ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮನೆಯಲ್ಲಿ ಕುಳಿತಿರುವುದಕ್ಕಿಂತ ಬಯೋ ಬಬಲ್‌ನಲ್ಲಿ ಕ್ರಿಕೆಟ್ ಉತ್ತಮ : ಬೆನ್ ಸ್ಟೋಕ್ಸ್

I would rather be in bio-bubble playing cricket than sit at home says Ben Stokes

ಕೊರೊನಾ ವೈರಸ್‌ ಕಾರಣದಿಂದಾಗಿ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಕ್ರೀಡಾಲೋಕದಲ್ಲಿ ಕೂಡ ಇದರ ಆತಂಕ ಹೆಚ್ಚಾಗಿಯೇ ಇದೆ. ಹಾಗಾಗಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸಲು ಸಾಕಷ್ಟು ಮುನ್ನಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲು ಪ್ರಮುಖವಾದದ್ದು ಬಯೋಬಬಲ್. ಆಟಗಾರರನ್ನು ಜೈವಿಕ ಸುರಕ್ಷಿತ ವಲಯವನ್ನು ಸೃಷ್ಟಿಸಿ ಅದರೊಳಗೆ ನಿರ್ಭಂಧಿಸಲಾಗುತ್ತದೆ.

ಆಟದ ದೃಷ್ಠಿಯಿಂದ ಇಂತಾ ಕ್ರಮ ಅನಿವಾರ್ಯವಾಗಿದ್ದರೂ ಸುದೀರ್ಘ ಕಾಲದ ವರೆಗಿನ ಈ ನಿರ್ಬಂಧದ ಬಗ್ಗೆ ಆಟಗಾರರ ಆತಂಕಕ್ಕೂ ಕಾರಣವಾಗುತ್ತದೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಈ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜಗತ್ತು ಕೊರೊನಾ ವೈರಸ್‌ನ ಆತಂಕದಲ್ಲಿದ್ದರೂ ಈ ರೀತಿಯಲ್ಲಾದರೂ ಇಷ್ಟದ ಕ್ರೀಡೆಯನ್ನು ಆಡಲು ಸಾಧ್ಯವಾಗುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ಪಂಜಾಬ್ vs ರಾಜಸ್ಥಾನ್, ಸಂಬಾವ್ಯ ತಂಡಗಳು, ಪಿಚ್ ರಿಪೋರ್ಟ್ಪಂಜಾಬ್ vs ರಾಜಸ್ಥಾನ್, ಸಂಬಾವ್ಯ ತಂಡಗಳು, ಪಿಚ್ ರಿಪೋರ್ಟ್

"ಬಯೋ ಬಬಲ್ ಎನ್ನುವುದು ನಿಜಕ್ಕೂ ಒಂದು ಸವಾಲು. ಕುಟುಂಬದಿಂದ ದೂರವಿದ್ದು ಒಂದೇ ಪ್ರದೇಶದಲ್ಲಿ ಸುದೀರ್ಘ ಕಾಲ ಇರುವುದು ಒಂದು ರೀತಿಯ ಏಕತಾನತೆಯನ್ನು ಉಂಟು ಮಾಡುತ್ತದೆ" ಎಂದು ಬೆನ್ ಸ್ಟೋಕ್ಸ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಎಲ್ಲಾ ಸೌಕರ್ಯಗಳೊಂದಿಗೆ ಸ್ವಲ್ಪ ಏಕತಾನತೆ ಕ್ರೀಡಾಪಟುಗಳನ್ನು ಇತರರಿಗಿಂತ ಉತ್ತಮ ಸ್ಥಾನದಲ್ಲಿರಿಸುತ್ತದೆ. ಆ ದೃಷ್ಟಿಕೋನದಿಂದ ನಾವು ಇದನ್ನು ನೋಡಬೇಕಾಗಿದೆ ಎಂದಿದ್ದಾರೆ.

"ನಾವು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಜೈವಿಕ ಗುಳ್ಳೆಯಲ್ಲಿದ್ದು ಕ್ರಿಕೆಟ್ ಆಡುವುದನ್ನು ಬಯಸುತ್ತೇನೆ. ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ನಮ್ಮಿಷ್ಟದ ಕೆಲಸ ಮಾಡುವುದು ಉತ್ತಮ. ಜಗತ್ತಿನಲ್ಲಿ ಕೋಟ್ಯಂತರ ಜನರು ನಮಗಿಂತ ಹೆಚ್ಚಿನ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ನಾವು ಆ ಭಾವನೆಯಲ್ಲಿ ಈ ಸಂದರ್ಭವನ್ನು ಎದುರಿಸಬೇಕು" ಎಂದು ಬೆನ್ ಸ್ಟೋಕ್ಸ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟವರ ಪಟ್ಟಿಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟವರ ಪಟ್ಟಿ

"ಸುದೀರ್ಘ ಕಾಲದಿಂದ ನಾವು ಮಾಡುತ್ತಿದ್ದದ್ದಕ್ಕಿಂತ ವಿಭಿನ್ನವಾಗಿರುವುದು ಕಷ್ಟ. ಜೈವಿಕ ಗುಳ್ಳೆಯಲ್ಲಿರುವುದು ಸಾಕಷ್ಟು ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಇದು ಸವಾಲು ಕೂಡ ಹೌದು. ಆದರೆ ವಿಶಾಲ ದೃಷ್ಟಿಕೋನದಿಂದ ನೋಡಿದರೆ ಇದು ನಮ್ಮ ಜವಾಬ್ಧಾರಿ. ಕ್ರೀಡಾಪಟುಗಳಾಗಿ ಅಭಿಮಾನಿಗಳಿಗೆ ಈ ರೀತಿಯಾಗಿ ಮನರಂಜನೆ ನೀಡುವುದು ನಮ್ಮ ಕರ್ತವ್ಯ" ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.

Story first published: Friday, October 30, 2020, 14:46 [IST]
Other articles published on Oct 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X