ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮುಂದುವರೆದಿದ್ದರೂ ನಾನು ಆಡುತ್ತಿರಲಿಲ್ಲ; ಸಮಸ್ಯೆ ಹಂಚಿಕೊಂಡ ಚಾಹಲ್

I would’ve pulled out if IPL 2021 wasn’t suspended says Yuzvendra Chahal
Yuzvendra Chahal ಕಡೆಗೂ ಸತ್ಯವನ್ನು ಬಿಚ್ಚಿಟ್ಟಿದ್ದಾರೆ | Oneindia Kannada

ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಆರಂಭವಾಗಿದ್ದ ಈ ಬಾರಿಯ ಐಪಿಎಲ್ ಟೂರ್ನಿ 29 ಪಂದ್ಯಗಳು ಯಶಸ್ವಿಯಾಗಿ ಮುಗಿದ ನಂತರ ಕೊರೊನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದೆ. ಐಪಿಎಲ್ ಬಯೋಬಬಲ್ ಒಳಗೆ ಕೊರೊನಾವೈರಸ್ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರಿಗೆ ಮತ್ತು ತರಬೇತುದಾರರಿಗೆ ಸೋಂಕು ತಗುಲಿದ ಕಾರಣ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು.

ಆವತ್ತು ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ಗೆದ್ದಿತ್ತು!ಆವತ್ತು ಹರ್ಷಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ಗೆದ್ದಿತ್ತು!

ಇದೀಗ ಐಪಿಎಲ್ ಮುಂದೂಡಲ್ಪಟ್ಟ ವಿಷಯದ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಯುಜುವೇಂದ್ರ ಚಾಹಲ್ ಮಾತನಾಡಿದ್ದು ಗಂಭೀರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ಚಾಹಲ್ ಒಂದುವೇಳೆ ಐಪಿಎಲ್ ಮುಂದೂಡಲ್ಪಡದೇ ಮುಂದುವರೆದಿದ್ದರೂ ಕೂಡ ತಾನು ಸಂಪೂರ್ಣ ಟೂರ್ನಿಯನ್ನು ಆಡುತ್ತಿರಲಿಲ್ಲ ಎಂಬ ವಿಚಾರವನ್ನು ಚಾಹಲ್ ಬಹಿರಂಗಪಡಿಸಿದ್ದಾರೆ.

ಕುಲ್‌ದೀಪ್ ಮತ್ತು ತನಗೆ ತಂಡದಲ್ಲಿ ಸರಿಯಾದ ಅವಕಾಶ ಸಿಗದಿರುವುದಕ್ಕೆ ಕಾರಣ ಬಿಚ್ಚಿಟ್ಟ ಚಹಾಲ್ಕುಲ್‌ದೀಪ್ ಮತ್ತು ತನಗೆ ತಂಡದಲ್ಲಿ ಸರಿಯಾದ ಅವಕಾಶ ಸಿಗದಿರುವುದಕ್ಕೆ ಕಾರಣ ಬಿಚ್ಚಿಟ್ಟ ಚಹಾಲ್

ಹೌದು ಚಾಹಲ್ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಚಾಹಲ್ ತಂದೆ ಮತ್ತು ತಾಯಿ ಇಬ್ಬರಿಗೂ ಸಹ ಕೊರೊನಾ ಸೋಂಕು ತಗುಲಿತ್ತು. ಚಾಹಲ್ ತಾಯಿಗೆ ಕೊರೊನಾಸೋಂಕಿನ ಲಕ್ಷಣಗಳು ಕಡಿಮೆ ಇದ್ದ ಕಾರಣ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದರು, ಆದರೆ ಚಾಹಲ್ ತಂದೆಗೆ ಸೋಂಕು ತೀವ್ರ ಪ್ರಮಾಣದಲ್ಲಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಟೂರ್ನಿಯಲ್ಲಿ ಆಟದ ಕಡೆ ಹೆಚ್ಚಿನ ಗಮನಹರಿಸಲು ಆಗುತ್ತಿರಲಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಪೋಷಕರ ಜೊತೆ ಇರುವುದು ಅಗತ್ಯವಾಗಿತ್ತು ಎಂದು ಹೇಳಿಕೊಂಡಿರುವ ಚಾಹಲ್ ಒಂದುವೇಳೆ ಐಪಿಎಲ್ ಮುಂದುವರೆದಿದ್ದರೂ ಸಹ ತಾನು ಟೂರ್ನಿಯಿಂದ ಹೊರಗುಳಿಯುತ್ತಿದ್ದೆ ಎಂದಿದ್ದಾರೆ.

Story first published: Friday, May 21, 2021, 20:38 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X