ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup Prize : ಬಹುಮಾನದ ಮೊತ್ತ ಘೋಷಣೆ ಮಾಡಿದ ಐಸಿಸಿ, ಕಪ್ ಗೆದ್ದ ತಂಡಕ್ಕೆ ಸಿಗುವ ಹಣ ಎಷ್ಟು ಗೊತ್ತಾ?

ICC Announced The Prize Money For The ICC T20 World Cup 2022: Winners Will Recieve $ US 1.6 Million

ಐಸಿಸಿ ಪುರುಷರ ಟಿ20 ವಿಶ್ವಕಪ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಷ್ಠಿತ ಟೂರ್ನಿಯಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಲಿವೆ. ಐಸಿಸಿ, ಟಿ20 ವಿಶ್ವಕಪ್‌ನಲ್ಲಿ ಬಹುಮಾನದ ಮೊತ್ತವನ್ನ ಘೋಷಣೆ ಮಾಡಿದೆ.

ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ತಂಡಕ್ಕೆ 1.6 ಮಿಲಿಯನ್ ಡಾಲರ್ (13 ಕೋಟಿ ರುಪಾಯಿ) ನಗದು ಬಹುಮಾನ ಸಿಗಲಿದೆ. ರನ್ನರ್ ಆಗುವ ತಂಡ 8 ಲಕ್ಷ ಡಾಲರ್ (6.5 ಕೋಟಿ ರುಪಾಯಿ) ನಗದು ಬಹುಮಾನವನ್ನು ಪಡೆಯಲಿದೆ. ನವೆಂಬರ್ 13ರಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

T20 World Cup 2022: ಸರಿಯಾದ ಸಮಯದಲ್ಲಿ ಆತ ರನ್ ಗಳಿಸಲು ಆರಂಭಿಸಿದ್ದಾನೆ: ರಾಸ್ ಟೇಲರ್T20 World Cup 2022: ಸರಿಯಾದ ಸಮಯದಲ್ಲಿ ಆತ ರನ್ ಗಳಿಸಲು ಆರಂಭಿಸಿದ್ದಾನೆ: ರಾಸ್ ಟೇಲರ್

ಒಂದು ತಿಂಗಳ ಕಾಲ ನಡೆಯುವ ಪ್ರತಿಷ್ಠಿತಿ ಟೂರ್ನಿಯಲ್ಲಿ ಎಲ್ಲಾ 16 ತಂಡಗಳು ಕೂಡ ನಗದು ಬಹುಮಾನವನ್ನು ಸ್ವೀಕರಿಸಲಿವೆ. ಸೆಮಿಫೈನಲ್‌ನಲ್ಲಿ ಸೋಲುವ ತಂಡಗಳಿಗೆ ತಲಾ 4 ಲಕ್ಷ ಡಾಲರ್ (3.26 ಕೋಟಿ ರುಪಾಯಿ) ಬಹುಮಾನ ಸಿಗಲಿದೆ.

ಸೂಪರ್ 12 ಹಂತದಲ್ಲಿ ನಿರ್ಗಮಿಸುವ ಎಂಟು ತಂಡಗಳು ತಲಾ 70,000 ಡಾಲರ್ (57 ಲಕ್ಷ ರುಪಾಯಿ) ನಗದು ಬಹುಮಾನವನ್ನು ಪಡೆಯಲಿವೆ. ಐಸಿಸಿ ಪುರುಷರ T20 ವಿಶ್ವಕಪ್ 2021 ರಲ್ಲಿ ಕಳೆದ ವರ್ಷದಂತೆ, ಸೂಪರ್ 12 ಹಂತದಲ್ಲಿ 30 ಪಂದ್ಯಗಳಲ್ಲಿ ಪ್ರತಿ ಗೆಲುವು 40,000 ಡಾಲರ್ ಮೌಲ್ಯದ್ದಾಗಿದೆ.

ಒಟ್ಟು 16 ತಂಡಗಳು ಟಿ20 ವಿಶ್ವಕಪ್‌ನಲ್ಲಿ ಭಾಗಿ

ಒಟ್ಟು 16 ತಂಡಗಳು ಟಿ20 ವಿಶ್ವಕಪ್‌ನಲ್ಲಿ ಭಾಗಿ

ಸೂಪರ್ 12 ಹಂತಕ್ಕೆ ನೇರವಾಗಿ ಪ್ರವೇಶಿಸಿದ ಎಂಟು ತಂಡಗಳೆಂದರೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ.

ಇತರ ಎಂಟು ತಂಡಗಳು: ಎ ಗುಂಪಿನಲ್ಲಿ ನಮೀಬಿಯಾ, ಶ್ರೀಲಂಕಾ, ನೆದರ್ಲ್ಯಾಂಡ್ಸ್, ಯುಎಇ ಮತ್ತು ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ. ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ ಮತ್ತು ಮೊದಲ ಸುತ್ತನ್ನು ಆಡಲಿದೆ.

