ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್

I was surrounded by fixers such as Aamir and Asif, says Akhtar

ಬೆಂಗಳೂರು, ನವೆಂಬರ್ 03: 'ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ತುಂಬಿದ್ದರು. ಎದುರಾಳಿ ತಂಡದ 11 ಆಟಗಾರರೊಂದಿಗೆ ನನ್ನ ತಂಡದ 10 ಆಟಗಾರರ ವಿರುದ್ಧವೂ ಸೆಣಸಬೇಕಾಗಿತ್ತು ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

2011ರ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪಿಗಳಾದ ಸಲ್ಮಾನ್ ಬಟ್, ವೇಗಿ ಮೊಹಮ್ಮದ್ ಆಮಿರ್, ಮೊಹಮ್ಮದ್ ಆಸಿಫ್ ಅವರ ಜೊತೆ ಆಡಿದ್ದ ಅಖ್ತರು ನಿಷೇಧಕ್ಕೆ ಒಳಗಾದ ಆಟಗಾರರ ಬಗ್ಗೆ ಮಾತನಾಡಿದರು.

ಶೋಯೆಬ್ ಅಖ್ತರ್ ಟ್ವೀಟ್‌ಗೆ ತಮಾಷೆಗಾಗಿ ಪ್ರತಿಕ್ರಿಯಿಸಿದ ಯುವರಾಜ್ಶೋಯೆಬ್ ಅಖ್ತರ್ ಟ್ವೀಟ್‌ಗೆ ತಮಾಷೆಗಾಗಿ ಪ್ರತಿಕ್ರಿಯಿಸಿದ ಯುವರಾಜ್

ಪ್ರತಿ ಬಾರಿ ಮೈದಾನಕ್ಕೆ ಇಳಿದರೆ 21 ಆಟಗಾರರ ವಿರುದ್ಧ ಸೆಣಸಬೇಕಾಗಿತ್ತು. ಯಾರು ಮ್ಯಾಚ್ ಫಿಕ್ಸರ್ ಗಳೇ ತುಂಬಿದ್ದರು. ಆಸಿಫ್ ಮಾತ್ರ ಒಮ್ಮೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದ, ನಾನು ಪಾಕಿಸ್ತಾನಕ್ಕೆ ಎಂದಿಗೂ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ನನ್ನಲ್ಲಿತ್ತು ಎಂದು 'ರಿವೈಂಡ್ ವಿಥ್ ಸಮೀನಾ ಪೀರ್ಜಾದಾ ಶೋದಲ್ಲಿ ಅಖ್ತರ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಆಮಿರ್ ಹಾಗೂ ಆಸಿಫ್ ಭ್ರಷ್ಟಾಚಾರದಲ್ಲಿ ತೊಡಗಿರುವುದು ಗೊತ್ತಾಯ್ತು. ಇಬ್ಬರಿಗೂ ಪ್ರತಿಭೆಯಿತ್ತು. ಇಂಥ ಕೃತ್ಯದಲ್ಲಿ ತೊಡಗಿ ವೃತ್ತಿ ಬದುಕು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು ಎಂದು 44 ವರ್ಷ ವಯಸ್ಸಿನ ವೇಗಿ ಅಖ್ತರ್ ಹೇಳಿದರು.

ಪಾಕ್‌ ವೇಗಿ ಮೊಹಮ್ಮದ್ ಅಮೀರ್ ಮೇಲೆ ಸಿಡುಕಾಡಿದ ಅಕ್ರಮ್, ಅಖ್ತರ್!ಪಾಕ್‌ ವೇಗಿ ಮೊಹಮ್ಮದ್ ಅಮೀರ್ ಮೇಲೆ ಸಿಡುಕಾಡಿದ ಅಕ್ರಮ್, ಅಖ್ತರ್!

ಸಲ್ಮಾನ್ ಬಟ್, ವೇಗಿ ಮೊಹಮ್ಮದ್ ಆಮಿರ್, ಮೊಹಮ್ಮದ್ ಆಸಿಫ್ ಮೂವರು ನಿಷೇಧಕ್ಕೊಳಗಾದರು. ನಂತರ ಮೊಹಮ್ಮದ್ ಆಮಿರ್ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮತ್ತೆ ಮರಳಲು ಸಾಧ್ಯವಾಯಿತು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಯಿತು. ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದಲ್ಲಿದ್ದರು.

Story first published: Sunday, November 3, 2019, 12:55 [IST]
Other articles published on Nov 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X