ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Surgical Strike 2: ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ ಸಚಿನ್ ತೆಂಡೂಲ್ಕರ್!

Surgical Strike 2: ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ ಸಚಿನ್ ತೆಂಡೂಲ್ಕರ್! | Oneindia Kannada
IAF air strikes across LoC: Sachin Tendulkar has a message for Pakistan

ಮುಂಬೈ, ಫೆಬ್ರವರಿ 26: ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳಿಗೆ ದಾಳಿ ನಡೆಸಿದೆ. ಇದಕ್ಕೆ ಸಂಬಂಧಿಸಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪಾಕ್‌ಗೆ ಟ್ವಿಟರ್ ಮೂಲಕ ಸಂದೇಶ ರವಾನಿಸಿದ್ದಾರೆ. ಟ್ವೀಟ್‌ನಲ್ಲಿ ಪಾಕಿಸ್ತಾನವನ್ನು ತೆಂಡೂಲ್ಕರ್ ಎಚ್ಚರಿಸಿದ್ದಾರೆ.

ಚೆನ್ನಾಗಿ ಆಡಿದ್ದೀರಿ: ಸರ್ಜಿಕಲ್‌ ಸ್ಟ್ರೈಕ್‌-2ಗೆ ಕ್ರಿಕೆಟ್ ಸ್ಟೈಲಲ್ಲಿ ಸೆಹ್ವಾಗ್ ಮೆಚ್ಚುಗೆ!ಚೆನ್ನಾಗಿ ಆಡಿದ್ದೀರಿ: ಸರ್ಜಿಕಲ್‌ ಸ್ಟ್ರೈಕ್‌-2ಗೆ ಕ್ರಿಕೆಟ್ ಸ್ಟೈಲಲ್ಲಿ ಸೆಹ್ವಾಗ್ ಮೆಚ್ಚುಗೆ!

ಪುಲ್ವಾಮಾ ಪ್ರತಿದಾಳಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಸಚಿನ್, 'ನಮ್ಮ ಒಳ್ಳೆಯತನವನ್ನು ದೌರ್ಬಲ್ಯವೆಂದು ಯಾವತ್ತಿಗೂ ಭಾವಿಸಬೇಡಿ' ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ. ಜೊತೆಗೆ 'ಐಎಎಫ್‌ಗೆ ನನ್ನ ವಂದನೆಗಳು. ಜೈ ಹಿಂದ್' ಎಂದೂ ಸಾಲನ್ನು ಸೇರಿಸಿಕೊಂಡಿದ್ದಾರೆ.

'ಕುಸ್ತಿಗೆ ಬೈ, ಮಾರ್ಷಲ್ ಆರ್ಟ್ಸ್‌ಗೆ ಜೈ' ಎಂದ ರಸ್ಲರ್ ರೀತು ಫೋಗಟ್!'ಕುಸ್ತಿಗೆ ಬೈ, ಮಾರ್ಷಲ್ ಆರ್ಟ್ಸ್‌ಗೆ ಜೈ' ಎಂದ ರಸ್ಲರ್ ರೀತು ಫೋಗಟ್!

ಪುಲ್ವಾಮಾ ದಾಳಿಯಲ್ಲಿ ಭಾರತೀಯ 40ಕ್ಕೂ ಅಧಿಕ ಯೋಧರು ಮೃತರಾಗಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಭಾರತ, ಪಾಕಿಸ್ತಾನದ ಬಾಲಾಕೋಟ್, ಚಕೋತಿ ಮತ್ತು ಮುಝಾಫರಬಾದ್ ನಲ್ಲಿದ್ದ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ 350ಕ್ಕೂ ಅಧಿಕ ಉಗ್ರರು ಹತರಾಗಿದ್ದ ಬಗ್ಗೆ ಭಾರತೀಯ ಸೇನೆ ಮಾಹಿತಿ ನೀಡಿತ್ತು.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಪಾಕ್ ಬೆಂಬಲಿತ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಇದರಲ್ಲಿ 40ಕ್ಕೂ ಹೆಚ್ಚು ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯು ಸೇನೆ ದಾಳಿ ನಡೆಸಿ ಸುಮಾರು 325 ಉಗ್ರರು ಮತ್ತು 25-27 ತರಬೇತಿ ನಿರತ ಉಗ್ರರನ್ನು ಬಲಿ ಪಡೆದಿದೆ.

Story first published: Tuesday, February 26, 2019, 16:01 [IST]
Other articles published on Feb 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X