ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಪರವಾಗಿ ಟಿ20 ಆಡಲು ನಾನು ಸಿದ್ದ: ಹರ್ಭಜನ್ ಸಿಂಗ್

Iam Fit To Play For India In T20Is Says Harbhajan Singh

ಭಾರತದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತೆ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ತಾನು ಭಾರತದ ಪರವಾಗಿ ಕ್ರಿಕೆಟ್ ಆಡಲು ಫಿಟ್ ಆಗಿದ್ದೇನೆ ಎಂಬುದನ್ನು ಟರ್ಬನೇಟರ್ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಹರ್ಭಜನ್ 2016ರ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.

ಬೌಲರ್‌ಗಳ ಪಾಲಿಗೆ ಐಪಿಎಲ್ ಕಠಿಣವಾಗಿರುವ ಟೂರ್ನಮೆಂಟ್. ಇಲ್ಲಿ ಅಂಗಳ ಚಿಕ್ಕದಾಗಿರುತ್ತದೆ. ವಿಶ್ವ ಕ್ರಿಕೆಟ್‌ನ ಘಟಾನುಘಟಿ ಆಟಗಾರರು ಇದರಲ್ಲಿ ಪಾಲ್ಗೊಂಡಿರುತ್ತಾರೆ. ಹಾಗಿದ್ದರೂ ನಾನು ಐಪಿಎಲ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬಲ್ಲೆ. ಹಾಗಾಗಿ ಭಾರತದ ಪರವಾಗಿ ಆಡಲು ನಾನು ತಯಾರಾಗಿದ್ದೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಎಂಜಲು ಬಳಕೆ ನಿಷೇಧಿಸಲಿ, ಆದರೆ ಬೌಲರ್‌ಗಳಿಗೆ ಸಹಕಾರಿಯಾಗುವ ಪಿಚ್ ನಿರ್ಮಾಣವಾಗಲಿ: ಪಠಾಣ್ಎಂಜಲು ಬಳಕೆ ನಿಷೇಧಿಸಲಿ, ಆದರೆ ಬೌಲರ್‌ಗಳಿಗೆ ಸಹಕಾರಿಯಾಗುವ ಪಿಚ್ ನಿರ್ಮಾಣವಾಗಲಿ: ಪಠಾಣ್

ಘಟಾನುಘಟಿ ಆಟಗಾರರು ಪಾಲ್ಗೊಂಡಿರುವ ಐಪಿಎಲ್‌ನಲ್ಲಿ ಬೌಲಿಂಗ್ ಮಾಡುವುದು ದೊಡ್ಡ ಸವಾಲು. ಅಲ್ಲಿ ನೀವು ಉತ್ತಮವಾಗಿ ಬೌಲಿಮಗ್ ಪ್ರದರ್ಶನ ನೀಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್ ಮಾಡಲು ಸಾಧ್ಯವಿದೆ ಎಂದು ಹರ್ಭಜನ್ ಸಿಂಗ್ ಕ್ರೀಡಾ ಸುದ್ದಿವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪವರ್‌ ಪ್ಲೇ ಮತ್ತು ಪಂದ್ಯದ ಮಧ್ಯಭಾಗದಲ್ಲಿ ವೈವಿಧ್ಯವಾಗಿ ಬೌಲಿಂಗ್ ಮಾಡುತ್ತೇನೆ. ಹೀಗಾಗಿ ವಿಕೆಟ್ ಕೂಡ ಪಡೆಯುತ್ತೇನೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ.

ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರಾ ಸೌರವ್ ಗಂಗೂಲಿ ?

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಮೂರನೇ ಸ್ಥಾನದಲ್ಲಿ ಜಂಟಿಯಾಗಿದ್ದಾರೆ. ಎಕಾನಮಿ ರೇಟ್ 7ರಷ್ಟು ಕಾಪಾಡಿಕೊಂಡಿದ್ದಾರೆ ಹರ್ಭಜನ್ ಸಿಂಗ್. ಐಪಿಎಲ್ ಮೂಲಕ ಟೀಮ್ ಇಂಡಿಯಾಗೆ ಮತ್ತೆ ಅವಕಾಶವನ್ನು ಪಡೆದುಕೊಳ್ಳುವ ಭರವಸೆಯನ್ನು ಅವರು ವ್ಯಕ್ತಡಿಸಿದ್ದಾರೆ.

Story first published: Monday, May 25, 2020, 12:50 [IST]
Other articles published on May 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X