ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ಕ್ರಿಕೆಟ್ ಆಡುವಾಗ್ಲೇ ಐಪಿಎಲ್‌ ಇದ್ದಿದ್ರೆ, ಕೋಟಿ ಕೋಟಿ ಹಣ ಬಾಚುತ್ತಿದ್ವು: ರವಿಶಾಸ್ತ್ರಿ

Ravi shastri

ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ ತನ್ನ ಕುರಿತಾಗಿಯೇ ಕುತೂಹಲಕಾರಿ ಹೇಳಿಕೆಯೊಂದನ್ನ ನೀಡಿದ್ದು, ತಾನು ಕ್ರಿಕೆಟ್ ಆಡುವಾಗಲೇ ಐಪಿಎಲ್ ಪರಿಚಯಿಸಿದ್ರೆ ಮಿಲಿಯನ್‌ಗಟ್ಟಲೆ ಹಣವನ್ನ ಸಂಪಾದಿಸುತ್ತಿದೆ ಎಂದು ಹೇಳಿದ್ದಾರೆ.

1980ರ ದಶಕದಲ್ಲಿಯೇ ಐಪಿಎಲ್‌ ಇದ್ದಿದ್ರೆ, ಆಟಗಾರರ ಹರಾಜಿನಲ್ಲಿ ನಾನು ಮಿಲಿಯನ್‌ಗಟ್ಟಲೆ ಹಣವನ್ನ ಸಂಪಾದಿಸುತ್ತಿದ್ದೆ ಎಂದಿದ್ದಾರೆ. ಭಾರತೀಯ ಕ್ರಿಕೆಟ್‌ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಸಿಐ) 2008ರಲ್ಲಿ ಮೊದಲ ಆವೃತ್ತಿಯನ್ನ ಪರಿಚಯಿಸಿತು. ಇದಾದ ಬಳಿಕ ಐಪಿಎಲ್ ಟೂರ್ನಿಯನ್ನ ಪ್ರತಿ ವರ್ಷ ನಡೆಸಿಕೊಳ್ಳಲುತ್ತಾ ಬರಲಾಗಿದ್ದು 15ನೇ ಆವೃತ್ತಿಯಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಒಟ್ಟು 10 ತಂಡಗಳಾಗಿವೆ.

ಅದ್ಭುತ ಆಲ್‌ರೌಂಡರ್ ಆಗಿದ್ದ ರವಿಶಾಸ್ತ್ರಿ

ಅದ್ಭುತ ಆಲ್‌ರೌಂಡರ್ ಆಗಿದ್ದ ರವಿಶಾಸ್ತ್ರಿ

80ರ ದರ್ಶಕದಲ್ಲಿ ರವಿಶಾಸ್ತ್ರಿ ಭಾರತದ ಅತ್ಯಮೂಲ್ಯ ಆಲ್‌ರೌಂಡರ್‌ಗಳಾಗಿದ್ದರು. 80 ಟೆಸ್ಟ್ ಪಂದ್ಯಗಳಿಂದ 3830 ರನ್ ಕಲೆಹಾಕಿರುವ ಶಾಸ್ತ್ರಿ 12 ಅರ್ಧಶತಕ ಮತ್ತು 11 ಶತಕ ದಾಖಲಿಸಿದ್ದರು. ಇಷ್ಟಲ್ಲದೆ 150 ಏಕದಿನ ಪಂದ್ಯಗಳನ್ನ ಆಡಿದ್ದು 3108ರನ್ ಕಲೆಹಾಕಿದ್ದಾರೆ. ಈ ಫಾರ್ಮೆಟ್‌ನಲ್ಲಿ 4 ಶತಕ ಮತ್ತು 18 ಅರ್ಧಶತಕವನ್ನ ಸಿಡಿಸಿದ್ದಾರೆ.

