ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಫಿಟ್ನೆಸ್‌ಗೆ ಪ್ರಮುಖ ಕಾರಣ ತಿಳಿಸಿದ ವಿರಾಟ್: ಕೊಹ್ಲಿ ಡಯಟ್ ಪ್ಲಾನ್‌ನಲ್ಲಿ ಏನೇನಿದೆ?

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತನ್ನ ಫಿಟ್ ಆದ ದೇಹದ ಸೀಕ್ರೆಟ್ ಅನ್ನು ಬಹಿರಂಗಪಡಿಸಿದ್ದಾರೆ. ಭಾರತ ಕ್ರಿಕೆಟ್‌ನಲ್ಲಿ ಫಿಟ್ನೆಸ್ ಮಂತ್ರ ಜಪಿಸುವಂತೆ ಮಾಡಿದ ವಿರಾಟ್ ಯುವ ಕ್ರಿಕೆಟಿಗರ ಸ್ಫೂರ್ತಿಯಾಗಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕ ಕಂಡಂತಹ ಗ್ರೇಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ 70 ಅಂತರಾಷ್ಟ್ರೀಯ ಶತಕಗಳ ಒಡೆಯನಾಗಿರುವ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಫಾರ್ಮ್‌ನಲ್ಲಿರದಿದ್ದರೂ ಸಹ ಸಾರ್ವಕಾಲಿಕ ಬೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರು.

ಸಚಿನ್‌ ತೆಂಡೂಲ್ಕರ್‌ ನೂರು ಶತಕಗಳ ದಾಖಲೆಯನ್ನ ಪ್ರಸ್ತುತ ಮುರಿಯಬಲ್ಲ ಏಕೈಕ ಆಟಗಾರ ಎಂದು ಗುರುತಿಸಿಕೊಂಡಿರುವ ಕೊಹ್ಲಿಯು ಭಾರತ ಕ್ರಿಕೆಟ್‌ನಲ್ಲಿ ತನ್ನದೇ ಆದ ಪ್ರಭಾವ ಬೀರಿದ್ದಾರೆ. ಬ್ಯಾಟಿಂಗ್‌ನಲ್ಲಿ ಅಷ್ಟೇ ಅಲ್ಲದೆ ಚಿರತೆಯಂತೆ ನೆಗೆದು ಫೀಲ್ಡಿಂಗ್ ಮಾಡುವ ಸಾಮರ್ಥ್ಯ ಇವರಿಗಿದೆ. ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುವ ವಿರಾಟ್‌ ಡಯಟ್ ಪ್ಲಾನ್ ತಿಳಿಯುವ ಕುತೂಹಲ ಹಲವರಿಗಿದೆ.

ಏಷ್ಯಾಕಪ್‌ ಮೇಲೆ ವಿರಾಟ್ ಕೊಹ್ಲಿ ಕಣ್ಣು

ಏಷ್ಯಾಕಪ್‌ ಮೇಲೆ ವಿರಾಟ್ ಕೊಹ್ಲಿ ಕಣ್ಣು

ಇಂಗ್ಲೆಂಡ್ ಪ್ರವಾಸದ ಬಳಿಕ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದ ವಿರಾಟ್ ಕೊಹ್ಲಿ ಮುಂಬರುವ ಏಷ್ಯಾಕಪ್‌ ಮೇಲೆ ತನ್ನ ಕಣ್ಣಿಟ್ಟಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಈ ಚುಟುಕು ಟೂರ್ನಮೆಂಟ್‌ನಲ್ಲಿ ಕೊಹ್ಲಿ ಫಾರ್ಮ್‌ಗೆ ಮರಳಲು ಹಾತೊರೆಯುತ್ತಿದ್ದಾರೆ. ಈಗಾಗಲೇ ಜಿಮ್‌ನಲ್ಲಿ ತಯಾರಿ ನಡೆಸುತ್ತಿರುವ ಕೊಹ್ಲಿ ನೆಟ್ ಪ್ರಾಕ್ಟೀಸ್ ಕೂಡ ಆರಂಭಿಸಿದ್ದಾರೆ.

ENG vs SA 1st Test: ಪಂದ್ಯಕ್ಕೆ ಮಳೆ ಅಡ್ಡಿ, ಆರು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್

ತನ್ನ ಡಯಟ್ ಪ್ಲಾನ್ ಕುರಿತು ಮಾತನಾಡಿದ ವಿರಾಟ್

ತನ್ನ ಡಯಟ್ ಪ್ಲಾನ್ ಕುರಿತು ಮಾತನಾಡಿದ ವಿರಾಟ್

ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಕೊಹ್ಲಿ ತಮ್ಮ ಆಹಾರ ಮತ್ತು ಫಿಟ್‌ನೆಸ್ ಕಟ್ಟುಪಾಡುಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ಮಾಡಿಕೊಂಡಿರುವ ಚೌಕಟ್ಟಿನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

"ನಾನು ಆಹಾರ ಮತ್ತು ಫಿಟ್ನೆಸ್ ಬಗ್ಗೆ ಗಮನಹರಿಸದ ಸಮಯವಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ, ನಾನು ನಿಜವಾಗಿಯೂ ತಿನ್ನುವ ವಿಧಾನವನ್ನು ಬದಲಾಯಿಸಿದ್ದೇನೆ ಮತ್ತು ಹೆಚ್ಚು ಶಿಸ್ತುಬದ್ಧನಾಗಿದ್ದೇನೆ. ನಾನು ಯಾವಾಗಲೂ ನನ್ನ ಆಹಾರ ಸೇವನೆಯ ಬಗ್ಗೆ ಸಂಪೂರ್ಣ ಅರಿವನ್ನು ಹೊಂದಲು ಪ್ರಯತ್ನಿಸುತ್ತೇನೆ. ನನಗೆ ಮಾಡಬೇಕಾದುದು ಮತ್ತು ಮಾಡಬಾರದ ವಿಷಯಗಳು ತುಂಬಾ ಸರಳವಾಗಿದೆ.

