'ಟೀಮ್ ಇಂಡಿಯಾವನ್ನು ನೋಡಿ ಕಲಿಯಿರಿ'; ಪಾಕಿಸ್ತಾನ ಮಾಡಿದ ಕೆಲಸಕ್ಕೆ ಕಿಡಿಕಾರಿದ ವಾಸಿಂ ಅಕ್ರಂ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ನ ದೇಶದ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. ಹೌದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಪಂದ್ಯಗಳ ಆಯೋಜನೆ ಕುರಿತು ಕಿಡಿ ಕಾರಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವುಟೋಕಿಯೋ ಒಲಿಂಪಿಕ್ಸ್: ಪಿ ವಿ ಸಿಂಧುಗೆ ಮತ್ತೊಂದು ಗೆಲುವು

ಪಾಕಿಸ್ತಾನ ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ವಿರುದ್ಧ ಟಿ ಟ್ವೆಂಟಿ ಮತ್ತು ಏಕದಿನ ಸರಣಿಗಳನ್ನು ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿತ್ತು. ಜುಲೈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಯಾವುದೇ ಪಂದ್ಯವನ್ನೂ ಗೆಲ್ಲದೆ 0-3 ಅಂತರದಲ್ಲಿ ಸೋಲುಂಡಿತ್ತು.

ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್ಕೊಹ್ಲಿ ಅಲ್ಲ ಆ ಭಾರತೀಯ ಕ್ರಿಕೆಟಿಗ ಧೋನಿ ರೀತಿಯ ಚಾಣಾಕ್ಷ ನಾಯಕ ಎಂದ ಕಮ್ರಾನ್ ಅಕ್ಮಲ್

ನಂತರ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಮೊದಲ ಪಂದ್ಯವನ್ನು ಪಾಕಿಸ್ತಾನ ತಂಡ ಗೆದ್ದು ಶುಭಾರಂಭ ಮಾಡಿತು. ಆದರೆ ಉಳಿದ 2 ಟಿ ಟ್ವೆಂಟಿ ಪಂದ್ಯಗಳನ್ನು ಇಂಗ್ಲೆಂಡ್ ಗೆಲ್ಲುವುದರ ಮೂಲಕ ಟಿ ಟ್ವೆಂಟಿ ಸರಣಿಯನ್ನು ಕೈವಶ ಮಾಡಿಕೊಂಡಿತು. ಹೀಗಾಗಿ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆ ರೀತಿಯ ತಂಡದ ಮೇಲೆ ಮಾತ್ರ ಗೆಲುವು ಸಾಧಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಎದುರಾದವು.

'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ'ಆತ ಕೊಹ್ಲಿ, ರೋಹಿತ್‌ಗಿಂತ ಕಡಿಮೆಯೇನಲ್ಲ'; ಟೀಮ್ ಇಂಡಿಯಾದ ಆ ಆಟಗಾರನನ್ನು ಹೊಗಳಿದ ನೆಹ್ರಾ

ಈ ಕುರಿತು ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಪ್ರತಿಕ್ರಿಯಿಸಿದ್ದು ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಪದೇ ಪದೇ ಸರಣಿಗಳನ್ನು ಆಯೋಜಿಸುತ್ತಿರುವುದರಿಂದಲೇ ಪಾಕಿಸ್ತಾನವು ಬಲಿಷ್ಠ ತಂಡಗಳ ಮುಂದೆ ಮಂಕಾಗುತ್ತಿದೆ ಎಂದಿದ್ದಾರೆ. ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಪಂದ್ಯಗಳನ್ನು ಆಯೋಜಿಸುವ ಕುರಿತು ಮತ್ತು ಭಾರತ ತಂಡದ ಕುರಿತು ವಾಸಿಂ ಅಕ್ರಂ ಈ ಕೆಳಕಂಡಂತೆ ಮಾತನಾಡಿದ್ದಾರೆ.

