ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆನ್‌ ಸ್ಟೋಕ್ಸ್‌ಗೆ ನಾಯಕತ್ವ ಪಟ್ಟ: ನಿನ್ನೊಂದಿಗೆ ಪ್ರತಿ ಹೆಜ್ಜೆಯಲ್ಲೂ ಜೊತೆಗಿರುವೆ ಎಂದ ಜೋ ರೂಟ್‌

Ben stokes

ಇಂಗ್ಲೆಂಡ್ ಟೆಸ್ಟ್‌ ಕ್ರಿಕೆಟ್ ತಂಡದ ಹೊಸ ನಾಯಕನಾಗಿ ಗುರುವಾರ(ಏ.28)ವಷ್ಟೇ ಆಯ್ಕೆಗೊಂಡ ಬೆನ್‌ ಸ್ಟೋಕ್ಸ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಇದ್ರಿಂದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಕೂಡ ಹೊರತಾಗಿಲ್ಲ.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಗುರುವಾರ ಅಧಿಕೃತವಾಗಿ ಆಲ್‌ರೌಂಡರ್ ಬೆನ್‌ಸ್ಟೋಕ್ಸ್‌ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಎಂದು ಘೋಷಿಸಿತು. ಜೋ ರೂಟ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ನಿರ್ಧಾರ ತೆಗೆದುಕೊಂಡಿದೆ.

ಜೋ ರೂಟ್‌ಗೆ ಜೊತೆಯಾಗಿ ನಿಂತಿದ್ದ ಬೆನ್‌ಸ್ಟೋಕ್ಸ್

ಜೋ ರೂಟ್‌ಗೆ ಜೊತೆಯಾಗಿ ನಿಂತಿದ್ದ ಬೆನ್‌ಸ್ಟೋಕ್ಸ್

ಇಂಗ್ಲೆಂಡ್ ತಂಡದ ನಾಯಕನಾಗಿ ಕಳೆದ ಹಲವು ವರ್ಷಗಳಿಂದ ಮುನ್ನಡೆದಿದ್ದ ಜೋ ರೂಟ್‌ಗೆ ಆಲ್‌ರೌಂಡರ್ ಬೆನ್‌ಸ್ಟೋಕ್ಸ್‌ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಆತನಿಗೆ ಹೆಚ್ಚು ಅನುಭವವಿರುವ ಕಾರಣ ಇಂಗ್ಲೆಂಡ್ ಕ್ರಿಕೆಟ್‌ಗೆ ಮತ್ತಷ್ಟು ಸೇವೆಯನ್ನ ಸಲ್ಲಿಸಬಹುದಾಗಿದೆ.

IPL 2022: ಡೆಲ್ಲಿ ಪ್ಲೇ ಆಫ್ ಕನಸು ಜೀವಂತ, ಪಾಯಿಂಟ್ಸ್ ಟೇಬಲ್‌ನಲ್ಲಿ ಯಾರು ಸೇಫ್‌?

ಇಂಗ್ಲೆಂಡ್ ತಂಡದ 81ನೇ ಟೆಸ್ಟ್ ನಾಯಕ ಬೆನ್‌ಸ್ಟೋಕ್ಸ್‌

ಇಂಗ್ಲೆಂಡ್ ತಂಡದ 81ನೇ ಟೆಸ್ಟ್ ನಾಯಕ ಬೆನ್‌ಸ್ಟೋಕ್ಸ್‌

ಶತಮಾನಗಳ ಇತಿಹಾಸವಿರುವ ಇಂಗ್ಲೆಂಡ್ ಕ್ರಿಕೆಟ್‌ನ 81ನೇ ಟೆಸ್ಟ್‌ ತಂಡದ ನಾಯಕನಾಗಿ ಬೆನ್‌ಸ್ಟೋಕ್ಸ್ ಆಯ್ಕೆಯಾಗಿರುವುದು, ಬಹುದೊಡ್ಡ ಗೌರವವಾಗಿದೆ. ಹೀಗಾಗಿ ಟ್ವಿಟ್ಟರ್‌ನಲ್ಲಿ ಬೆನ್‌ಸ್ಟೋಕ್ಸ್‌ ಜೊತೆಗಿರುವ ಫೋಟೊವನ್ನ ಶೇರ್ ಮಾಡಿರುವ ಜೋ ರೂಟ್‌ ಮನತಟ್ಟುವ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಪೆಟ್ಟು, ಆತನ ಪತ್ನಿ ನತಾಶಗೆ ಕ್ಷಮೆ ಕೇಳಿದ ಉಮ್ರಾನ್ ಮಲ್ಲಿಕ್

ನಿನ್ನೊಂದಿಗೆ ಪ್ರತಿ ಹಂತದಲ್ಲೂ ಜೊತೆಗಿರುವೆ!

ಸಹ ಆಟಗಾರ ಅಷ್ಟೇ ಅಲ್ಲದೆ ಉತ್ತಮ ಸ್ನೇಹಿತರಾಗಿರುವ ಜೋ ರೂಟ್ ಹಾಗೂ ಬೆನ್‌ಸ್ಟೋಕ್ಸ್‌ ಅನೇಕ ಪಂದ್ಯಗಳ ಗೆಲುವಿನಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಹೀಗಾಗಿಯೇ ಜೋ ರೂಟ್ ತನ್ನ ಸಹ ಕ್ರಿಕೆಟಿಗನಿಗೆ ಶುಭ ಸಂದೇಶ ನೀಡಿದ್ದಾರೆ.