ಸಂಸ್ಕರಿಸಿದ ಸಕ್ಕರೆ ತಿನ್ನುವುದಿಲ್ಲ, ಗ್ಲುಟನ್ ಕೂಡ ಇಲ್ಲ. ನಾನು ಸಾಧ್ಯವಾದಷ್ಟು ಡೈರಿ ಪ್ರಾಡಕ್ಟ್ಸ್‌ ತಿನ್ನುವುದನ್ನು ತಪ್ಪಿಸುತ್ತೇನೆ. ನನ್ನ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಲು ನನಗೆ ಸಹಾಯ ಮಾಡಿದ ಇನ್ನೊಂದು ಉಪಾಯವೆಂದರೆ ನನ್ನ ಹೊಟ್ಟೆಯ ಸಾಮರ್ಥ್ಯದ 90 ಪ್ರತಿಶತದಷ್ಟು ಮಾತ್ರ ತಿನ್ನುವುದು. ನನ್ನಂತಹ ಆಹಾರ ಪ್ರಿಯರಿಗೆ, ಇವೆಲ್ಲವೂ ಸುಲಭವಲ್ಲ ಆದರೆ ದಿನದ ಕೊನೆಯಲ್ಲಿ, ನಿಮ್ಮ ದೇಹದಲ್ಲಿ ಧನಾತ್ಮಕ ಬದಲಾವಣೆಗಳನ್ನು ನೀವು ನೋಡಲಾರಂಭಿಸಿದಾಗ, ಆರೋಗ್ಯವಾಗಿರುವುದು ನಿಜವಾಗಿಯೂ ಚಟವಾಗುತ್ತದೆ'' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ICC ODI Batting Ranking: ವಿರಾಟ್ ಕೊಹ್ಲಿಗಿಂತ ಮತ್ತಷ್ಟು ಮೇಲಕ್ಕೇರಿದ ಬಾಬರ್ ಅಜಂ

ಡಯಟ್ ಪ್ಲಾನ್‌ ಅನ್ನು ಚಾಚು ತಪ್ಪದೆ ಪಾಲಿಸುತ್ತೇನೆ

ಡಯಟ್ ಪ್ಲಾನ್‌ ಅನ್ನು ಚಾಚು ತಪ್ಪದೆ ಪಾಲಿಸುತ್ತೇನೆ

ವಿರಾಟ್ ಕೊಹ್ಲಿ ಇಷ್ಟರ ಮಟ್ಟಿಗೆ ಫಿಟ್ ಆಗಿರಲು ಅವರ ಡಯಟ್ ಪ್ಲಾನ್ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರು ಅಂದುಕೊಂಡಿದ್ದನ್ನ ಚಾಚು ತಪ್ಪದೆ ಪಾಲಿಸುತ್ತಾರೆ.

'' ನನ್ನ ಆಹಾರಕ್ರಮ, ಫಿಟ್‌ನೆಸ್ ದಿನಚರಿಗಳಾಗಲಿ, ಜಿಮ್‌ನಲ್ಲಿ ನಾನು ಕೆಲವು ಪುನರಾವರ್ತನೆಗಳಾಗಲಿ ಅಥವಾ ಅಥವಾ ಒಂದೆರಡು ಸೆಟ್‌ಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಜೊತೆಗೆ ನನ್ನ ಚಾರ್ಟ್‌ನಲ್ಲಿರದ ಆಹಾರಗಳನ್ನು ನಾನು ತಿನ್ನುವುದಿಲ್ಲ. ಇವೆಲ್ಲವನ್ನು ಮಾಡುವುದರಿಂದ ನಿಮ್ಮ ಅತ್ಯುತ್ತಮವಾದುದನ್ನ ಹೊರಹಾಕಲು, ನಿಮ್ಮನ್ನು ನೀವು ಪ್ರೋತ್ಸಾಹಿಸಿಕೊಳ್ಳಬಹುದು ಎಂಬುದು ನಿಮಗೆ ಅರಿವಾಗುತ್ತದೆ'' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ತನ್ನ ಆಹಾರದ ವಿಚಾರದಲ್ಲಿ, ವರ್ಕೌಟ್ ವಿಚಾರದಲ್ಲಿ ಇಷ್ಟರ ಮಟ್ಟಿಗೆ ನಿಯಮಗಳನ್ನ ರೂಪಿಸಿದ್ದರ ಪರಿಣಾಮವಾಗಿ, ಇಷ್ಟು ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಕ್ರಿಕೆಟ್‌ನ ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿದ್ದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Story first published: Wednesday, August 17, 2022, 21:05 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X