ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸೋಲಿನ ಬಳಿಕ ಧೋನಿ ಉತ್ತರಗಳನ್ನು ಇಂದು ನಾನು ಸ್ವೀಕರಿಸುವುದಿಲ್ಲ': ಕ್ರಿಸ್ ಶ್ರೀಕಾಂತ್ ಟೀಕೆ

I Will Not Accept His Answer Today: Kris Srikanth Tears Into MS Dhoni After CSK Defeat Against RR

ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧದ ಪಂದ್ಯದ ಸೋಲಿನ ನಂತರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಾಯಕ ಎಂಎಸ್ ಧೋನಿ ಭಾರೀ ಟೀಕೆಗಳನ್ನು ಎದುರಿಸುತ್ತಾರೆ. ಪಂದ್ಯ ಮುಗಿದ ಬಳಿಕ ಅವರು ಹೇಳಿದ ಹಾಗೆ "ನಮ್ಮ ಕೆಲವು ಯುವಕರಲ್ಲಿ ಕಿಡಿ ಕಾಣಿಸಲಿಲ್ಲ" ಎಂಬ ಹೇಳಿಕೆಗೆ ಭಾರತದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಪ್ರಶ್ನಿಸಿದ್ದಾರೆ.

ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೇದಾರ್ ಜಾಧವ್ ಮತ್ತು ಪಿಯೂಷ್ ಅವರಂತಹ ಆಟಗಾರರನ್ನು ಸೇರಿಸಿಕೊಳ್ಳುವುದನ್ನು ಪ್ರಶ್ನಿಸಿದ್ದಾರೆ, ಕೇದಾರ್‌ ಜಾಧವ್‌ನಲ್ಲಿ 'ಕಿಡಿ' ಕಾಣಿಸಿತಾ? ಎಂದು ಟೀಕಿಸಿದ್ದಾರೆ.

CSK ಪರ 4,000 ರನ್ ಮತ್ತು IPLನಲ್ಲಿ ವಿಕೆಟ್ ಹಿಂಬದಿ 150 ಬಲಿ ಪಡೆದ ಧೋನಿCSK ಪರ 4,000 ರನ್ ಮತ್ತು IPLನಲ್ಲಿ ವಿಕೆಟ್ ಹಿಂಬದಿ 150 ಬಲಿ ಪಡೆದ ಧೋನಿ

ಸಿಎಸ್‌ಕೆ ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತ ನಂತರ, ಎಂಎಸ್ ಧೋನಿ, ಪಂದ್ಯದ ನಂತರದ ಪೂರ್ವಭಾವಿ ಸಮಾರಂಭದಲ್ಲಿ, ತಂಡದ ಆರಂಭಿಕ 10 ಪಂದ್ಯಗಳಲ್ಲಿ ಯುವಕರಿಗೆ ಅವಕಾಶ ನೀಡಲಾಗಿಲ್ಲ, ಏಕೆಂದರೆ ಅವರಲ್ಲಿ ಸ್ಪಾರ್ಕ್ ಕೊರತೆಯಿದೆ. ಪ್ಲೇ-ಆಫ್‌ಗಳಿಗೆ ಅರ್ಹತೆ ಪಡೆಯುವ ಒತ್ತಡ ಬಹುತೇಕ ಕಳೆದುಹೋಗಿರುವ ಕಾರಣ ಮುಂಬರುವ ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಲು ಇಚ್ಛಿಸುವುದಾಗಿ 39 ವರ್ಷದ ಎಂಎಸ್ ಧೋನಿ ಹೇಳಿದ್ದಾರೆ. ಇದು ಕನಿಷ್ಠ ಒತ್ತಡವು ಯುವಕರಿಗೆ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಧೋನಿಯ ಈ ಹೇಳಿಕೆಯ ಬಳಿಕ ಕ್ರಿಸ್ ಶ್ರೀಕಾಂತ್ ನೀವು ಹೇಳುತ್ತಿರುವ ಉತ್ತರಗಳನ್ನು ನಾನು ಸ್ವೀಕರಿಸುವುದಿಲ್ಲ. ಯುವಕರಲ್ಲಿ ಕಿಡಿ ಕಾಣಲಿಲ್ಲ ಎಂದು ಹೇಳುತ್ತಿದ್ದೀರಾ, ಹಾಗಿದ್ದರೆ ಕೇದಾರ್ ಜಾಧವ್, ಪಿಯೂಷ್ ಚಾವ್ಲಾರಂತಹ ಕ್ರಿಕೆಟಿಗರನ್ನು ಪ್ಲೇಯಿಂಗ್‌ನ ಇಲೆವೆನ್‌ನಲ್ಲಿ ಹಾಕಿಕೊಂಡಿದ್ದೀರಿ! ಅವರಲ್ಲಿ ಕಿಡಿ ಕಾಣಿಸಿತೇ ಎಂದು ಧೋನಿಯನ್ನ ತೆಗಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ತಮಿಳಿನೊಂದಿಗೆ ಮಾತನಾಡುವಾಗ'' ಧೋನಿ ನಿಸ್ಸಂದೇಹವಾಗಿ "ಶ್ರೇಷ್ಠ ಕ್ರಿಕೆಟಿಗ" ಆದರೆ ಇಂದು ರಾತ್ರಿ ಆರ್ಆರ್ ಪಂದ್ಯದ ನಂತರ ಅವರ ಅಭಿಪ್ರಾಯಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು.

60 ವರ್ಷ ವಯಸ್ಸಿನ ಕ್ರಿಸ್ ಶ್ರೀಕಾಂತ್ ''ಧೋನಿ ಹೇಳುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಪ್ರಕ್ರಿಯೆಯ ಈ ಮಾತು ... ನಾನು ಅದನ್ನು ಒಪ್ಪುವುದಿಲ್ಲ. ನೀವು ' ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದೀರಾ ಆದರೆ ಆಯ್ಕೆಯ ಪ್ರಕ್ರಿಯೆಯು ತಪ್ಪಾಗಿದೆ. " ಎಂದು ಶ್ರೀಕಾಂತ್ ಹೇಳಿದ್ದಾರೆ.

ಇದರ ಜೊತೆಗೆ ಕೇದಾರ ಜಾಧವ್ ಮತ್ತು ಪಿಯುಷ್ ಚಾವ್ಲಾ ಅವರು ಸಿಎಸ್‌ಕೆ ಆಡುವ ಇಲೆವೆನ್ ತಂಡವನ್ನು ಪ್ರಶ್ನಿಸಿದ್ದಾರೆ. ವಿಶೇಷವೆಂದರೆ, ಕೇದಾರ್ ಜಾಧವ್ ಅವರು ಸಿಎಸ್‌ಕೆ ಪರ ಮಿಂಚಲು ಸಂಪೂರ್ಣ ವಿಫಲರಾಗಿದ್ದಾರೆ ಮತ್ತು ಅವರ 8 ಐಪಿಎಲ್ 2020 ಪಂದ್ಯಗಳಿಂದ ಕೇವಲ 62 ರನ್ ಗಳಿಸಿದ್ದಾರೆ.

Story first published: Tuesday, October 20, 2020, 10:24 [IST]
Other articles published on Oct 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X