ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಸಿಕ್ಕ ಅವಕಾಶ ಬಳಸಿಕೊಂಡರು, ನಾನು ಅನ್‌ಲಕ್ಕಿ ಅಲ್ಲ ಎಂದ ಪಾರ್ಥೀವ್

I wasnt unlucky, Dhoni made it count: Parthiv Patel

ಟೀಮ್ ಇಂಡಿಯಾ ಕಂಡ ಅತ್ಯಂತ ಕಿರಿಯ ವಿಕೆಟ್ ಕೀಪರ್ ಅಂದರೆ ಅದು ಪಾರ್ಥೀವ್ ಪಟೇಲ್. ಆದರೆ ಧೋನಿ ಟೀಮ್ ಇಂಡಿಯಾಗೆ ಕಾಲಿಟ್ಟ ಬಳಿಕ ಪಾರ್ಥೀವ್ ಪಟೇಲ್ ಮತ್ತೆ ತಂಡದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಸಣ್ಣ ಪುಟ್ಟ ಅವಕಾಶಗಳಷ್ಟೇ ಪಾರ್ಥೀವ್ ಪಾಲಿಗೆ ಸಿಕ್ಕವು.ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪಾರ್ಥೀವ್‌ಗೆ ಸಾಧ್ಯವಾಗಲಿಲ್ಲ.

ಆದರೆ ಈ ಬಗ್ಗೆ ಪಾರ್ಥೀವ್ ಪಟೇಲ್ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಧೋನಿ ಕಾಲದಲ್ಲಿ ನಾನು ಕ್ರಿಕೆಟ್‌ಗೆ ಕಾಲಿಟ್ಟೆ ಎಂಬ ಬಗ್ಗೆ ನನಗೆ ಯಾವುದೇ ದುಃಖ ಇಲ್ಲ. ನನಗೆ ಇದು ದೌರ್ಭಾಗ್ಯ ಎಂದು ಅನಿಸಿಲ್ಲ ಎಂದು ಪಾರ್ಥೀವ್ ಪಟೇಲ್ ಹೇಳಿಕೊಂಡಿದ್ದಾರೆ.

ಇಂಡಿಯಾ ಪಾಕಿಸ್ತಾನ ಪಂದ್ಯದಂತಿತ್ತು ಆದರೆ.. ವಿಪರ್ಯಾಸದ ಸಂದರ್ಭವನ್ನು ನೆನಪಿಸಿದ ಭಜ್ಜಿಇಂಡಿಯಾ ಪಾಕಿಸ್ತಾನ ಪಂದ್ಯದಂತಿತ್ತು ಆದರೆ.. ವಿಪರ್ಯಾಸದ ಸಂದರ್ಭವನ್ನು ನೆನಪಿಸಿದ ಭಜ್ಜಿ

ಧೋನಿ ಟೀಮ್ ಇಂಡಿಯಾಗೆ ಕಾಲಿಟ್ಟ ಕಾರಣದಿಂದಾಗಿ ಪಾರ್ಥೀವ್ ಪಟೇಲ್‌ಗೆ ಅವಕಾಶ ಸಿಗದಂತಾಯಿತು. ಪಾರ್ಥೀವ್ ಪಟೇಲ್ ಧೋನಿ ಕಾಲದಲ್ಲಿ ಇರದೇ ಬೇರೆ ಕಾಲಮಾನದಲ್ಲಿರುತ್ತಿದ್ದರೆ ಪಾರ್ಥೀವ್‌ಗೆ ದೊಡ್ಡ ಅವಕಾಶಗಳು ಸಿಗುತ್ತಿತ್ತು ಎಂಬ ಚರ್ಚೆಗಳಿಗೆ ಪಾರ್ಥೀವ್ ಪಟೇಲ್ ಈ ರೀತಿಯ ಉತ್ತರವನ್ನು ನೀಡಿದ್ದಾರೆ.

ಧೋನಿ ಆಡುವ ಕಾಲದಲ್ಲಿ ನಾನಿದ್ದೇನೆ ಆದ ಕಾರಣ ನಾನು ಅನ್‌ಲಕ್ಕಿ ಎಂದು ನಾನು ಭಾವಿಸಿಕೊಳ್ಳುವುದಿಲ್ಲ. ನಾನು ಆತನಿಗಿಂತ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸಿದ್ದೆ. ಆತನಿಗಿಂತ ಮೊದಲೇ ಸಾಮರ್ಥ್ಯ ತೋರಿಸುವ ಅವಕಾಶವನ್ನು ಗಳಿಸಿಕೊಂಡಿದ್ದೆ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.

ಮೆಂಟಲ್ ಕಂಡೀಶನಿಂಗ್ ಕೋಚ್ ಸದಾ ತಂಡದ ಜೊತೆಗಿರಬೇಕು: ಎಂಎಸ್‌ಡಿಮೆಂಟಲ್ ಕಂಡೀಶನಿಂಗ್ ಕೋಚ್ ಸದಾ ತಂಡದ ಜೊತೆಗಿರಬೇಕು: ಎಂಎಸ್‌ಡಿ

ಧೋನಿ ತಂಡಕ್ಕೆ ಬರಲು ಅವಕಾಶ ಸಿಕ್ಕಿದ್ದು ನಾನು ತಂಡದಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ. ಒಂದೆರಡು ಸರಣಿಗಳಲ್ಲಿ ಉತ್ತಮ ಪ್ರದರ್ಶನ ನನ್ನಿಂದ ಬರಲಿಲ್ಲ. ಹೀಗಾಗಿ ನಾನು ತಂಡದಿಂದ ಹೊರಬಿದ್ದೆ. ಜನರು ನನ್ನ ಮೇಲಿನ ಅನುಕಂಪದ ಕಾರಣದಿಂದ ಈ ರೀತಿಯ ಮಾತುಗಳನ್ನು ಆಡಬಹುದು ಆದರೆ ನಾನು ಅದನ್ನು ನಂಬುವುದಿಲ್ಲ ಎಂದು ಪಾರ್ಥೀವ್ ಪಟೇಲ್ ಸ್ಪಷ್ಟವಾಗಿ ಹೇಳಿದ್ದಾರೆ.

Story first published: Thursday, May 7, 2020, 20:38 [IST]
Other articles published on May 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X