'' ಯಾವಾಗಲೂ ಇಬ್ಬರೂ ಒಬ್ಬರನ್ನ ಬೆಂಬಲಿಸಿದ್ದೇವೆ, ಅಭಿನಂದನೆಗಳು ಮೇಟ್‌, ಪ್ರತಿ ಹೆಜ್ಜೆಯಲ್ಲೂ ನಾನು ನಿಮ್ಮೊಂದಿಗೆ ಇರುತ್ತೇನೆ ಗೆಳೆಯ'' ಎಂದು ಜೋ ರೂಟ್ ಟ್ವೀಟ್ ಮಾಡಿದ್ದಾರೆ.

ಸತತ ಸೋಲುಂಡ ಆರ್‌ಸಿಬಿ ಮತ್ತೆ ಗೆಲ್ಲಲು ಬೆಂಚ್ ಕಾಯುತ್ತಿರುವ ಈ ಉತ್ತಮ ಆಟಗಾರನಿಗೆ ಅವಕಾಶ ನೀಡಲೇಬೇಕು!

64 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರುವ ಜೋ ರೂಟ್

64 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರುವ ಜೋ ರೂಟ್

ನಾಯಕತ್ವದಿಂದ ಕೆಳಗಿಳಿಯುವ ಮೊದಲು ಜೋ ರೂಟ್ 2017 ರಿಂದ 2022 ರ ನಡುವೆ 64 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಅವಧಿಯಲ್ಲಿ ಇಂಗ್ಲೆಂಡ್ 27 ಪಂದ್ಯಗಳನ್ನ ಗೆದ್ದಿದೆ ಮತ್ತು 26 ಪಂದ್ಯದಲ್ಲಿ ಸೋಲನ್ನ ಕಂಡಿದೆ. ವಿಶೇಷ ಅಂದ್ರೆ ರೂಟ್‌ಗಿಂತ ಮೊದಲು ಬೇರೆ ಯಾವುದೇ ಇಂಗ್ಲೆಂಡ್ ನಾಯಕ ತಂಡವನ್ನು ಇಷ್ಟು ಪಂದ್ಯಗಳಿಗೆ ಮುನ್ನಡೆಸಿರಲಿಲ್ಲ.

ಜೋ ರೂಟ್‌ಗೆ ಧನ್ಯವಾದ ತಿಳಿಸಿದ ಬೆನ್‌ ಸ್ಟೋಕ್ಸ್‌

ನಾಯಕತ್ವವನ್ನ ಬಿಟ್ಟುಕೊಟ್ಟ ಜೋ ರೂಟ್‌ಗೆ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಧನ್ಯವಾದ ತಿಳಿಸಿದ್ದು, ಇಂಗ್ಲೆಂಡ್ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ್ದನ್ನ ಸ್ಮರಿಸಿದ್ದಾರೆ.

"ಇಂಗ್ಲಿಷ್ ಕ್ರಿಕೆಟ್‌ಗಾಗಿ ಅವರು ಮಾಡಿದ ಎಲ್ಲದಕ್ಕೂ ಮತ್ತು ಪ್ರಪಂಚದಾದ್ಯಂತ ಕ್ರೀಡೆಗೆ ಯಾವಾಗಲೂ ಉತ್ತಮ ರಾಯಭಾರಿಯಾಗಿದ್ದಕ್ಕಾಗಿ ನಾನು ಜೋ (ರೂಟ್) ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ನಾಯಕನಾಗಿ ಅವರು ನನ್ನ ಅಭಿವೃದ್ಧಿಯ ಬೃಹತ್ ಭಾಗವಾಗಿದ್ದಾರೆ ಮತ್ತು ಈ ಪಾತ್ರದಲ್ಲಿ(ನಾಯಕತ್ವ) ಅವರು ನನಗೆ ಪ್ರಮುಖ ಮಿತ್ರರಾಗಿ ಮುಂದುವರಿಯುತ್ತಾರೆ, "ಎಂದು ಬೆನ್‌ ಸ್ಟೋಕ್ಸ್‌ ಟ್ವೀಟ್ ಮಾಡಿದ್ದಾರೆ.

''ಎಲ್ಲಾ ಸಂದೇಶಗಳಿಗೆ ಧನ್ಯವಾದಗಳು, ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಮ್ಮೆಯ ದಿನ. ನಾನು ಇಂಗ್ಲೆಂಡ್‌ಗಾಗಿ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ, ಲಾರ್ಡ್ಸ್‌ನಲ್ಲಿ ನಿಮ್ಮನ್ನು ನೋಡೋಣ'' ಎಂದು ಶುಭ ಕೋರಿದ ಎಲ್ಲರಿಗೂ ಧನ್ಯವಾದ ಸಹ ಹೇಳಿದ್ದಾರೆ.

Story first published: Friday, April 29, 2022, 15:34 [IST]
Other articles published on Apr 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X