ಬ್ಯಾಟಿಂಗ್ ಅಷ್ಟೇ ಅಲ್ಲದೆ ಬೌಲಿಂಗ್‌ನಲ್ಲೂ ಮಿಂಚಿರುವ ರವಿಶಾಸ್ತ್ರಿ 151 ಟೆಸ್ಟ್ ವಿಕೆಟ್‌ಗಳು ಮತ್ತು 129 ಏಕದಿನ ವಿಕೆಟ್‌ಗಳನ್ನ ಸಂಪಾದಿಸಿದ್ದಾರೆ.

ನಾನು ಯಾವುದಾದ್ರೂ ತಂಡದ ನಾಯಕನಾಗಿರುತ್ತಿದ್ದೆ!

ನಾನು ಯಾವುದಾದ್ರೂ ತಂಡದ ನಾಯಕನಾಗಿರುತ್ತಿದ್ದೆ!

ಭಾರತದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಮಾತನಾಡುವಾಗ ಐಪಿಎಲ್ ಕುರಿತು ಮಾತನಾಡಿರುವ ರವಿಶಾಸ್ತ್ರಿ, ನಾವು ಆಡುವಾಗಲೇ ಐಪಿಎಲ್‌ ಇದ್ದಿದ್ರೆ ಯಾವುದಾದ್ರೂ ತಂಡದ ನಾಯಕನಾಗಿರುತ್ತಿದ್ದೆ ಎಂದಿದ್ದಾರೆ.

ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯದ ವೇಳೆಯಲ್ಲಿ ರವಿಶಾಸ್ತ್ರಿ ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗಿನ ಸಂಭಾಷಣೆಯ ವೇಳೆಯಲ್ಲಿ ಶಾಸ್ತ್ರಿ ಮಾತನಾಡಿದರು.

ತಮಿಳುನಾಡು ಪ್ರೀಮಿಯರ್‌ ಲೀಗ್ 2022: ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಎರಡೂ ತಂಡಗಳು ಚಾಂಪಿಯನ್ಸ್!

ರವಿಶಾಸ್ತ್ರಿ ಮಾತು ಕೇಳಿ ಕೌಂಟರ್ ಉತ್ತರ ನೀಡಿದ ಶ್ರೀಕಾಂತ್

ರವಿಶಾಸ್ತ್ರಿ ಮಾತು ಕೇಳಿ ಕೌಂಟರ್ ಉತ್ತರ ನೀಡಿದ ಶ್ರೀಕಾಂತ್

ಐಪಿಎಲ್ ಇದ್ದಿದ್ರೆ, ತಾನು ಕೋಟಿ ಕೋಟಿ ಸಂಪಾದಿಸುತ್ತಿದ್ದೆ ಎಂದು ರವಿಶಾಸ್ತ್ರಿ ಹೇಳಿಕೆಗೆ ಮರು ಉತ್ತರ ನೀಡಿದ ಕೆ. ಶ್ರೀಕಾಂತ್, ನೀವೇ ಹೀಗೆ ಹೇಳಿದ್ರೆ, ವಿವ್ ರಿಚರ್ಡ್ಸ್ ಮತ್ತು ಕಪಿಲ್ ದೇವ್ ಕಥೆ ಏನಾಗಿರಬೇಡ ಎಂದು ಪ್ರಶ್ನಿಸಿದ್ದಾರೆ.

"ನನ್ನ ಪ್ರಕಾರ ಐಪಿಎಲ್, ಅದು ನಮ್ಮ ಕಾಲದಲ್ಲಿ ಇದ್ದಿದ್ದರೆ, ನೀವು ಒಂದು ತಂಡಕ್ಕೆ ನಾಯಕರಾಗಿರುತ್ತಿದ್ದೆ, ನಾನು ಒಂದು ತಂಡಕ್ಕೆ ನಾಯಕನಾಗಿರುತ್ತಿದ್ದೆ. ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಮತ್ತು ಹರಾಜಿನಲ್ಲಿ ಕನಿಷ್ಠ ಒಂದೆರಡು ಮಿಲಿಯನ್‌ಗಳು ಬರುತ್ತಿದ್ದವು'' ಎಂದು ಶಾಸ್ತ್ರಿ ಹೇಳಿದರು.

