುವ ಪಿಚ್ ಆಗಿದ್ದರೆ ಅದು ಟೆಸ್ಟ್‌ಗೆ ಒಳ್ಳೆಯ ಪಿಚ್ ಅಲ್ಲ' ಎಂದಿದ್ದಾರೆ.

'ತವರಿನ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಹೆಚ್ಚು ಅನುಕೂಲಗಳಿರುತ್ತವೆ ಅನ್ನೋ ಪರಿಕಲ್ಪನೆ ನನಗೆ ಅರ್ಥವಾಗುತ್ತದೆ. ಆದರೆ ಮೊಟೆರಾದಲ್ಲಿ ನಮ್ಮ ಎಣಿಕೆಗಿಂತಲೂ ಹೆಚ್ಚೇ ಅನುಕೂಲ ಇದೆ ಎಂದು ನನಗನ್ನಿಸುತ್ತದೆ. ಭಾರತ 400 ರನ್ ಗಳಿಸಿ, ಇಂಗ್ಲೆಂಡ್ 200 ರನ್‌ನಿಂದ ಸೋತಿದ್ದರೆ ಆಂಗ್ಲರದ್ದು ಕಳಪೆ ಬ್ಯಾಟಿಂಗ್‌ ಎನ್ನಬಹುದಿತ್ತು. ಆದರೆ ಇಲ್ಲಿ ಭಾರತ ಕೂಡ 145ಕ್ಕೆ ಆಲ್ ಔಟ್ ಆಗಿತ್ತು,' ಎಂದು ಅಖ್ತರ್ ವಿವರಿಸಿದ್ದಾರೆ.

ರೋಡ್ ಸೇಫ್ಟಿ ಸೀರೀಸ್: ಭಾರತ ಸೇರಿ ಎಲ್ಲಾ 6 ದೇಶಗಳ ತಂಡಗಳ/ಆಟಗಾರರ ಪಟ್ಟಿರೋಡ್ ಸೇಫ್ಟಿ ಸೀರೀಸ್: ಭಾರತ ಸೇರಿ ಎಲ್ಲಾ 6 ದೇಶಗಳ ತಂಡಗಳ/ಆಟಗಾರರ ಪಟ್ಟಿ

ಆಸ್ಟ್ರೇಲಿಯಾದಲ್ಲೂ ಭಾರತ ತಂಡ ಮುಂದೆ ಇಂಥದ್ದೇ ಸ್ಪಿನ್ ಬಲೆಗೆ ಸಿಲುಕುವ ಬಗ್ಗೆ ಮಾತನಾಡಿರುವ ಅಖ್ತರ್, 'ಭಾರತ ಒಂದು ದೊಡ್ಡ ಮತ್ತು ಉತ್ತಮ ತಂಡ. ಹೀಗಾಗಿ ಅಹ್ಮದಾಬಾದ್‌ ನಲ್ಲಿ ನ್ಯಾಯಯುತ, ಒಳ್ಳೆಯ ಪಿಚ್ ಇದ್ದರೂ ಭಾರತ ಇಂಗ್ಲೆಂಡ್ ಅನ್ನು ಸೋಲಿಸುತ್ತಿತ್ತು. ಆಸ್ಟ್ರೇಲಿಯಾದಲ್ಲಿ ಸ್ಪಿನ್ ಪಿಚ್ ಇದ್ದರೆ ಭಾರತ ಹೆದರಬೇಕೆಂದೇನೂ ಇಲ್ಲ. ಸ್ಪಿನ್‌ಗಾಗಿ ಭಾರತ ವಿಶೇಷ ತಯಾರಿ ಮಾಡಬೇಕು ಅಂತೇನೂ ಇಲ್ಲ,' ಎಂದು ಅಖ್ತರ್ ಹೇಳಿದ್ದಾರೆ.

Story first published: Monday, March 1, 2021, 20:41 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X