ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿ

Virat kohli and ABD

ಆರ್‌ಸಿಬಿಯ ಎವರ್‌ಗ್ರೀನ್ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಇಡೀ ಕ್ರಿಕೆಟ್ ಲೋಕವೇ ಅತೀವ ಬೇಸರ ವ್ಯಕ್ತಪಡಿಸಿದೆ. ಕ್ರಿಕೆಟ್ ದಿಗ್ಗಜರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಸೇರಿದಂತೆ ಆರ್‌ಸಿಬಿ ಆಟಗಾರರು ಎಬಿಡಿಯನ್ನ ತುಂಬಾ ಮಿಸ್‌ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪೋಸ್ಟ್‌ ಮಾಡಿದ್ದಾರೆ.

ಆರ್‌ಸಿಬಿ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ನ ಗೆಳೆತನ. ಇಡೀ ಕ್ರಿಕೆಟ್ ಲೋಕದ ಬೇಸರ ಒಂದೆಡೆಯಾದ್ರೆ, ನನ್ನ ಗೆಳೆಯನ ಜೊತೆಗೆ ಮತ್ತೆ ಆರ್‌ಸಿಬಿ ಪಂದ್ಯಗಳನ್ನಾಡಲು ಸಾಧ್ಯವಿಲ್ವಲ್ಲ ಎಂದು ಕೊಹ್ಲಿಯ ದುಃಖ ಒಂದೆಡೆಯಾಗಿದೆ. ಹೀಗಾಗಿಯೇ ತನ್ನ ಆಪ್ತ ಗೆಳೆಯನ ಕುರಿತು ವಿರಾಟ್‌ ಭಾವನಾತ್ಮಕವಾಗಿ ಸಾಲುಗಳನ್ನು ಬರೆದುಕೊಂಡಿದ್ದಾರೆ.

'ನನ್ನ ಹೃದಯದಲ್ಲಿ ನೋವುಂಟು ಮಾಡಿದೆ'

ಎಬಿ ಡಿವಿಲಿಯರ್ಸ್ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ನಿವೃತ್ತಿ ಕುರಿತಾಗಿ ಪೋಸ್ಟ್ ಮಾಡಿದ್ರೋ, ಶುಕ್ರವಾರ (ನ. 19) ಇಡೀ ಕ್ರಿಕೆಟ್ ಲೋಕವೇ ಬೇಸರ ವ್ಯಕ್ತಪಡಿಸಿತು. ಇದ್ರಿಂದ ಆಪ್ತ ಗೆಳೆಯ ವಿರಾಟ್ ಕೊಹ್ಲಿ ಕೂಡ ಹೊರತಾಗಿಲ್ಲ.

'' ನನ್ನ ಹೃದಯಲ್ಲಿ ನೋವುಂಟು ಮಾಡಿದೆ. ಆದರೆ ಎಂದಿನಂತೆ ನಿಮ್ಮ ಹಾಗೂ ಕುಟುಂಬಕ್ಕಾಗಿ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬುದು ನನಗೆ ತಿಳಿದಿದೆ. 'ಐ ಲವ್‌ ಯೂ' ಎಂದು ವಿರಾಟ್ ಕೊಹ್ಲಿ ಪೋಸ್ಟ್‌ ಮಾಡಿದ್ದಾರೆ.

'ನೀವು ನಮ್ಮ ಕಾಲಘಟ್ಟದ ಅತ್ಯುತ್ತಮ ಪ್ಲೇಯರ್‌'

'ನೀವು ನಮ್ಮ ಕಾಲಘಟ್ಟದ ಅತ್ಯುತ್ತಮ ಪ್ಲೇಯರ್‌'

ಎಬಿಡಿ ಕುರಿತು ಹೊಗಳಿರುವ ವಿರಾಟ್ ಕೊಹ್ಲಿ '' ನೀವು ನಮ್ಮ ಕಾಲಘಟ್ಟದ ಅತ್ಯುತ್ತಮ ಆಟಗಾರನಾಗಿದ್ದು, ನಾನು ಭೇಟಿಯಾದ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದೀರ. ಬ್ರದರ್ ನೀವು ಏನು ಮಾಡಿದ್ದೀರಿ ಹಾಗೂ ಆರ್‌ಸಿಬಿ ತಂಡಕ್ಕಾಗಿ ಏನು ಕೊಡುಗೆ ಸಲ್ಲಿಸಿದ್ದೀರಿ ಎಂಬುದಕ್ಕೆ ಸಂಬಂಧಿಸಿದಂತೆ ಹೆಮ್ಮೆಪಟ್ಟುಕೊಳ್ಳಬಹುದು. ನಮ್ಮ ಒಡನಾಟವು ಆಟಕ್ಕೂ ಮೀರಿದ್ದು, ಎಂದಿಗೂ ಹಾಗೆಯೇ ಉಳಿಯಲಿದೆ'' ಎಂದು ಹೇಳಿದ್ದಾರೆ.

ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ RCBಯ ಪ್ರೀತಿಯ ಎಬಿಡಿ: 10 ವಿಶೇಷ ದಾಖಲೆಗಳು ಇಲ್ಲಿವೆ

'ನಾನು ಯಾವಾಗಲೂ ನಿಮ್ಮ ನಂ.1 ಅಭಿಮಾನಿ'

'ನಾನು ಯಾವಾಗಲೂ ನಿಮ್ಮ ನಂ.1 ಅಭಿಮಾನಿ'

ಎಬಿಡಿ ಕುರಿತು ಮತ್ತಷ್ಟು ಮಾತು ಮುಂದುವರಿಸಿದ ಕೊಹ್ಲಿ '' ನೀವು ಆರ್‌ಸಿಬಿಗಾಗಿ ಎಲ್ಲವನ್ನೂ ಅರ್ಪಿಸಿದ್ದೀರಿ. ಅದು ನನ್ನ ಹೃದಯಕ್ಕೆ ತಿಳಿದಿದೆ. ಈ ಫ್ರಾಂಚೈಸಿ ಮತ್ತು ನನಗೆ ಏನೆಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣವು ನಿಮ್ಮನ್ನು ಹುರಿದುಂಬಿಸುವ ಕೊರತೆ ಕಾಡಲಿದೆ. ನಾನು ನಿಮ್ಮೊಂದಿಗೆ ಆಡುವುದನ್ನ ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ. ಐ ಲವ್ ಯೂ, ನಾನು ಯಾವಾಗಲೂ ನಿಮ್ಮ ನಂ. 1 ಅಭಿಮಾನಿ'' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಬರೆದುಕೊಂಡಿದ್ದಾರೆ.

'AB ಸರ್' ನಾನು ನಿಮ್ಮ ಬಹುದೊಡ್ಡ ಅಭಿಮಾನಿ: ಎಬಿಡಿ ನಿವೃತ್ತಿ ಬಳಿಕ ಯುಜವೇಂದ್ರ ಚಹಾಲ್ ಭಾವನಾತ್ಮಕ ಪೋಸ್ಟ್‌

ಕೊಹ್ಲಿ ಮತ್ತು ಎಬಿಡಿ ಸ್ನೇಹ ಎಲ್ಲದಕ್ಕೂ ಮೀರಿದ್ದು!

ಕೊಹ್ಲಿ ಮತ್ತು ಎಬಿಡಿ ಸ್ನೇಹ ಎಲ್ಲದಕ್ಕೂ ಮೀರಿದ್ದು!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ನಡುವಿನ ಸ್ನೇಹ ಪದಗಳಿಗೂ ಮೀರಿದ್ದು. ಪ್ರತಿಯೊಬ್ಬ ಆರ್‌ಸಿಬಿ ಅಭಿಮಾನಿಗಳಿಗೂ ಈ ಇಬ್ಬರು ಆಟಗಾರರ ಬಾಂಧವ್ಯ ತಿಳಿದಿದೆ. ಕ್ರಿಕೆಟ್ ಲೋಕದಲ್ಲಿ ಅತ್ಯುತ್ತಮ ಜೋಡಿಗಳಲ್ಲಿ ಒಂದಾದ ಎಬಿಡಿ, ಕೊಹ್ಲಿ ಕ್ರೀಸ್‌ನಲ್ಲಿದ್ದಷ್ಟು ಕಾಲ ಅಭಿಮಾನಿಗಳ ಮನಸ್ಸಿನಲ್ಲಿ ಸುಗ್ಗಿ. ಇಬ್ಬರ ಅಬ್ಬರ ನೋಡೋದಕ್ಕೆ ದಿಗ್ಗಜ ಕ್ರಿಕೆಟರ್‌ಗಳೇ ಕಾದು ಕುಳಿತಿರುತ್ತಿದ್ದರು. ಅದ್ರಲ್ಲೂ ಆನ್‌ಫೀಲ್ಡ್ ಹಾಗೂ ಆಫ್‌ಫೀಲ್ಡ್‌ನಲ್ಲಿ ಇಬ್ಬರ ನಡುವಿನ ಸ್ನೇಹ ಅತ್ಯುತ್ತಮವಾಗಿತ್ತು.

ಆದರೆ ಇನ್ಮುಂದೆ ಈ ಜೋಡಿಯನ್ನ ಮತ್ತೆ ಒಟ್ಟಾಗಿ ಕ್ರಿಕೆಟ್ ಮೈದಾನದಲ್ಲಿ ನೋಡಲು ಸಾಧ್ಯವಿಲ್ಲ. ಅದ್ರಲ್ಲೂ ಆರ್‌ಸಿಬಿ ಜೆರ್ಸಿಯಲ್ಲಿ ಒಟ್ಟಾಗಿ ಬ್ಯಾಟಿಂಗ್ ಮಾಡುವ ಕಾಲ ಮುಗಿದಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಎಬಿಡಿ.. ಎಬಿಡಿ.. ಎಂಬ ಅಭಿಮಾನಿಗಳ ಕೂಗು ಇನ್ಮುಂದೆ ಮತ್ತೆ ಕೇಳಲು ಸಾಧ್ಯವಿಲ್ಲ ಎನ್ನುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಚಿನ್ನಸ್ವಾಮಿ ಮೈದಾನ ಕೂಡ ಎಬಿಡಿ ಬ್ಯಾಟ್‌ನಿಂದ ಸಿಡಿದ ಚೆಂಡನ್ನು ಕಾಣುವ ಅದೃಷ್ಟ ಕಳೆದುಕೊಂಡಿದೆ. ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಇನ್ನಷ್ಟು ಪ್ರತಿಭಾವಂತ ಆಟಗಾರರನ್ನು ಭವಿಷ್ಯದಲ್ಲಿ ಕಾಣಬಹುದು, ಆದರೆ ಮಿಸ್ಟರ್ 360 ಎಬಿಡಿಯಂತಹ ರಿಯಲ್ ಜಂಟಲ್‌ಮನ್ ಕ್ರಿಕೆಟರ್, ಡಿಸ್ಟ್ರಕ್ಟಿವ್ ಕ್ರಿಕೆಟರ್, ಕ್ಲಾಸ್ ಪ್ಲೇಯರ್ ಅನ್ನು ಸದಾ ಅಭಿಮಾನಿಗಳು ಮಿಸ್‌ ಮಾಡಿಕೊಳ್ಳಲಿದ್ದಾರೆ.

Story first published: Saturday, November 20, 2021, 17:52 [IST]
Other articles published on Nov 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X