ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟರ್‌ಗೆ ಬರೋಬ್ಬರಿ 7 ವರ್ಷಗಳ ಸುದೀರ್ಘ ನಿಷೇಧ ವಿಧಿಸಿದ ಐಸಿಸಿ

ICC bans cricketer for 7 years for indulging in corrupt practice

ಅಬುಧಾಬಿ, ಫೆಬ್ರವರಿ 24: ಓಮನ್ ಕ್ರಿಕೆಟರ್ ಯೂಸಿಫ್ ಅಬ್ದುಲ್‌ರಹೀಮ್ ಅಲ್ ಬಲುಶಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬರೋಬ್ಬರಿ 7 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಯುಎಇಯಲ್ಲಿ ನಡೆದಿದ್ದ 2019ರ ಟಿ20 ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ಯೂಸಿಫ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ.

ಜಮ್ಮು-ಕಾಶ್ಮೀರ ವಿರುದ್ಧ ಗೆದ್ದ ಕರ್ನಾಟಕ, ಸತತ 3ನೇ ಬಾರಿ ಸೆ.ಫೈನಲ್‌ಗೆ ಎಂಟ್ರಿಜಮ್ಮು-ಕಾಶ್ಮೀರ ವಿರುದ್ಧ ಗೆದ್ದ ಕರ್ನಾಟಕ, ಸತತ 3ನೇ ಬಾರಿ ಸೆ.ಫೈನಲ್‌ಗೆ ಎಂಟ್ರಿ

ಜನವರಿಯಲ್ಲಿ ಐಸಿಸಿಯ ಭ್ರಷ್ಟಾಚಾರ ನಿಗ್ರಹದಳ ನಡೆಸಿದ ವಿಚಾರಣೆ ಮೇಳೆ ಯೂಸುಫ್ ತಪ್ಪಿತಸ್ಥರಾಗಿ ಕಂಡುಬಂದಿದ್ದರು. ವಿಚಾರಣೆ ವೇಳೆ ಮ್ಯಾಚ್ ಫಿಕ್ಸಿಂಗ್‌ಗೂ ಸಂಬಂಧಿಸಿ ಯೂಸೂಫ್ ತಪ್ಪೆಸಗಿದ್ದರು. ಹೀಗಾಗಿ ಐಸಿಸಿಯ ಭ್ರಷ್ಟಾಚಾರ ನಿಗ್ರಹದಳ ದೂರು ದಾಖಲಿಸಿತ್ತು.

ICC bans cricketer for 7 years for indulging in corrupt practice

4 ಪಂದ್ಯ 4 ಸೋಲು: ಐಸಿಸಿ ಟೂರ್ನಿಗಳಲ್ಲಿ ಕೀವಿಸ್ ಕಂಡರೆ ಟೀಮ್ ಇಂಡಿಯಾಗೆ ಯಾಕೆ ಭಯ!4 ಪಂದ್ಯ 4 ಸೋಲು: ಐಸಿಸಿ ಟೂರ್ನಿಗಳಲ್ಲಿ ಕೀವಿಸ್ ಕಂಡರೆ ಟೀಮ್ ಇಂಡಿಯಾಗೆ ಯಾಕೆ ಭಯ!

ಸೋಮವಾರ (ಫೆಬ್ರವರಿ 24) ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಯೂಸೂಫ್ ಅವರು ಐಸಿಸಿಯ ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘಿಸಿರುವುದಕ್ಕಾಗಿ ನಾಲ್ಕು ವಿಧಗಳಲ್ಲಿ ನೀಡಲಾಗಿರುವ ಶಿಕ್ಷೆಯನ್ನು ಒಪ್ಪಿಕೊಂಡಿರುವುದಾಗಿ ಹೇಳಿದೆ. ಅಲ್ಲದೆ ಅಬ್ದುಲ್‌ರಹೀಮ್ ಅವರದ್ದು ದೊಡ್ಡ ತಪ್ಪು ಎಂದೂ ಹೇಳಿದೆ.

ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?ನಮಸ್ತೆ ಟ್ರಂಪ್‌ಗೆ ವೇದಿಕೆ ಒದಗಿಸಿದ ಸ್ಟೇಡಿಯಂ ವಿಶೇಷತೆಗಳೇನು?

'ಇದು ಅತ್ಯಂತ ಗಂಭೀರವಾದ ಅಪರಾಧವಾಗಿದ್ದು, ಆಟಗಾರನು ಉನ್ನತ ಮಟ್ಟದ ಆಟಗಳಲ್ಲಿ ಭ್ರಷ್ಟ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ತಂಡದ ಆಟಗಾರನನ್ನು ಪ್ರಚೋದಿಸಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನ ವಿಫಲವಾಗಿದೆ. ಅಲ್ಲದೆ ಅವರ ಈ ನಡೆ ತಪ್ಪಿನ ತೀವ್ರತೆಯನ್ನು ತಿಳಿಸುತ್ತದೆ,' ಎಂದು ಐಸಿಸಿ ಮುಖ್ಯ ನಿರ್ವಾಹಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

Story first published: Monday, February 24, 2020, 18:33 [IST]
Other articles published on Feb 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X