ಐಸಿಸಿ ಪ್ರಶಸ್ತಿ 2021: ವಿಜೇತರ ಸಂಪೂರ್ಣ ಪಟ್ಟಿ; ಸ್ಮೃತಿ ಮಂಧಾನ, ಶಾಹೀನ್ ಶಾ ಅಫ್ರಿದಿಗೆ ಅತ್ಯುನ್ನತ ಗೌರವ

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2021ರ ಕ್ಯಾಲೆಂಡರ್ ವರ್ಷದ ಅತ್ಯುತ್ತಮ ಆಟಗಾರರಿಗೆ ನೀಡುವ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಯಲ್ಲಿ ಐಸಿಸಿ ವರ್ಷದ ಅತ್ಯುತ್ತಮ ಪುರುಷ ಕ್ರಿಕೆಟಿಗ ಪ್ರಶಸ್ತಿಯನ್ನು ಪಾಕಿಸ್ತಾನದ ಯುವ ಬೌಲರ್ ಶಾಹೀನ್ ಶಾ ಅಫ್ರಿದಿ ಪಡೆದುಕೊಂಡಿದ್ದರೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಪಡೆದುಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ ಬಾಬರ್ ಅಜಂಗೆ ಶಕೀಬ್ ಅಲ್ ಹಸನ್, ಜನೆಮನ್ ಮಲಾನ್ ಮತ್ತು ಪಾಲ್ ಸ್ಟಿರ್ಲಿಂಗ್ ತೀವ್ರ ಪೈಪೋಟಿಯನ್ನು ಒಡ್ಡಿದ್ದರು. ಈ ಎಲ್ಲಾ ಆಟಗಾರರನ್ನು ಹಿಂದಿಕ್ಕಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಏಕದಿನ ಮಾದರಿಯ ಮಹಿಳಾ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲಿಜೆಲ್ಲೆ ಲೀ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಲಿಜೆಲ್ಲೆ ಲೀ 2021 ರಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ.

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

ಇನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರುಟ್ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಗೆ ಭಾರತದ ಸ್ಮಿನ್ನರ್ ಆರ್ ಅಶ್ವಿನ್, ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್ ಹಾಗೂ ಶ್ರೀಲಂಕಾದ ದುಮಿತ್ ಕರುಣರತ್ನ ತೀವ್ರ ಪೈಪೋಟಿಯನ್ನು ಒಡ್ಡಿದ್ದರು.

ಇನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿ ಟಾಮ್ಮಿ ಬೌಮಂಟ್ ಮಹಿಳಾ ವರ್ಷದ ಟಿ20 ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಐಸಿಸಿ ಪ್ರಶಸ್ತಿ 2021, ವಿಜೇತರ ಪಟ್ಟಿ ಇಲ್ಲಿದೆ:
ಐಸಿಸಿ ವರ್ಷದ ಪುರುಷ ಕ್ರಿಕೆಟಿಗ (ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ): ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ)
ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ (ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿ): ಸ್ಮೃತಿ ಮಂಧಾನ (ಭಾರತ)
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ: ಜೋ ರೂಟ್ (ಇಂಗ್ಲೆಂಡ್)
ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ(ಪುರುಷರ ವಿಭಾಗ): ಬಾಬರ್ ಅಜಮ್ (ಪಾಕಿಸ್ತಾನ)
ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್: ಲಿಜೆಲ್ಲೆ ಲೀ (ದಕ್ಷಿಣ ಆಫ್ರಿಕಾ)
ಐಸಿಸಿ ವರ್ಷದ ಟಿ20 ಕ್ರಿಕೆಟರ್(ಪುರುಷರ ವಿಭಾಗ): ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ)
ಐಸಿಸಿ ವರ್ಷದ ಟಿ20 ಕ್ರಿಕೆಟರ್(ಮಹಿಳಾ ವಿಭಾಗ): ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್)
ಐಸಿಸಿ ವರ್ಷದ ಉದಯೋನ್ಮುಖ ಪುರುಷ ಕ್ರಿಕೆಟರ್: ಜನೆಮನ್ ಮಲನ್ (ದಕ್ಷಿಣ ಆಫ್ರಿಕಾ)
ಐಸಿಸಿ ವರ್ಷದ ಉದಯೋನ್ಮುಖ ಮಹಿಳಾ ಕ್ರಿಕೆಟರ್: ಫಾತಿಮಾ ಸನಾ (ಪಾಕಿಸ್ತಾನ)
ಐಸಿಸಿ ವರ್ಷದ ಅಸೋಸಿಯೇಟ್ ಕ್ರಿಕೆಟರ್(ಪುರುಷರ ವಿಭಾಗ): ಜೀಶನ್ ಮಕ್ಸೂದ್ (ಒಮನ್)
ಐಸಿಸಿ ವರ್ಷದ ಅಸೋಸಿಯೇಟ್ ಕ್ರಿಕೆಟರ್(ಮಹಿಳಾ ವಿಭಾಗ): ಆಂಡ್ರಿಯಾ-ಮೇ ಜೆಪೆಡಾ (ಆಸ್ಟ್ರಿಯಾ)
ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ: ಇನ್ನಷ್ಟೇ ಘೋಷಣೆಯಾಗಬೇಕಿದೆ
ಐಸಿಸಿ ವರ್ಷದ ಅಂಪೈರ್: ಮರೈಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ)

