ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸ ಪಂದ್ಯದಲ್ಲಿ ರಾಹುಲ್ ಆಡದಿರುವುದು ಅಚ್ಚರಿ ಮೂಡಿಸಿದೆ: ವಿವಿಎಸ್ ಲಕ್ಷ್ಮಣ್

I was surprised for KL Rahul not playing pink-ball practice match: VVS Laxman

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ಶುಕ್ರವಾರ ನಡೆಯಲಿದ್ದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ಸಂದರ್ಭದಲ್ಲಿ ಎರಡನೇ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಆಡದಿರುವುದು ನನಗೆ ಅಚ್ಚರಿಯನ್ನು ಮೂಡಿಸಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಸೀಮಿತ ಓವರ್‌ಗಳ ಸರಣಿ ಮುಕ್ತಾಯದ ನಂತರ ಭಾರತ ಎ ತಂಡ ಹಾಗೂ ಆಸ್ಟ್ರೇಲಿಯಾ ಎ ತಂಡಗಳು ಅಹರ್ನಿಶಿ ಅಭ್ಯಾಸ ಪಂದ್ಯವನ್ನು ಸಿಡ್ನಿಯಲ್ಲಿ ಆಡಿದ್ದವು. ಈ ಪಂದ್ಯ ಡೇ ನೈಡ್ ಪಂದ್ಯವಾಗಿತ್ತು. ಆದರೆ ಭಾರತ ಎ ತಂಡದ ಪರವಾಗಿ ಕೆಎಲ್ ರಾಹುಲ್ ಈ ಪಂದ್ಯದಲ್ಲೂ ಕಣಕ್ಕಿಳಿದಿರಲಿಲ್ಲ. ಇದಕ್ಕೆ ಲಕ್ಷ್ಮಣ್ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಅಡಿಲೇಡ್ ಟೆಸ್ಟ್‌ಗೆ ಇನ್ನೂ ಪ್ಲೇಯಿಂಗ್ XI ನಿರ್ಧಾರವಾಗಿಲ್ಲ: ಅಜಿಂಕ್ಯ ರಹಾನೆಅಡಿಲೇಡ್ ಟೆಸ್ಟ್‌ಗೆ ಇನ್ನೂ ಪ್ಲೇಯಿಂಗ್ XI ನಿರ್ಧಾರವಾಗಿಲ್ಲ: ಅಜಿಂಕ್ಯ ರಹಾನೆ

"ಪಿಂಕ್ ಬಾಲ್ ಅಭ್ಯಾಸ ಪಂದ್ಯವನ್ನು ನೋಡಿದಾಗ ನನಗೆ ಆಶ್ಚರ್ಯವಾಯಿತು. ಕೆಎಲ್ ರಾಹುಲ್ ಮಾತ್ರ ಪಿಂಕ್ ಬಾಲ್‌ನ ಏಕೈಕ ಅಭ್ಯಾಸ ಪಂದ್ಯದಲ್ಲಿ ಆಡಿರಲಿಲ್ಲ. ಹಾಗಾಗಿ ಆತ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವೆನಿಸುತ್ತಿದೆ. ಹೀಗಾಗಿ ಆರಂಭಿಕ ಸ್ಥಾನಕ್ಕೆ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಮಧ್ಯೆ ಮಾತ್ರವೇ ಸ್ಪರ್ಧೆಯಿರುವಂತೆ ತೋರುತ್ತದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಲಕ್ಷ್ಮಣ್ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಅವರು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯವನ್ನು ಆಡಲು ಬೇಕಾದಷ್ಟು ಅನುಭವವನ್ನು ಪಡೆದುಕೊಂಡಿಲ್ಲ ಎಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಜೊತೆಗೆ ಯಾರು ಇನ್ನಿಂಗ್ಸ್ ಆರಂಭಿಸಬೇಕು ಎಂಬುದು ಭಾರತಕ್ಕೆ ಬಹುದೊಡ್ಡ ಪ್ರಶ್ನೆಯಾಗಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಟೀಮ್ ಇಂಡಿಯಾ ಸೇರಲು ಆಸ್ಟ್ರೇಲಿಯಾಕ್ಕೆ ಹಾರಿದ ರೋಹಿತ್ ಶರ್ಮಾಟೀಮ್ ಇಂಡಿಯಾ ಸೇರಲು ಆಸ್ಟ್ರೇಲಿಯಾಕ್ಕೆ ಹಾರಿದ ರೋಹಿತ್ ಶರ್ಮಾ

"ಫೃಥ್ವಿ ಶಾ ಅವರ ಆತ್ಮವಿಶ್ವಾಸ ಕೆಳ ಮಟ್ಟದಲ್ಲಿದೆ. ಶುಭ್ಮನ್ ಗಿಲ್ ಒಂದೇಒಂದು ಟೆಸ್ಟ್ ಪಂದ್ಯವನ್ನೂ ಆಡಿದ ಅನುಭವ ಹೊಂದಿಲ್ಲ. ಹೀಗಾಗಿ ಈವರೆಗೆ ಆರಂಭಿಕ ಸ್ಥಾನಕ್ಕೆ ಅನುಭವದ ಕೊರತೆ ಕಾಡುತ್ತಿದೆ. ಹೀಗಾಗಿ ಯಾರನ್ನು ಮಯಾಂಕ್ ಅಗರ್ವಾಲ್ ಜೊತೆಗೆ ಆರಂಬಿಕನಾಗಿ ಕಣಕ್ಕಿಳಿಸಬೇಕು ಎಂಬುದು ವಿರಾಟ್ ಕೊಹ್ಲಿ ಮುಂದಿರುವ ಪ್ರಶ್ನೆಯಾಗಿದೆ ಎನಿಸುತ್ತಿದೆ" ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

Story first published: Wednesday, December 16, 2020, 12:48 [IST]
Other articles published on Dec 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X