ಜಿಂಬಾಬ್ವೆ ಜೊತೆ ಪಂದ್ಯಗಳನ್ನು ಆಯೋಜಿಸುತ್ತಿರುವವನನ್ನು ನಾನು ಭೇಟಿಯಾಗಬೇಕು

ಜಿಂಬಾಬ್ವೆ ಜೊತೆ ಪಂದ್ಯಗಳನ್ನು ಆಯೋಜಿಸುತ್ತಿರುವವನನ್ನು ನಾನು ಭೇಟಿಯಾಗಬೇಕು

ಹೀಗೆ ಜಿಂಬಾಂಬ್ವೆ ವಿರುದ್ಧದ ಸರಣಿಗಳನ್ನು ಆಯೋಜಿಸುತ್ತಿರುವವರ ವಿರುದ್ಧ ಕಿಡಿಕಾರಿದ ವಾಸಿಂ ಅಕ್ರಂ 'ಜಿಂಬಾಬ್ವೆ ವಿರುದ್ಧ ಸರಣಿ ಆಯೋಜಿಸುತ್ತಿರುವ ಮಹಾನುಭಾವನನ್ನು ನಾನು ಭೇಟಿಯಾಗಬೇಕು ಮತ್ತು ಆತ ಮಾಡಿರುವ ಮಹತ್ಕಾರ್ಯಕ್ಕೆ ಆತನನ್ನು ಹೊಗಳಿ ಕೊಂಡಾಡಬೇಕು' ಎಂದು ವಾಸಿಂ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಕಾಲೆಳೆದಿದ್ದಾರೆ.

ಟೀಮ್ ಇಂಡಿಯಾವನ್ನು ನೋಡಿ ಕಲಿಯಿರಿ

ಟೀಮ್ ಇಂಡಿಯಾವನ್ನು ನೋಡಿ ಕಲಿಯಿರಿ

ಇನ್ನೂ ಮುಂದುವರಿದು ಮಾತನಾಡಿರುವ ವಾಸಿಂ ಅಕ್ರಂ ಭಾರತ ತಂಡವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಅತ್ತ ಭಾರತ ತಂಡವನ್ನು ನೋಡಿ 2 ತಂಡಗಳನ್ನು ವಿಂಗಡಿಸಿಕೊಂಡು ದೊಡ್ಡ ದೊಡ್ಡ ರಾಷ್ಟ್ರಗಳ ವಿರುದ್ಧ ಸರಣಿಗಳನ್ನು ಆಡುತ್ತಿದ್ದಾರೆ. ಒಂದು ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರೆ ಮತ್ತೊಂದು ತಂಡ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದೆ, ಅವರು 10 ವರ್ಷಗಳಿಂದ ತಮ್ಮ ತಂಡವನ್ನು ಗಟ್ಟಿಗೊಳಿಸುತ್ತಾ ಬಂದು ಈ ಮಟ್ಟವನ್ನು ತಲುಪಿದ್ದಾರೆ ಎಂದು ವಾಸಿಂ ಅಕ್ರಂ ಭಾರತ ತಂಡವನ್ನು ಕೊಂಡಾಡಿದರು.

ಭಾರತ ತಂಡದ ಪ್ರಮುಖ ಆಟಗಾರರು ಎರಡನೇ ಪಂದ್ಯದಿಂದ ಆಚೆ | Oneindia Kannada
ಪಾಕಿಸ್ತಾನಕ್ಕೆ ಏನೂ ಲಾಭವಿಲ್ಲ

ಪಾಕಿಸ್ತಾನಕ್ಕೆ ಏನೂ ಲಾಭವಿಲ್ಲ

ಜಿಂಬಾಬ್ವೆ ವಿರುದ್ಧ ಪಂದ್ಯಗಳನ್ನು ಆಯೋಜಿಸುತ್ತಿರುವುದಕ್ಕೆ ಕಿಡಿಕಾರಿರುವ ವಾಸಿಂ ಅಕ್ರಂ ಅಂತಹ ತಂಡಗಳ ವಿರುದ್ಧ ಪಂದ್ಯವನ್ನು ಆಯೋಜಿಸಿದರೆ ಏನೂ ಲಾಭವಿಲ್ಲ ಎಂದಿದ್ದಾರೆ. 3 ಅಥವಾ 4 ವರ್ಷಗಳಿಗೊಮ್ಮೆ ಆದರೆ ಪರವಾಗಿಲ್ಲ, ಆದರೆ ಪದೇ ಪದೇ ಜಿಂಬಾಬ್ವೆ ವಿರುದ್ಧ ಪಂದ್ಯಗಳನ್ನು ಆಯೋಜಿಸಿದರೆ ಲಾಭವಾಗುವುದು ಜಿಂಬಾಬ್ವೆಗೆ ಹೊರತು ಪಾಕಿಸ್ತಾನಕ್ಕಲ್ಲ ಎಂದು ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 28, 2021, 12:22 [IST]
Other articles published on Jul 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X