ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಕಿ-ಅಂಶ ನೋಡಿ ಮಾತಾಡ್ರಿ..! ಪತ್ರಕರ್ತನ ಪ್ರಶ್ನೆಗೆ ಗರಂ ಆದ ರಾಹುಲ್ ದ್ರಾವಿಡ್

Rahul dravid

ಮುಂಬರುವ ಟಿ20 ವಿಶ್ವಕಪ್‌ ಹಿನ್ನಲೆಯಲ್ಲಿ 15 ಆಟಗಾರರ ಟೀಂ ಇಂಡಿಯಾ ಸ್ಕ್ವಾಡ್‌ ಜೊತೆಗೆ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದಾರೆ. ವಿಶ್ವಕಪ್ ಆರಂಭಕ್ಕೆ ಎರಡು ವಾರಗಳ ಮುನ್ನ ಕಾಂಗರೂ ನಾಡು ತಲುಪಲಿರುವ ಟೀಂ ಇಂಡಿಯಾ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಟಿ20 ಸರಣಿಯನ್ನ ಜಯಿಸಿದ ಭಾರತ 2-1 ಅಂತರದಲ್ಲಿ ಸರಣಿಯನ್ನ ವಶಪಡಿಸಿಕೊಂಡಿತು. ಆದ್ರೆ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಟೀಕೆಗೆ ಗುರಿಯಾಯಿತು. ಇದಕ್ಕೆ ಕಾರಣ ಬೌಲರ್‌ಗಳನ್ನ ಬಳಸಿಕೊಂಡಂತಹ ರೀತಿ.

ಆಸಿಸ್‌ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದ ಕೋಚ್ ರಾಹುಲ್ ದ್ರಾವಿಡ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲಗೊಂಡ ಘಟನೆಗೆ ಸಾಕ್ಷಿಯಾಗಿದೆ. ಬಹಳ ಅಪರೂಪವೆಂಬಂತೆ ರಾಹುಲ್ ದ್ರಾವಿಡ್ ಗರಂ ಆಗಿ ಪತ್ರಕರ್ತನ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಅಕ್ಷರ್ ಪಟೇಲ್‌ಗೆ ಪೂರ್ಣ ಖೋಟಾ ಬೌಲಿಂಗ್ ಕೊಡಲಿಲ್ಲ!

ಅಕ್ಷರ್ ಪಟೇಲ್‌ಗೆ ಪೂರ್ಣ ಖೋಟಾ ಬೌಲಿಂಗ್ ಕೊಡಲಿಲ್ಲ!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ಏಕೆ ಪೂರ್ಣ ಓವರ್ ಬೌಲಿಂಗ್ ಕೊಡಲಿಲ್ಲ ಎಂದು ಪರ್ತಕರ್ತನೊಬ್ಬನು ಪ್ರಶ್ನೆ ಕೇಳಿದ್ದಾನೆ. ಸಂಪೂರ್ಣ ಸರಣಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಅಕ್ಷರ್ ಪಟೇಲ್ ಕೇವಲ 1 ಓವರ್ ಮಾತ್ರ ಬೌಲಿಂಗ್ ಮಾಡಿದ್ದು ಏಕೆ ಎಂದು ಪ್ರಶ್ನೆಯನ್ನ ಕೇಳಲಾಯಿತು.

ಹರಿಣಗಳು ಅಂತಿಮ ಟಿ20 ಪಂದ್ಯದಲ್ಲಿ ಚಿಕ್ಕ ಬೌಂಡರಿಗಳನ್ನ ಲಾಭವನ್ನ ಪಡೆದು 227ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು. ರಿಲ್ಲೆ ರೊಸ್ಸೊವ್ ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ ಅಬ್ಬರಿಸಿದ್ರು. ಕ್ವಿಂಟನ್ ಡಿಕಾಕ್ ಅರ್ಧಶತಕ ಕಲೆಹಾಕಿದ್ರು.

ಸೂರ್ಯಕುಮಾರ್ ಯಾದವ್ ಕೇವಲ 48 ಗಂಟೆಗಳು ಮಾತ್ರ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಆಗಿದ್ದು ಹೇಗೆ?

ಅಕ್ಷರ್‌ ಪಟೇಲ್ ಮೊದಲ ಓವರ್ 13ರನ್ ನೀಡಿದ್ರು!

ಅಕ್ಷರ್‌ ಪಟೇಲ್ ಮೊದಲ ಓವರ್ 13ರನ್ ನೀಡಿದ್ರು!

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿದ್ದ ಅಕ್ಷರ್ ಪಟೇಲ್ ದಕ್ಷಿಣ ಆಫ್ರಿಕಾ ವಿರುದ್ಧದ ಚುಟುಕು ಸರಣಿಯಲ್ಲಿ ಮಿಂಚು ಹರಿಸಿದ್ದರು. ಮೊದಲೆರಡು ಟಿ20 ಪಂದ್ಯಗಳಲ್ಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದ ಅಕ್ಷರ್ ಪಟೇಲ್, ಮೂರನೇ ಟಿ20 ಪಂದ್ಯದಲ್ಲಿ ತಾನು ಮಾಡಿದ ಏಕೈಕ ಓವರ್‌ನಲ್ಲಿ 13ರನ್ ಬಿಟ್ಟುಕೊಟ್ಟರು. ಇದಾದ ಬಳಿಕ ಅಕ್ಷರ್‌ ಪಟೇಲ್‌ಗೆ ಬೌಲಿಂಗ್ ಮಾಡಲು ನೀಡಲಿಲ್ಲ.