4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

ಐಸಿಸಿ ವರ್ಷದ ಟೆಸ್ಟ್ ತಂಡ(ಪುರುಷರ ವಿಭಾಗ): ದಿಮುತ್ ಕರುಣಾರತ್ನೆ (ಶ್ರೀಲಂಕಾ), ರೋಹಿತ್ ಶರ್ಮಾ (ಭಾರತ), ಕೇನ್ ವಿಲಿಯಮ್ಸನ್ (ನಾಯಕ, ನ್ಯೂಜಿಲೆಂಡ್), ಮಾರ್ನಸ್ ಲ್ಯಾಬುಶೈನ್ (ಆಸ್ಟ್ರೇಲಿಯಾ), ಜೋ ರೂಟ್ (ಇಂಗ್ಲೆಂಡ್), ಫವಾದ್ ಆಲಂ (ಪಾಕಿಸ್ತಾನ), ರಿಷಭ್ ಪಂತ್ (ಭಾರತ), ರವಿಚಂದ್ರನ್ ಅಶ್ವಿನ್ (ಭಾರತ), ಕೈಲ್ ಜೇಮಿಸನ್ (ನ್ಯೂಜಿಲೆಂಡ್), ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ), ಹಸನ್ ಅಲಿ (ಪಾಕಿಸ್ತಾನ)

ಐಸಿಸಿ ವರ್ಷದ ಏಕದಿನ ತಂಡ(ಪುರುಷರ ವಿಭಾಗ): ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್), ಜನೆಮನ್ ಮಲಾನ್ (ದಕ್ಷಿಣ ಆಫ್ರಿಕಾ), ಬಾಬರ್ ಅಜಮ್ (ಪಾಕಿಸ್ತಾನ), ಫಖರ್ ಜಮಾನ್ (ಪಾಕಿಸ್ತಾನ), ರಾಸ್ಸಿ ವಾನ್ ಡೆರ್ ಡುಸ್ಸೆನ್ (ದಕ್ಷಿಣ ಆಫ್ರಿಕಾ), ಶಕಿಬ್ ಅಲ್ ಹಸನ್ (ಬಾಂಗ್ಲಾದೇಶ), ಮುಶ್ಫಿಕರ್ ರಹೀಮ್ (ಬಾಂಗ್ಲಾದೇಶ), ವನಿಂದು ಹಸರಂಗಾ (ಶ್ರೀಲಂಕಾ), ಮುಸ್ತಾಜಿಫುರ್ ರೆಹಮಾನ್ (ಬಾಂಗ್ಲಾದೇಶ), ಸಿಮಿ ಸಿಂಗ್ (ಐರ್ಲೆಂಡ್) ಮತ್ತು ದುಷ್ಮಂತ ಚಮೀರಾ (ಶ್ರೀಲಂಕಾ)

ಐಸಿಸಿ ವರ್ಷದ ಟಿ20 ತಂಡ(ಪುರುಷರ ವಿಭಾಗ): ಜೋಸ್ ಬಟ್ಲರ್ (ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ), ಬಾಬರ್ ಅಜಮ್ (ನಾಯಕ, ಪಾಕಿಸ್ತಾನ), ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ), ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ), ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ), ತಬ್ರೈಜ್ ಶಮ್ಸಿ (ದಕ್ಷಿಣ ಆಫ್ರಿಕಾ), ಜೋಶ್ ಹ್ಯಾಜಲ್‌ವುಡ್ (ಆಸ್ಟ್ರೇಲಿಯಾ), ವನಿಂದು ಹಸರಂಗಾ (ಶ್ರೀಲಂಕಾ), ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ), ಶಾಹೀನ್ ಶಾ ಆಫ್ರಿದಿ (ಪಾಕಿಸ್ತಾನ).

ಐಸಿಸಿ ವರ್ಷದ ಏಕದಿನ ತಂಡ(ಮಹಿಳಾ ವಿಭಾಗ): ಲಿಜೆಲ್ ಲೀ (ದಕ್ಷಿಣ ಆಫ್ರಿಕಾ), ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ), ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್), ಮಿಥಾಲಿ ರಾಜ್ (ಭಾರತ), ಹೀದರ್ ನೈಟ್ (ನಾಯಕಿ, ಇಂಗ್ಲೆಂಡ್), ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್), ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ), ಫಾತಿಮಾ ಸನಾ (ಪಾಕಿಸ್ತಾನ), ಅನಿಸಾ ಮೊಹಮ್ಮದ್ (ವೆಸ್ಟ್ ಇಂಡೀಸ್), ಜೂಲನ್ ಗೋಸ್ವಾಮಿ (ಭಾರತ).

ಐಸಿಸಿ ವರ್ಷದ ಟಿ20 ತಂಡ(ಮಹಿಳಾ ವಿಭಾಗ): ಸ್ಮೃತಿ ಮಂಧಾನ (ಭಾರತ), ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್), ಡ್ಯಾನಿ ವ್ಯಾಟ್ (ಇಂಗ್ಲೆಂಡ್), ಗೇಬಿ ಲೆವಿಸ್ (ಐರ್ಲೆಂಡ್), ನ್ಯಾಟ್ ಸ್ಕೈವರ್ (ನಾಯಕ, ಇಂಗ್ಲೆಂಡ್), ಆಮಿ ಜೋನ್ಸ್ (ಇಂಗ್ಲೆಂಡ್), ಲಾರಾ ವೊಲ್ವಾರ್ಡ್ (ದಕ್ಷಿಣ) ಆಫ್ರಿಕಾ), ಮಾರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ), ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್), ಲೋರಿನ್ ಫಿರಿ (ಜಿಂಬಾಬ್ವೆ), ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ).

Virat ವಿಕೆಟ್ ತೆಗೆದ ಸೌತ್ ಆಫ್ರಿಕಾ ಬೌಲರ್ ಬಾಯಲ್ಲಿ ಜೈ ಶ್ರೀರಾಮ್ ಜಪ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Monday, January 24, 2022, 17:38 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X