ಮೊದಲ ಸುತ್ತಿನಲ್ಲಿ ಗೆಲ್ಲುವ ತಂಡಕ್ಕೆ 40,000 ಡಾಲರ್ ಬಹುಮಾನದ ಹಣವನ್ನು ನೀಡಲಾಗುತ್ತದೆ. ಮೊದಲ ಸುತ್ತಿನಲ್ಲಿ ಹೊರಬಿದ್ದ ನಾಲ್ಕು ತಂಡಗಳು ತಲಾ 40,000 ಡಾಲರ್ ನಗದು ಬಹುಮಾನ ಪಡೆಯುತ್ತವೆ.

Ind Vs SA T20: ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯದ ವೇಳೆಗೆ ಕ್ರಿಕೆಟ್‌ನ ಹಲವು ನಿಯಮಗಳಲ್ಲಿ ಬದಲಾವಣೆ

 ಅಭ್ಯಾಸ ಪಂದ್ಯಗಳ ಆಯೋಜನೆ

ಅಭ್ಯಾಸ ಪಂದ್ಯಗಳ ಆಯೋಜನೆ

ವಿಶ್ವಕಪ್ ಆರಂಭಕ್ಕೆ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ, ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್‌ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿದೆ. ಮೊದಲ ಸುತ್ತಿನ ತಂಡಗಳು ತಮ್ಮ ಅಭ್ಯಾಸ ಪಂದ್ಯಗಳನ್ನು ಅಕ್ಟೋಬರ್ 10 ಮತ್ತು 13 ರ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಮತ್ತು ಜಂಕ್ಷನ್ ಓವಲ್‌ನಲ್ಲಿ ಆಡಲಿವೆ. ಸೂಪರ್ 12 ಸುತ್ತಿಗೆ ನೇರವಾಗಿ ಅರ್ಹತೆ ಪಡೆದಿರುವ ತಂಡಗಳು ಅಕ್ಟೋಬರ್ 17 ಮತ್ತು 19 ರಂದು ಬ್ರಿಸ್ಬೇನ್‌ನಲ್ಲಿ ತಮ್ಮ ಅಭ್ಯಾಸ ಪಂದ್ಯಗಳನ್ನು ಆಡಲಿವೆ.

ಅಕ್ಟೋಬರ್ 10 ರಂದು ವೆಸ್ಟ್ ಇಂಡೀಸ್ ಮತ್ತು ಯುಎಇ ನಡುವೆ ಜಂಕ್ಷನ್ ಓವಲ್‌ನಲ್ಲಿ ಮೊದಲ ಅಭ್ಯಾಸ ಪಂದ್ಯ ನಡೆಯಲಿದೆ. ಅಕ್ಟೋಬರ್ 16ರಿಂದ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದೆ. ಭಾರತ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಟೀಂ ಇಂಡಿಯಾಗೆ ಎರಡು ಅಭ್ಯಾಸ ಪಂದ್ಯ

ಟೀಂ ಇಂಡಿಯಾಗೆ ಎರಡು ಅಭ್ಯಾಸ ಪಂದ್ಯ

ಆತಿಥೇಯ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಮೊದಲ ಮತ್ತು ಏಕೈಕ ಅಭ್ಯಾಸ ಪಂದ್ಯವನ್ನು ಭಾರತದ ವಿರುದ್ಧ ಅಕ್ಟೋಬರ್ 17 ರಂದು ಗಬ್ಬಾದಲ್ಲಿ ಆಡುತ್ತದೆ. ಅಕ್ಟೋಬರ್ 19ರಂದು ಭಾರತ-ನ್ಯೂಜಿಲೆಂಡ್ ನಡುವೆ ಅಭ್ಯಾಸ ಪಂದ್ಯ ನಡೆಯಲಿದೆ.

ಗೀಲಾಂಗ್‌ನಲ್ಲಿ ಅಕ್ಟೋಬರ್ 16 ರಂದು ಶ್ರೀಲಂಕಾ ನಮೀಬಿಯಾವನ್ನು ಎದುರಿಸುವುದರೊಂದಿಗೆ ವಿಶ್ವಕಪ್‌ಗೆ ಅಧಿಕೃತವಾಗಿ ಪ್ರಾರಂಭವಾಗುತ್ತದೆ. ಒಂದು ತಿಂಗಳ ಕಾಲ ನಡೆಯುವ ಪ್ರತಿಷ್ಠಿತ ಟೂರ್ನಿಗಾಗಿ ಆಸ್ಟ್ರೇಲಿಯಾ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

Story first published: Friday, September 30, 2022, 15:02 [IST]
Other articles published on Sep 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X