ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬರೀ ಬೌಲರ್ ಅಲ್ಲ, ಬ್ಯಾಟ್ಸ್ಮನ್ ಅನ್ನಿಸಿಕೊಳ್ಳಲೂ ನಾನು ಬಯಸಿದ್ದೇನೆ'

I Want To Be The New Ball Bowler Who Can Bat Too: Deepak Chahar

ಚೆನ್ನೈ, ಅಕ್ಟೋಬರ್ 10: ಐಪಿಎಲ್ ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಗಾಗಿ ಆಡಿದ್ದ ದೀಪಕ್ ಚಾಹರ್ ಟೀಮ್ ಇಂಡಿಯಾದಲ್ಲಿ ನೆಲೆಯೂರಲು ಬಯಸಿದ್ದಷ್ಟೇ ಅಲ್ಲ, ಅದಕ್ಕಾಗಿ ಪರಿಶ್ರಮ ಪಡುತ್ತಲೂ ಇದ್ದಾರೆ. ಜೊತೆಗೆ ಚಾಹರ್ ಅವರಿಗೆ ಬ್ಯಾಟ್ಮನ್ ಆಗಿ ಗುರುತಿಸಿಕೊಳ್ಳುವ ಹಂಬಲವೂ ಇದೆ.

'ಏಷ್ಯಾಕಪ್ ಟ್ರೋಫಿ ನನಗೆ ಹಿಡಿಯಲು ಬಿಡುವಂತೆ ರೋಹಿತ್ ಗೆ ಧೋನಿ ಹೇಳಿದ್ರು''ಏಷ್ಯಾಕಪ್ ಟ್ರೋಫಿ ನನಗೆ ಹಿಡಿಯಲು ಬಿಡುವಂತೆ ರೋಹಿತ್ ಗೆ ಧೋನಿ ಹೇಳಿದ್ರು'

ಈ ಬಗ್ಗೆ ಮಾತನಾಡುತ್ತ ಚಾಹರ್, 'ನಾನು ಬ್ಯಾಟಿಂಗ್ ಕೂಡ ಮಾಡಬಲ್ಲೆ. ಹೀಗಾಗಿಯೇ ಏಷ್ಯಾ ಕಪ್ ನಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಬದಲಿ ಆಟಗಾರನಾಗಿ ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಲಾಯ್ತು. ಉತ್ತಮ ಬ್ಯಾಟ್ಸ್ಮನ್ ಆಗಿ ಸ್ವತಃ ನನ್ನನ್ನು ನಾನು ಗುರುತಿಸಿಕೊಳ್ಳಲು ಬಯಸಿದ್ದೇನೆ' ಎಂದರು.

ಸರ್ಫಿಂಗ್ ಮಾಡುವಾಗ ಬೆನ್ನುಮೂಳೆ ಮುರಿದುಕೊಂಡ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ಸರ್ಫಿಂಗ್ ಮಾಡುವಾಗ ಬೆನ್ನುಮೂಳೆ ಮುರಿದುಕೊಂಡ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್

'ತಂಡದಲ್ಲಿ ನಾನು ನೆಲೆಯೂರಲು ಬಯಸಿದ್ದೇನೆ ನಿಜ. ಆದರೆ ತಂಡದಲ್ಲಿ ಯಾವತ್ತೂ ಉಳಿದುಕೊಳ್ಳುವುದು ನನ್ನ ಪಾಲಿಗೆ ಸುಲಭವಿಲ್ಲ ಎಂಬ ಅರಿವೂ ಇದೆ' ಎಂದು ದೀಪಕ್ ಹೇಳಿದರು. ದೋನಿ ನಾಯಕತ್ವದಲ್ಲಿ ಏಷ್ಯಾಕಪ್ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ದೀಪಕ್ ಗೆ ಅವಕಾಶ ಲಭಿಸಿತ್ತು. ಆ ಪಂದ್ಯ ಟೈ ಅನ್ನಿಸಿಕೊಂಡಿತ್ತು. ದೀಪಕ್ ಬ್ಯಾಟಿಂಗ್ ಗಾಗಿ ಆ ವೇಳೆ ಗಮನ ಸೆಳೆದಿದ್ದರು.