ಈ ಹಿನ್ನೆಲೆಯಲ್ಲಿ ಅಕ್ಷರ್‌ಗೆ ಏಕೆ ಬೌಲಿಂಗ್ ನೀಡಲಿಲ್ಲ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಾಹುಲ್ ದ್ರಾವಿಡ್ ಗರಂ ಆಗಿ ಉತ್ತರಿಸಿದ್ದಾರೆ.

Ind vs SA 1st ODI: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಸಂಭಾವ್ಯ 11 ಆಟಗಾರರು

ಅಂಕಿ-ಅಂಶಗಳನ್ನ ಆಳವಾಗಿ ಬಗೆದು ನೋಡಿ, ನಿಮಗೆ ಉತ್ತರ ಸಿಗಲಿದೆ!

ಅಂಕಿ-ಅಂಶಗಳನ್ನ ಆಳವಾಗಿ ಬಗೆದು ನೋಡಿ, ನಿಮಗೆ ಉತ್ತರ ಸಿಗಲಿದೆ!

"ಪಂದ್ಯ ಮೇಲ್ಮುಖವಾಗಿ ಸಾಗುವುದು ಮುಖ್ಯ, ಅವು ಹೆಚ್ಚು ಮುಖ್ಯವೋ ಇಲ್ಲವೋ (ಬೌಲಿಂಗ್ ನೀಡುವುದು), ಮ್ಯಾಚ್-ಅಪ್‌ಗಳ ಬಗ್ಗೆ ನೀವು ಆಳವಾಗಿ ಅಂಕಿ-ಅಂಶಗಳನ್ನ ತಿಳಿಯಿರಿ. ಎಡಗೈ ಬ್ಯಾಟ್ಸ್‌ಮನ್‌ಗಳ ಸಂಖ್ಯೆಗಳ ಬಗ್ಗೆ ಅಂಕಿಅಂಶಗಳು ನಿಮಗೆ ಏನು ಹೇಳುತ್ತವೆ ಎಂಬುದನ್ನು ನೋಡುವುದು ಮುಖ್ಯ. ಎಡಗೈ ಸ್ಪಿನ್ನರ್‌ಗಳ ವಿರುದ್ಧ ಎಡಗೈ ಬ್ಯಾಟರ್‌ಗಳು ಹೇಗೆ ರನ್ ಕಲೆಹಾಕಿದ್ದಾರೆ ಎಂದು ನೀವು ಕೆಲವು ಉತ್ತರಗಳನ್ನು ಪಡೆಯಬಹುದು'' ಎಂದು ರಾಹುಲ್ ದ್ರಾವಿಡ್ ಮಂಗಳವಾರದ ಸೋಲಿನ ನಂತರ ಭಾರತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅಂದ್ರೆ ಎಡಗೈ ಬ್ಯಾಟರ್‌ಗಳು ಎಡಗೈ ಸ್ಪಿನ್ನರ್‌ಗಳ ವಿರುದ್ಧ ಸಾಕಷ್ಟು ಮೇಲುಗೈ ಸಾಧಿಸಿರುವುದನ್ನ ಕ್ರಿಕೆಟ್ ಇತಿಹಾಸದಲ್ಲಿ ಕಾಣಬಹುದು. ಟಾಸ್ ಸೋತು ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಅಕ್ಷರ್ ಪಟೇಲ್‌ಗೆ ಮತ್ತೆ ಬೌಲಿಂಗ್ ನೀಡಿದ್ರೆ ಇನ್ನಷ್ಟು ಸಿಡಿಯುತ್ತಿದ್ರೂ ಎಂಬುದು ರಾಹುಲ್ ದ್ರಾವಿಡ್ ಮಾತಿನ ಅರ್ಥವಾಗಿದೆ.

ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 227ರನ್‌ಗಳನ್ನ ಕಲೆಹಾಕಿದ್ರೆ, ಇದಕ್ಕೆ ಉತ್ತರವಾಗಿ ರನ್ ಚೇಸ್ ಮಾಡಿದ ಭಾರತ ಪರ ದಿನೇಶ್ ಕಾರ್ತಿಕ್ 46ರನ್‌ಗಳಿಸಿದ್ದು ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಕೆಳಕ್ರಮಾಂಕದಲ್ಲಿ ದೀಪಕ್ ಚಹಾರ್ ಸ್ಪೋಟಕವಾಗಿ 31ರನ್ ಸಿಡಿಸಿದ್ರೂ ತಂಡವು ಗೆಲುವಿನ ಸಮೀಪಕ್ಕೂ ಬರಲಿಲ್ಲ. 18.3 ಓವರ್‌ಗಳಲ್ಲಿ ಭಾರತ 178ರನ್‌ಗಳಿಗೆ ಆಲೌಟ್ ಆಗಿದೆ. ಪರಿಣಾಮ ದಕ್ಷಿಣ ಆಫ್ರಿಕಾ 49ರನ್‌ಗಳಿಂದ ಅಂತಿಮ ಪಂದ್ಯ ಗೆದ್ದಿತು.

Story first published: Thursday, October 6, 2022, 15:10 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X