ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗಾಗಿ ಐಪಿಎಲ್ ತ್ಯಜಿಸಿದ ನಿರ್ಧಾರದ ಬಗ್ಗೆ ಪಶ್ಚಾತ್ತಾಪವಿಲ್ಲ: ಮಿಚೆಲ್ ಸ್ಟಾರ್ಕ್

Iam Happy With My Dicision Australian Pacer Mitchell Starc On Ipl

ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಅಸ್ತ್ರ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್‌ಅನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಐಪಿಎಲ್‌ನಲ್ಲಿ ಆಡದಿರುವ ನಿರ್ಧಾರವನ್ನು ಕೈಗೊಂಡಿದ್ದರು. ಹೀಗಾಗಿ ಆವೃತ್ತಿಯ ಐಪಿಎಲ್ ಹರಾಜಿನಿಂದಲೇ ಸ್ಟಾರ್ಕ್ ಹೊರಗುಳಿದಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಮುಂದೂಡಿಕೆಯಾಗಿದ್ದು ಆ ಅವಕಾಶದಲ್ಲಿ ಐಪಿಎಲ್‌ಗೆ ಸಿದ್ಧತೆಗಳು ನಡೆಯುತ್ತಿದೆ.

ಆದರೆ ತಾನು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಮಿಚೆಲ್ ಸ್ಟಾರ್ಕ್ ಹೇಳಿಕೊಂಡಿದ್ದಾರೆ. ಪಶ್ಚಾತ್ತಾಪ ಎಂಬುದು ಅದ್ಭುತವಾದ ಸಂಗತಿ. ಆದರೆ ಈ ಬಾರಿಯ ಐಪಿಎಲ್ ಬೇರೆ ಸಮಯದಲ್ಲಿ ನಡೆಯುತ್ತಿದೆ. ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ ಎಂದು ಆಸಿಸ್ ವೇಗಿ ಪ್ರತಿಕ್ರಿಯಿಸಿದ್ದಾರೆ.

ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್ಕಮ್‌ಬ್ಯಾಕ್‌ ಬಳಿಕ ಧೋನಿ, ಕೊಹ್ಲಿ ಬೆಂಬಲ ಹೇಗಿತ್ತು: ವಿವರವಾಗಿ ಬಿಚ್ಚಿಟ್ಟ ಯುವರಾಜ್ ಸಿಂಗ್

ನನ್ನ ನಿರ್ಧಾರದಿಂದ ಸಂತೋಷ

ನನ್ನ ನಿರ್ಧಾರದಿಂದ ಸಂತೋಷ

ಸೆಪ್ಟೆಂಬರ್‌ನಲ್ಲಿ ಐಪಿಎಲ್‌ನಡೆಯುವ ಸಂದರ್ಭದಲ್ಲಿ ನಾನು ವೈಯಕ್ತಿಕವಾಗಿ ಸಮಯಕಳೆಯಲು ಸಂತೋಷಪಡುತ್ತೇನೆ. ನಾನು ಮುಂದಿನ ಬೇಸಿಗೆಗೆ ತಯಾರಾಗುತ್ತೇನೆ. ಮುಂದಿನ ವರ್ಷ ಐಪಿಎಲ್ ಇರಲಿದೆ, ಜನರು ಅಲ್ಲಿ ನನ್ನನ್ನು ನೋಡಲು ಬಯಸಿದರೆ ಅದನ್ನು ಪರಿಗಣಿಸುತ್ತೇನೆ. ಆದರೆ ಈ ವರ್ಷದ ನನ್ನ ನಿರ್ಧಾರದಿಂದ ನಾನು ಸಂತೋಷಗೊಂಡಿದ್ದೇನೆ ಎಂದು ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.

ವಿಶ್ವಕಪ್‌ಗಾಗಿ ಐಪಿಎಲ್ ತ್ಯಾಗ

ವಿಶ್ವಕಪ್‌ಗಾಗಿ ಐಪಿಎಲ್ ತ್ಯಾಗ

ಆಸ್ಟ್ರೇಲಿಯಾದ ಪ್ರಮುಖ ಕ್ರಿಕೆಟಿಗರೆಲ್ಲರೂ ಐಪಿಎಲ್‌ನಲ್ಲು ಆಡಲು ಉತ್ಸುಕರಾಗಿದ್ದಾಗ ಸ್ಟಾರ್ಕ್ ಮಾತ್ರ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಸಲುವಾಗಿ ಐಪಿಎಲ್‌ನಿಂದ ದೂರುಳಿಯುವ ನಿರ್ಧಾರವನ್ನು ಕೈಗೊಂಡಿದ್ದರು. ಈ ಸಮಯದಲ್ಲಿ ಚುಟುಕು ವಿಶ್ವಕಪ್‌ಗೆ ತಯಾರಿ ನಡಸಲು ಸ್ಟಾರ್ಕ್ ಗಮನನೀಡಲು ಬಯಸಿದ್ದರು. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ವಿಶ್ವಕಪ್‌ ಮುಂದೂಡಲಾಗಿದೆ.

ಆರ್‌ಸಿಬಿ ಪರ ಮಿಂಚಿದ್ದ ಸ್ಟಾರ್ಕ್

ಆರ್‌ಸಿಬಿ ಪರ ಮಿಂಚಿದ್ದ ಸ್ಟಾರ್ಕ್

ರ್‌ಸಿಬಿ ತಂಡದಲ್ಲಿ ಈವರೆಗೆ ಕಣಕ್ಕಿಳಿದಿದ್ದರು. 27 ಪಂದ್ಯಗಳಲ್ಲಿ ಆಡಿರುವ ಸ್ಟಾರ್ಕ್ 2014 ಹಾಗೂ15ರಲ್ಲಿ ಆರ್‌ಸಿಬಿ ಪರವಾಗಿ 27 ಪಂದ್ಯಗಳಿಂದ 34 ವಿಕೆಟ್ ಪಡೆದಿದ್ದರು. 2018ರಲ್ಲಿ 9.6 ಕೋಟಿಗೆ ಕೆಕೆಆರ್ ತಂಡದ ಪಾಲಾದ ಸ್ಟಾರ್ಕ್ ಗಾಯಕ್ಕೆ ತುತ್ತಾದ ಕಾರಣ ತಂಡದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

Story first published: Wednesday, August 5, 2020, 10:14 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X