ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೂಮ್ರಾ ವೇಗದ ಬೌಲಿಂಗ್ ಎದುರಿಸಲು ಇಷ್ಟಪಡುತ್ತೇನೆ ಎಂದ ಪ್ರಿಯಂ ಗಾರ್ಗ್

I Would Love To Face Jasprit Bumrah In The Ipl: Priyam Garg

ಈ ಬಾರಿಯ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಪ್ರಿಯಂ ಗಾರ್ಗ್ ಈ ಬಾರಿ ಐಪಿಎಲ್‌ನ್ಲಲೂ ಮಿಂಚು ಹರಿಸಲು ಸಜ್ಜಾಗಿದ್ದರು. ಆದರೆ ಕೊರೊನಾ ವೈರಸ್ ಈಗ ಎಲ್ಲವನ್ನೂ ಹಾಳು ಮಾಡಿದೆ. ಅಷ್ಟಿದ್ದರೂ ಗಾರ್ಗ್ ಈ ವರ್ಷಾಂತ್ಯದಲ್ಲಿ ಐಪಿಎಲ್ 2020 ನಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪ್ರಿಯಂ ಗಾರ್ಗ್ ಹೆಲೊ ಆಪ್‌ನಲ್ಲಿ ನೇರ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕ್ರಿಕೆಟ್ ಕುರಿತಾಗಿ ಹಲವಾರು ವಿಚಾರಗಳನ್ನು ಗಾರ್ಗ್ ಹಂಚಿಕೊಂಡಿದ್ದಾರೆ. ತನ್ನ ಫೇವರೀಟ್ ಕ್ರಿಕೆಟರ್ ಯಾರೂ ಲಾಕ್‌ಡೌನ್ ಸಂದರ್ಭದಲ್ಲಿ ಯಾವ ರೀತಿ ಕಾಲ ಕಳೆಯುತ್ತಿದ್ದೇನೆ ಎಂಬುದನ್ನು ಪ್ರಯಂ ಗಾರ್ಗ್ ಹೇಳಿಕೊಂಡಿದ್ದಾರೆ.

ಇಂಡಿಯಾ ಪಾಕಿಸ್ತಾನ ಪಂದ್ಯದಂತಿತ್ತು ಆದರೆ.. ವಿಪರ್ಯಾಸದ ಸಂದರ್ಭವನ್ನು ನೆನಪಿಸಿದ ಭಜ್ಜಿಇಂಡಿಯಾ ಪಾಕಿಸ್ತಾನ ಪಂದ್ಯದಂತಿತ್ತು ಆದರೆ.. ವಿಪರ್ಯಾಸದ ಸಂದರ್ಭವನ್ನು ನೆನಪಿಸಿದ ಭಜ್ಜಿ

ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರನ್ನು ಐಪಿಎಲ್‌ನಲ್ಲಿ ಎದುರಿಸಲು ಇಷ್ಟಪಡುತ್ತೇನೆ ಎಂದು ಗಾರ್ಗ್ ಹೇಳಿದ್ದಾರೆ. ಬೂಮ್ರಾ ಬೌಲಿಂಗ್‌ನ್ನು ಎದುರಿಸುವ ಮೂಲಕ ತನ್ನ ಬ್ಯಾಟಿಂಗ್ ಕೌಶಲ್ಯವನ್ನು ಹೆಚ್ಚಿಸಿಕೊಳ್ಳು ಉತ್ಸುಕನಾಗಿದ್ದೇನೆ ಎಂದು ಗಾರ್ಗ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ಗಾಗಿ ಕಳೆದ ಡಿಸಂಬರ್‌ನಲ್ಲಿ ನಡೆದ ಹರಾಜನಲ್ಲಿ ಗಾರ್ಗ್ ಹೈದ್ರಾಬಾದ್ ತಂಡದ ಪಾಲಾಗಿದ್ದರು. ಹೀಗಾಗಿ ಹೈದರಾವಾದ್ ತಂಡದ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ನಾನು ಕಾತುರನಾಗಿದ್ದೇನೆ ಎಂದಿರುವ ಪ್ರಿಯಂ ಗಾರ್ಗ್ ಭಾರತ ಹಾಗೂ ವಿದೇಶಿ ಅನುಭವಿ ಆಟಗಾರರ ಜೊತೆಗೆ ಆಡುವ ಅವಕಾಶ ದೊಡ್ಡ ಅನುಭವ ಎಂದಿದ್ದಾರೆ.

ಮೆಂಟಲ್ ಕಂಡೀಶನಿಂಗ್ ಕೋಚ್ ಸದಾ ತಂಡದ ಜೊತೆಗಿರಬೇಕು: ಎಂಎಸ್‌ಡಿಮೆಂಟಲ್ ಕಂಡೀಶನಿಂಗ್ ಕೋಚ್ ಸದಾ ತಂಡದ ಜೊತೆಗಿರಬೇಕು: ಎಂಎಸ್‌ಡಿ

ಇದೇ ಸಂದರ್ಭದಲ್ಲಿ ಪ್ರಿಯಂ ಗಾರ್ಗ್ ತನ್ನ ಫೇವರೀಟ್ ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ ಎಂದಿದ್ದಾರೆ. ಜೊತೆಗೆ ದ್ರಾವಿಡ್ ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ ಎಂದು ಅಂಡರ್ 19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಪ್ರಭಾವವೂ ತನ್ನ ಆಟದ ಮೇಲೆ ಯಾವ ರೀತಿ ಬಿದ್ದಿಗೆ ಎಂಬುದನ್ನು ಪ್ರಿಯಂ ಗಾರ್ಗ್ ಹೇಳಿದ್ದಾರೆ.

Story first published: Thursday, May 7, 2020, 21:42 [IST]
Other articles published on May 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X