ಇದಕ್ಕೆ ಉತ್ತರಿಸಿದ ಕೃಷ್ಣಮಾಚಾರಿ ಶ್ರೀಕಾಂತ್ "ಕಪಿಲ್ ದೇವ್ ಮತ್ತು ವಿವ್ ರಿಚರ್ಡ್ಸ್ರನ್ನು ಊಹಿಸಿಕೊಳ್ಳಿ. ಅವರು ಎಷ್ಟು ಬೆಲೆಗೆ ಹರಜಾಗುತ್ತಿದ್ರು? "ಎಂದು ಶ್ರೀಕಾಂತ್ ಪ್ರತಿಕ್ರಿಯಿಸಿದರು.

ಇದಕ್ಕೆ ಮರು ಉತ್ತರ ನೀಡಿಸಿದ ಟೀಂ ಇಂಡಿಯಾ ಮಾಜಿ ಕೋಚ್‌ "ಅದು ತಮಾಷೆಯಾಗಿರುತ್ತಿತ್ತು" ಎಂದು ಉತ್ತರಿಸಿದರು.

Commonwealth 2022: 3ನೇ ದಿನ 3 ದೇಶಗಳನ್ನು ಹಿಂದಿಕ್ಕಿದ ಭಾರತ; ಪದಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಬದ್ಧವೈರಿ ಪಾಕಿಸ್ತಾನದ ವಿರುದ್ಧ ಸೋತ್ರೆ ಕಾಮನ್ವೆಲ್ತ್ ಗೇಮ್ ನಿಂದ ಭಾರತ ಔಟ್ | *Cricket | OneIndia Kannada
ಐಪಿಎಲ್‌ನಲ್ಲಿ ರವಿಶಾಸ್ತ್ರಿ ಎಷ್ಟು ಮೊತ್ತಕ್ಕೆ ಹರಾಜಾಗುತ್ತಿದ್ದರು?

ಐಪಿಎಲ್‌ನಲ್ಲಿ ರವಿಶಾಸ್ತ್ರಿ ಎಷ್ಟು ಮೊತ್ತಕ್ಕೆ ಹರಾಜಾಗುತ್ತಿದ್ದರು?

80ರ ದಶಕದಲ್ಲಿಯೇ ಐಪಿಎಲ್ ಇದ್ದಿದ್ರೆ, ರವಿಶಾಸ್ತ್ರಿ ಎಷ್ಟು ಮೊತ್ತಕ್ಕೆ ಹರಾಜಾಗುತ್ತಿದ್ದರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್‌ '' ತಾನು ಏನಿಲ್ಲಾ ಅಂದ್ರು 15 ಕೋಟಿ ರೂಪಾಯಿಗೆ ಹರಾಜಾಗುತ್ತಿದ್ದೆ'' ಎಂದಿದ್ದಾರೆ.

"ಆರಾಮವಾಗಿ 15 ಕೋಟಿ ಬ್ರಾಕೆಟ್‌ನಲ್ಲಿರುತ್ತಿದೆ! ಮತ್ತು ತಂಡದ ನಾಯಕನಾಗಿರುತ್ತಿದ್ದೆ "ಎಂದು ಮಾರ್ಚ್ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಜೊತೆ ಮಾತನಾಡುವಾಗ ಶಾಸ್ತ್ರಿ ಈ ಹಿಂದೆ ಹೇಳಿದ್ದರು.

ಐಪಿಎಲ್ 2022ರ ಸೀಸನ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಇಶಾನ್ ಕಿಶನ್‌ರನ್ನು ಮುಂಬೈ ಇಂಡಿಯನ್ಸ್ ತಂಡವು ಬರೋಬ್ಬರಿ 15.25 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿತು.

Story first published: Monday, August 1, 2022, 17:13 [IST]
Other articles published on Aug 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X