ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

13 ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಗೌರವ: ಅರ್ಜುನ ಪ್ರಶಸ್ತಿ ಗೆದ್ದ ಸಂಭ್ರಮ ವ್ಯಕ್ತಪಡಿಸಿದ ಇಶಾಂತ್

Iam Very Proud of Myself Ishant Sharma on Arjun Award Honour

ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಈ ಬಾರಿಯ ಅರ್ಜುನ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಕಳೆದ 13 ವರ್ಷಗಳ ಕಾಲ ಪಟ್ಟಿರುವ ಪರಿಶ್ರಮಕ್ಕೆ ದೊರೆತ ಗೌರವವಿದು. ತನಗೆ ಹಾಗೂ ತನ್ನ ಕುಟುಂಬಕ್ಕೆ ಈ ಕ್ಷಣ ತುಂಬಾ ಹೆಮ್ಮೆಯ ಸಂದರ್ಭವಾಗಿದೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

2020ರ ಕ್ರೀಡಾ ಪ್ರಶಸ್ತಿ ಪುರಸ್ಕಾರಕ್ಕಾಗಿ 27 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿತ್ತು, ಇದರಲ್ಲಿ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ಸೇರಿಕೊಂಡಿದ್ದಾರೆ. "ತನ್ನ ಪತ್ನಿ ಬಾಸ್ಕೆಟ್‌ಬಾಲ್ ಪ್ಲೇಯರ್ ಪ್ರತಿಮಾ ಸಿಂಗ್ ಯಾವಾಗಲೂ ನಾನು ಈ ಪ್ರಶಸ್ತಿ ಪಡೆಯಲು ಕಾಯುತ್ತಿದ್ದರು. ಅವರಿಗೆ ಇದು ತುಂಬಾ ಹೆಮ್ಮೆಯ ವಿಚಾರ ಎಂದು ಇಶಾಂತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಸಚಿನ್ ಹೆಸರಲ್ಲಿರುವ 100 ಶತಕಗಳ ದಾಖಲೆ ಮುರಿಯುವ ಸಾಮರ್ಥ್ಯವಿರುವುದು ಆತನೊಬ್ಬನಿಗೆ: ಪಠಾಣ್ಸಚಿನ್ ಹೆಸರಲ್ಲಿರುವ 100 ಶತಕಗಳ ದಾಖಲೆ ಮುರಿಯುವ ಸಾಮರ್ಥ್ಯವಿರುವುದು ಆತನೊಬ್ಬನಿಗೆ: ಪಠಾಣ್

ಕ್ರಿಕೆಟ್‌ನಲ್ಲಿ ಪುರುಷರ ತಂಡದಲ್ಲಿ ಇಶಾಂತ್ ಶರ್ಮಾ ಹಾಗೂ ಮಹಿಳಾ ತಂಡದಲ್ಲಿ ದೀಪ್ತಿ ಶರ್ಮಾ ಮಾತ್ರವೇ ಈ ಬಾರಿಯ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ರಿಕೆಟರ್‌ಗಳಾಗಿದ್ದಾರೆ. ಭಾರತೀಯ ಕ್ರಕೆಟ್‌ನ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಕ್ರೀಡಾ ವಿಭಾಗದ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಇಶಾಂತ್ ಶರ್ಮಾ ಭಾರತೀಯ ಕ್ರಿಕೆಟ್ ತಂಡಕ್ಕೆ 2007ರಲ್ಲಿ ಪದಾರ್ಪಣೆಯನ್ನು ಮಾಡಿದ್ದರು. ಪ್ರಸಕ್ತ ಬಾರತೀಯ ಕ್ರಿಕೆಟ್‌ನ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷದಲ್ಲಿ ಸುದೀರ್ಘ ಸ್ವರೂಪದ ಮಾದರಿಯಲ್ಲಿ ಇಶಾಂತ್ ಶರ್ಮಾ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಬಳಿಕ ತನ್ನ ಬೌಲಿಂಗ್ ದಾಳಿಯಲ್ಲಿ ಮತ್ತಷ್ಟು ಮೊನಚು ಕಂಡುಕೊಂಡ ಇಶಾಂತ್ 2018ರಲ್ಲಿ 21.80 ಸರಾಸರಿಯಲ್ಲಿ 41 ವಿಕೆಟ್ ಪಡೆದಿದ್ದರು. 2019ರಲ್ಲಿ 15.56ರ ಸರಾಸರಿಯಲ್ಲಿ 25 ವಿಕೆಟ್ ಪಡೆದಿದ್ದಾರೆ.

ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್‌ ರೀತಿಯಲ್ಲೇ ಫ್ರೀ ಬಾಲ್!ಮಂಕಡಿಂಗ್ ವಿವಾದಕ್ಕೆ ಆರ್ ಅಶ್ವಿನ್ ಸೂಪರ್ ಸಲಹೆ: ಫ್ರೀಹಿಟ್‌ ರೀತಿಯಲ್ಲೇ ಫ್ರೀ ಬಾಲ್!

"ತಂಡದ ಭಾರತದ ಬೌಲಿಂಗ್‌ನ ಮನಸ್ಥಿತಿಯೆಂದರೆ, ನಾವು ಯಾವಾಗಲೂ ಪಂದ್ಯವನ್ನು ಹೇಗೆ ಗೆಲ್ಲುವುದು ಎಂಬುದರ ಬಗ್ಗೆ ಯೋಚಿಸುತ್ತೇವೆ. ಅದು ನಮಗೆ ಅತ್ಯಂತ ಮುಖ್ಯವಾದ ಆದ್ಯತೆಯಾಗಿದೆ. ನಾವು ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ರಣತಂತ್ರವನ್ನು ಹೆಣೆಯುತ್ತೇವೆ. ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೆ ಅನುಗುಣವಾಗಿ ಯೋಜನೆ ರೂಪಿಸಿ ಅದನ್ನು ಅಂಗಳದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ" ಎಂದು ಇಶಾಂತ್ ಶರ್ಮಾ ಪ್ರಸಕ್ತ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದರು.

Story first published: Tuesday, August 25, 2020, 9:49 [IST]
Other articles published on Aug 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X