ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ರೋಹಿತ್ ನಾಯಕತ್ವದಲ್ಲಿ ಐಪಿಎಲ್‌ನಲ್ಲಿ ಆಡಬಯಸುತ್ತೇನೆ': ವಾನ್

I would have loved to play under Rohit Sharma in IPL, says Michael Vaughan

ಲಂಡನ್: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ತಂಡದ ಪರ ಮುಂಚೂಣಿ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲೇನೂ ಗುರುತಿಸಿಕೊಂಡವರಲ್ಲ. ಆದರೆ ವಾನ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅನಿಸಿದ್ದನ್ನು ಕಡ್ಡಿ ಮುರಿದಂತೆ ಮಾತನಾಡುವುದರಿಂದ ಅವರು ಒಂದಷ್ಟು ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಿದೆ.

WTC final: ಭಾರತ vs ನ್ಯೂಜಿಲೆಂಡ್ ಪಂದ್ಯ ಡ್ರಾ ಆದರೆ ಏನಾಗುತ್ತೆ?!WTC final: ಭಾರತ vs ನ್ಯೂಜಿಲೆಂಡ್ ಪಂದ್ಯ ಡ್ರಾ ಆದರೆ ಏನಾಗುತ್ತೆ?!

ದಶಕದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ ಮೈಕಲ್ ವಾನ್ ಈಗ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಅಭಿಪ್ರಾಯಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಿರುತ್ತಾರೆ. 46ರ ಹರೆಯದ ವಾನ್ ಸಂದರ್ಶನದ ವೇಳೆ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇವರಲ್ಲಿ ಯಾರ ಬ್ಯಾಟಿಂಗ್ ಅನ್ನು ಹೆಚ್ಚು ನೋಡಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ವಾನ್, ಕೊಹ್ಲಿ. ಜೊತೆಗೆ ಶರ್ಮಾ ಬ್ಯಾಟಿಂಗ್ ಕೂಡ ನೋಡ್ತೇನೆ ಎಂದಿದ್ದಾರೆ. ಸದ್ಯದ ನಾಲ್ಕು ನೆಚ್ಚಿನ ಆಟಗಾರರು ಯಾರು ಎಂಬ ಪ್ರಶ್ನೆಗೆ ಜೋ ರೂಟ್ (ಇಂಗ್ಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ವಿರಾಟ್ ಕೊಹ್ಲಿ (ಭಾರತ) ಮತ್ತು 5ನೆಯವರಾಗಿ ಬಾಬರ್ ಅಝಾಮ್ (ಪಾಕಿಸ್ತಾನ) ಹೆಸರಿಸಿದ್ದಾರೆ.

ICC WTC Final Tickets: ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!ICC WTC Final Tickets: ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ನೀವೀಗ ಐಪಿಎಲ್‌ನಲ್ಲಿ ಆಡುತ್ತಿದ್ದರೆ ಯಾವ ನಾಯಕನ ಅಡಿಯಲ್ಲಿ ಆಡಲು ಬಯಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ವಾನ್, 'ರೋಹಿತ್ ಶರ್ಮಾ. ಯಾವುದೇ ಪ್ರಶ್ನೆಯಿಲ್ಲದೆ ಮುಂಬೈ ಇಂಡಿಯನ್ಸ್ ವಿಶ್ವದಲ್ಲಿ ಅತ್ಯುತ್ತಮ ಟಿ20 ತಂಡವೆನ್ನಬಹುದು. ಶರ್ಮಾ ಒಬ್ಬ ಒಳ್ಳೆಯ ನಾಯಕ. ಅವರು ಶಾಂತವಾಗಿರುತ್ತಾರೆ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುತ್ತಾರೆ,' ಎಂದಿದ್ದಾರೆ.

Story first published: Saturday, May 29, 2021, 10:55 [IST]
Other articles published on May 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X