ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಥಾಲಿ ರಾಜ್ ಸಾಧನೆ ಕೊಂಡಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್

I would Not Be Able To Do What Mithali Raj Has Done For Women’s Cricket: Harmanpreet Kaur

ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಭಾರತೀಯ ಕ್ರಿಕೆಟ್‌ನಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ವೃತ್ತಿ ಬದುಕಿನಲ್ಲಿ ಮಿಥಾಲಿ ಭಾರತಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಮಿಥಾಲಿ ರಾಜ್ ಸಾಧನೆಯ ಬಗ್ಗೆ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮಾತನಾಡಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಮಿಥಾಲಿ ರಾಜ್ ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಂತ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಮಿಥಾಲಿ ರಾಜ್ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯಷ್ಟು ನನ್ನಿಂದ ಭಾರತ ತಂಡಕ್ಕೆ ನೀಡಲು ಸಾಧ್ಯವಾಗಲಾರದು ಎಂದು ಹರ್ಮನ್ ಪ್ರೀತ್‌ಕೌರ್ ಹೇಳಿದ್ದಾರೆ.

ಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭ

ಇದೇ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ನಡುವಿನ ವಿವಾದದ ಬಗ್ಗೆಯೂ ಮಾತನಾಡಿದರು. 2018ರ ಟಿ20 ವಿಶ್ವಕಪ್‌ನ ಸೆಮಿ ಫೈನಲ್‌ನ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಹೊರಗಿಡಲಾಗಿತ್ತು. ಬಳಿಕ ಅದೇ ತಂಡ ಫೈನಲ್ ಪಂದಗಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಕಣಕ್ಕಿಳಿದಿತ್ತು. ಇದರ ವಿರುದ್ಧ ಮಿಥಾಲಿ ರಾಜ್ ಸಾರ್ವಜನಿಕವಾಗಿ ಟೀಕಿಸಿದ್ದರು.

ತಂಡದಿಂದ ಹೊರಗಿಡಲು ಕೋಚ್ ರಮೇಶ್ ಪೊವಾರ್ ಅವರು ಕಾರಣ ಎಂದು ಆರೋಪವನ್ನು ಮಾಡಿದ್ದರು. ಈ ವಿಚಾರವಾಗಿ ಮಾತನಾಡಿದ ಹರ್ಮನ್‌ಪ್ರೀತ್ ಕೌರ್ 'ಇದರಲ್ಲಿ ತನ್ನನ್ನು ಕೆಲವರು ಬೇಕಂತಲೇ ಎಳೆದುತಂದರು. ಈ ಬಗ್ಗೆ ಮಿಥಾಲಿ ರಾಜ್ ಜೊತೆಗೆ ಯಾವುದೇ ಅಸಾಮಾದಾನವೂ ಇರಲಿಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್: ವಿಂಡೀಸ್ ಪರ 20 ವರ್ಷಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ಜೇಸನ್ ಹೋಲ್ಡರ್ಟೆಸ್ಟ್ ರ‍್ಯಾಂಕಿಂಗ್: ವಿಂಡೀಸ್ ಪರ 20 ವರ್ಷಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ಜೇಸನ್ ಹೋಲ್ಡರ್

ತಂಡ ಎತ್ತರದ ಹಂತವನ್ನು ತಲುಪಿದಾಗ ಇಂತದ್ದು ನಡೆಯುತ್ತದೆ. ಅದಕ್ಕೆ ಯಾರು ಕಾರಣ ಎಂದು ಹೇಳಲು ಇದು ವೇದಿಕೆಯಲ್ಲ. ಮಿಥಾಲಿ ರಾಜ್ ನನಗಿಂತ ಸಾಕಷ್ಟು ಸೀನಿಯರ್. 20 ವರ್ಷಗಳ ಕಾಳ ಅವರು ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಅರ್ಧದಷ್ಟು ಕ್ರಿಕೆಟ್ ಕೂಡ ನಾನು ಆಡಿಲ್ಲ. ಅವರೊಂದಿಗೆ ನನ್ನ ಹೋಲಿಕೆ ಸರಿಯಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

Story first published: Wednesday, July 15, 2020, 18:35 [IST]
Other articles published on Jul 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X