ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಜೊತೆ ಈ ತಂಡ ಫೈನಲ್ ಪ್ರವೇಶಿಸಲಿದೆ ಎಂದ ದಿನೇಶ್ ಕಾರ್ತಿಕ್

I would love to see India and West Indies in the final match of T20 world cup 2021 says Dinesh Karthik

ಭಾರತದಲ್ಲಿ ನಡೆಯಬೇಕಾಗಿದ್ದ ಈ ವರ್ಷದ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕೊರೊನಾವೈರಸ್ ಕಾರಣದಿಂದ ಯುಎಇಗೆ ಸ್ಥಳಾಂತರಗೊಂಡಿದೆ. ಹೀಗೆ ಯುಎಇಗೆ ಸ್ಥಳಾಂತರಗೊಂಡಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 17ರಂದು ಆರಂಭವಾಗಲಿದ್ದು ನವೆಂಬರ್ 14ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಅಂತ್ಯಗೊಳ್ಳಲಿದೆ.

ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿ ಇರುವಾಗಲೇ ಐಸಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಯಾವ ತಂಡಗಳು ಯಾವ ತಂಡಗಳ ವಿರುದ್ಧ ಯಾವ ಗುಂಪಿನಲ್ಲಿ ಸೆಣಸಾಡಲಿವೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿದೆ. ಹೀಗಾಗಿ ಲೀಗ್ ಹಂತಗಳ ಪಂದ್ಯಗಳಲ್ಲಿ ಯಾವ ತಂಡ ಯಾವ ತಂಡವನ್ನು ಸೋಲಿಸಿ, ಎಷ್ಟು ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಸೆಮಿಫೈನಲ್ ಪ್ರವೇಶಿಸಲಿದೆ ಮತ್ತು ಯಾವ ತಂಡ ಫೈನಲ್ ತಲುಪಲಿದೆ ಎಂಬುದರ ಕುರಿತು ಕ್ರಿಕೆಟ್ ಪಂಡಿತರು ಮತ್ತು ಮಾಜಿ ಕ್ರಿಕೆಟಿಗರು ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

ಇದೀಗ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಮಾತನಾಡಿರುವ ದಿನೇಶ್ ಕಾರ್ತಿಕ್ ಈ ಬಾರಿಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯಾವ ತಂಡಗಳನ್ನು ನೋಡಲು ಇಚ್ಛಿಸುತ್ತೇನೆ ಎಂಬುದನ್ನು ಹಂಚಿಕೊಂಡಿದ್ದಾರೆ. ಹೌದು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಈ 2 ತಂಡಗಳನ್ನು ನೋಡಬೇಕೆಂದು ಆಸೆಯನ್ನು ವ್ಯಕ್ತಪಡಿಸಿರುವ ದಿನೇಶ್ ಕಾರ್ತಿಕ್ ಈ ಕೆಳಕಂಡಂತೆ ಮಾತನಾಡಿದ್ದಾರೆ..

ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡ ಸೆಣಸಾಡಲಿ

ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡ ಸೆಣಸಾಡಲಿ

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕುರಿತು ಮಾತನಾಡಿರುವ ದಿನೇಶ್ ಕಾರ್ತಿಕ್ ಫೈನಲ್ ಪಂದ್ಯದಲ್ಲಿ ಯಾವ ತಂಡಗಳು ಸೆಣಸಾಡಲಿವೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಾಡಲಿವೆ ಎಂಬ ವಿಶ್ವಾಸವನ್ನು ದಿನೇಶ್ ಕಾರ್ತಿಕ್ ವ್ಯಕ್ತಪಡಿಸಿದ್ದಾರೆ.

'ಭಾರತ ಹೊರತುಪಡಿಸಿದರೆ ವೆಸ್ಟ್ ಇಂಡೀಸ್‌ ನನ್ನ ನೆಚ್ಚಿನ ತಂಡ'

'ಭಾರತ ಹೊರತುಪಡಿಸಿದರೆ ವೆಸ್ಟ್ ಇಂಡೀಸ್‌ ನನ್ನ ನೆಚ್ಚಿನ ತಂಡ'

ಇನ್ನೂ ಮುಂದುವರೆದು ಮಾತನಾಡಿರುವ ದಿನೇಶ್ ಕಾರ್ತಿಕ್ ಭಾರತ ಹೊರತುಪಡಿಸಿದರೆ ವೆಸ್ಟ್ ಇಂಡೀಸ್ ನನ್ನ ನೆಚ್ಚಿನ ತಂಡ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಸದಾ ನೀಯತ್ತಿನ ಆಟಕ್ಕೆ ಒತ್ತು ಕೊಡುವ ವೆಸ್ಟ್ ಇಂಡೀಸ್ ತಂಡ ಟಿ ಟ್ವೆಂಟಿ ಪಂದ್ಯಗಳಲ್ಲಿ ಅತ್ಯುತ್ತಮ ತಂಡ ಎಂಬುದು ತಿಳಿದಿರುವ ವಿಷಯವೇ, ಭಾರತವನ್ನು ಹೊರತುಪಡಿಸಿ ನಾನು ಇಷ್ಟಪಡುವ ಎರಡನೇ ನೆಚ್ಚಿನ ತಂಡ ವೆಸ್ಟ್ ಇಂಡೀಸ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಪ್ರವೇಶಿಸಬೇಕೆಂದು ಇಚ್ಛಿಸುತ್ತೇನೆ ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಪಿಚ್ ಮದ್ಯೆ ಆಂಡರ್ಸನ್ ಹೀಗೆ ಹೇಳಿದ್ದೇಕೆ | Oneindia Kannada
ಭಾರತದ ಪರ ಟಿ ಟ್ವೆಂಟಿ ವಿಶ್ವಕಪ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದ ದಿನೇಶ್ ಕಾರ್ತಿಕ್

ಭಾರತದ ಪರ ಟಿ ಟ್ವೆಂಟಿ ವಿಶ್ವಕಪ್ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದ ದಿನೇಶ್ ಕಾರ್ತಿಕ್

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಕುರಿತು ಮಾತನಾಡಿರುವ ದಿನೇಶ್ ಕಾರ್ತಿಕ್ ಈ ಹಿಂದೆ ಟೀಮ್ ಇಂಡಿಯಾ ಪರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಸತತವಾಗಿ ಉತ್ತಮ ಪ್ರದರ್ಶನ ನೀಡದೇ ಇರುವ ಕಾರಣಕ್ಕೆ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ದಿನೇಶ್ ಕಾರ್ತಿಕ್ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಸದ್ಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದ್ದು ಮುಂದಿನ ದಿನಗಳಲ್ಲಿ ಬಿಸಿಸಿಐ ದಿನೇಶ್ ಕಾರ್ತಿಕ್‌ಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶವನ್ನು ನೀಡುತ್ತಾ ಎಂಬುದನ್ನು ಕಾದು ನೋಡಬೇಕು.

Story first published: Wednesday, August 18, 2021, 10:01 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X