ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC announces WTC final rules: ಭಾರತ vs ನ್ಯೂಜಿಲೆಂಡ್ ಪಂದ್ಯ ಡ್ರಾ ಆದರೆ ಏನಾಗುತ್ತೆ?!

ICC announces WTC final rules: India, New Zealand to share trophy if match ends in draw/tie

ಲಂಡನ್: ಕ್ರಿಕೆಟ್ ಪ್ರೇಮಿಗಳ ಚಿತ್ತ ಈಗ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನತ್ತ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021 ಮುಂದೂಡಲ್ಪಟ್ಟ ಬಳಿಕ ಭಾರತೀಯ ಆಟಗಾರರು ಪಾಲ್ಗೊಳ್ಳುತ್ತಿರುವ ಮೊದಲ ಪಂದ್ಯ ಇದು. ಜೂನ್ 18ರಿಂದ 22ರ ವರೆಗೆ ಸೌತಾಂಪ್ಟನ್‌ನ ರೋಸ್‌ಬೌಲ್‌ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯ ಒಂಥರಾ ಟೆಸ್ಟ್‌ ಕ್ರಿಕೆಟ್‌ನಲ್ಲಿನ ವಿಶ್ವಕಪ್ ಇದ್ದಂತೆ. ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಯಾರು ಗೆಲ್ಲಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.

ICC WTC Final Tickets: ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!ICC WTC Final Tickets: ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಸಲಿಗೆ ಶುರುವಾಗಿದ್ದು 2019ರಲ್ಲಿ. ಈ ಚಾಂಪಿಯನ್‌ಶಿಪ್‌ 2019-21ರ ವರೆಗೆ ನಡೆಯುತ್ತದೆ. ಮುಂದಿನ ಆವೃತ್ತಿ 2021-23ರ ವರೆಗೆ ನಡೆಯಲಿದೆ. ಮೊದಲ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ಬಲಿಷ್ಠ 9 ತಂಡಗಳು ಪಾಲ್ಗೊಂಡಿದ್ದವು.

ಐಸಿಸಿಯ ನಿಯಮಗಳು

ಐಸಿಸಿಯ ನಿಯಮಗಳು

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಸಂಬಂಧಿಸಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಮಗಳನ್ನು ಘೋಷಿಸಿದೆ. ಈ ಘೋಷಣೆಯ ಪ್ರಕಾರ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಜೂನ್ 18ರಿಂದ 22ರ ವರೆಗೆ ನಡೆಯಲಿದೆ. ಹವಾಮಾನ ವೈಪರೀತ್ಯದಿಂದ ಪಂದ್ಯ ಸ್ಥಗಿತಗೊಂಡರೆ ಮೀಸಲು ದಿನದಲ್ಲಿ ಮುಂದುವರೆಯಲಿದೆ. ಜೂನ್ 23 ಮೀಸಲು ದಿನವಾಗಿರಲಿದೆ. ಈ ನಿಯಮಗಳು 2018ರಲ್ಲೇ ನಿರ್ಧರಿಸಲಾಗಿತ್ತು ಎಂದು ಐಸಿಸಿ ತಿಳಿಸಿದೆ.

ರಿಸರ್ವ್ ಡೇ ಸೂಚನೆಗಳು

ರಿಸರ್ವ್ ಡೇ ಸೂಚನೆಗಳು

ರಿಸರ್ವ್ ಡೇಗೆ ಸಂಬಂಧಿಸಿ ಐಸಿಸಿ ನಿಯಮಗಳನ್ನು ಘೋಷಿಸಿದೆ. 5 ದಿನಗಳಲ್ಲಿ ಯಾವೆಲ್ಲ ದಿನಗಳಲ್ಲಿ ಪಂದ್ಯ ನಿಲುಗಡೆಯಾಗಿತ್ತು ಆ ಅವಧಿಯನ್ನೆಲ್ಲಾ ಸೇರಿಸಿ ರಿಸರ್ವ್ ಡೇ ಬೇಕೋ ಬೇಡವೋ ಎಂದು ನಿರ್ಧರಿಸಲಾಗುತ್ತದೆ. ಐದನೇ ದಿನದ ಪಂದ್ಯ ಆರಂಭವಾಗಿ ಮುಗಿಯಲು ಇನ್ನು ಒಂದು ಗಂಟೆಯಿರುವಾಗ ರಿಸರ್ವ್ ಡೇ ಬೇಕೋ ಬೇಡವೋ ಎಂಬ ಬಗ್ಗೆ ಮ್ಯಾಚ್ ರೆಫರೀ ಮಾಹಿತಿ ನೀಡುತ್ತಾರೆ.

ಪಂದ್ಯ ಡ್ರಾ/ಟೈ ಆದ್ರೆ?!

ಪಂದ್ಯ ಡ್ರಾ/ಟೈ ಆದ್ರೆ?!

ಐದು ದಿನಗಳ ಕಾಲ ನಡೆಯುವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಗ್ರೇಡ್ 1 ಡ್ಯೂಕ್‌ ಬಾಲ್‌ಗಳನ್ನು ಬಳಸಲಾಗುತ್ತದೆ. ಪಂದ್ಯ ಒಂದು ವೇಳೆ ಟೈ/ಡ್ರಾ ಆದರೆ ಎರಡೂ ತಂಡಗಳನ್ನೂ ವಿಜೇತರೆಂದು ಘೋಷಿಸಲಾಗುತ್ತದೆ. ಇಬ್ಬರೂ ಟ್ರೋಫಿ ಎತ್ತಿ ಗೆಲುವನ್ನಾಚರಿಸಿಉತ್ತಾರೆ. ಇನ್ನು ಶಾರ್ಟ್ ರನ್, ಡಿಸಿಶನ್‌ ರಿವ್ಯೂ ಮೊದಲಾದವೆಲ್ಲ ಮಾಮೂಲಿ ಎಂದಿನ ಕ್ರಿಕೆಟ್‌ ನಿಯಮಗಳಂತೆಯೇ ಇರಲಿವೆ.

Story first published: Friday, May 28, 2021, 17:41 [IST]
Other articles published on May 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X