ಬೌಲರ್ ಕಮ್ ಬ್ಯಾಟ್ಸ್ಮನ್ ಆಗಬೇಕು

ಬೌಲರ್ ಕಮ್ ಬ್ಯಾಟ್ಸ್ಮನ್ ಆಗಬೇಕು

'ಹೊಸ ಚೆಂಡೊಂದಕ್ಕೆ ಆಡಬಲ್ಲ ಹೊಸ ಬೌಲರ್, ಹೊಸ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಳ್ಳಲು ನಾನು ಬಯಸಿದ್ದೇನೆ. ಈ ನೆಲೆಯಲ್ಲಿ ನಾನು ತರಬೇತಿ ನಡೆಸಬೇಕಿದೆ. ಆಯ್ಕೆ ಸಮಿತಿ ನನ್ನನ್ನು ಆರಿಸಬೇಕು. ನಾನು ಆಲ್ ರೌಂಡರ್ ಅನ್ನುವ ಕಾರಣಕ್ಕೆ ಆರಿಸುವಂತಾಗಬೇಕು' ಎಂದು ಚಾಹರ್ ತನ್ನ ಮನದ ಇಂಗಿತವನ್ನು ಹೊರ ಹಾಕಿದರು.

ಧೋನಿಯಿಂದಾಗಿ ಅವಕಾಶ

ಧೋನಿಯಿಂದಾಗಿ ಅವಕಾಶ

'ಐಪಿಎಲ್ ಟೂರ್ನಿಯ ಪಂದ್ಯಗಳಲ್ಲಿ ನಾನು ರನ್ ಗಳಿಸಿದ್ದೇನೆ. ಮಾಹಿ ಭಾಯಿಯಿಂದಾಗಿ ಇದಕ್ಕೆ ನನಗೆ ಅವಕಾಶ ದೊರೆಯಿತು. ನನ್ನ ಶಕ್ತಿಯನ್ನು ತೋರಿಸಿಕೊಳ್ಳಲು ನನಗೀವರ್ಷ ಸಾಕಷ್ಟು ಅವಕಾಶಗಳಿವೆ ಅಂತ ಭಾವಿಸಿದ್ದೇನೆ' ಎಂದು ದೀಪಕ್ ತಿಳಿಸಿದರು.

ತಂಡದಲ್ಲಿ ಸ್ಥಾನ ಗಳಿಸುವುದು ಸುಲಭವಿಲ್ಲ

ತಂಡದಲ್ಲಿ ಸ್ಥಾನ ಗಳಿಸುವುದು ಸುಲಭವಿಲ್ಲ

'ವೇಗಿ ಬೌಲರ್ ಒಬ್ಬ ಬ್ಯಾಟಿಂಗೂ ಮಾಡುವಂತಾದರೆ ತಂಡಕ್ಕೊಂದು ಸಮತೋಲನ ಲಭಿಸುತ್ತದೆ. ಅದೂ ಭಾರತದಂತಹ ನಂ.1 ತಂಡದಲ್ಲಿ ಸ್ಥಾನ ಲಭಿಸಬೇಕಾದರೆ ಅದಕ್ಕೆ ತಕ್ಹಾಗೆ ನಮ್ಮ ವರ್ತನೆ, ಸಾಧನೆಯಿರಬೇಕು' ಎಂದು ಚಾಹರ್ ಅಭಿಪ್ರಾಯಿಸಿದರು.

ಐಪಿಎಲ್ ನಲ್ಲಿ ಬ್ಯಾಟ್ಸ್ಮನ್

ಐಪಿಎಲ್ ನಲ್ಲಿ ಬ್ಯಾಟ್ಸ್ಮನ್

ಮಂಗಳವಾರ (ಅಕ್ಟೋಬರ್ 9) ಚೆನ್ನೈ ಯಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಹರ್ ಅವರನ್ನೊಳಗೊಂಡ ರಾಜಸ್ತಾನ್ ತಂಡ ಎಲೈಟ್ ಗ್ರೂಪ್ ಸಿಯ ಪಂದ್ಯದಲ್ಲಿ ಸರ್ವೀಸಸ್ ತಂಡವನ್ನು ಭರ್ಜರಿ ಏಳು ವಿಕೆಟ್ ನಿಂದ ಮಣಿಸಿತ್ತು. ಈ ವೇಳೆ ಮಾತಿಗೆ ಸಿಕ್ಕ ಚಾಹರ್, 'ಮುಂಬರಲಿರುವ ಐಪಿಎಲ್ ನಲ್ಲಿ ಬ್ಯಾಟಿಂಗ್ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುವುವತ್ತ ನಾನು ಪ್ರಯತ್ನಿಸುವುದರಲ್ಲಿದ್ದೇನೆ' ಎಂದರು.

Story first published: Wednesday, October 10, 2018, 16:27 [IST]
Other articles published on Oct 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X