ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಟಿ10 ಫ್ರಾಂಚೈಸಿ ಮಾಲಕನಿಗೆ ನಿಷೇಧ ಹೇರಿದ ಐಸಿಸಿ

ICC bans Indian owner of T10 franchise for corrupt practices

ನವದೆಹಲಿ, ಏಪ್ರಿಲ್ 29: ಯುಎಇಯಲ್ಲಿ 2018ರಲ್ಲಿ ನಡೆದಿದ್ದ ಟಿ10 ಲೀಗ್‌ನಲ್ಲಿ ಫ್ರಾಂಚೈಸಿ ಮಾಲಕನಾಗಿದ್ದ, ಭಾರತದ ಉದ್ಯಮಿ ದೀಪಕ್ ಅಗರ್ವಾಲ್ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ (ಏಪ್ರಿಲ್ 29) ನಿಷೇಧಿಸಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ತನಿಖೆಗೆ ಅಡ್ಡಿ ಪಡಿಸಿದ್ದಕ್ಕೆ ಐಸಿಸಿ ದೀಪಕ್ ಅವರನ್ನು ನಿಷೇಧಿಸಿದೆ.

ಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಯಾರು? ಕಾರಣ ಸಹಿತ ಹೇಳಿದ ಹರ್ಷ ಭೋಗ್ಲೆಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಯಾರು? ಕಾರಣ ಸಹಿತ ಹೇಳಿದ ಹರ್ಷ ಭೋಗ್ಲೆ

ಅಸಲಿಗೆ ದೀಪಕ್ ಅಗರ್ವಾಲ್ ಅವರಿಗೆ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಆದರೆ ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿರುವುದನ್ನು ಒಪ್ಪಿಕೊಂಡು, ಆ ಬಳಿಕ ತನಿಖೆಗೆ ಸಹಕರಿಸಿದ್ದಾಗಿ ಅಗರ್ವಾಲ್‌ಗೆ 6 ತಿಂಗಳ ನಿಷೇಧವನ್ನು ಐಸಿಸಿ ಕಡಿತಗೊಳಿಸಿದೆ.

ನಾನು ನೋಡಿದವರಲ್ಲಿ ಎಂಎಸ್ ಧೋನಿ ಅತ್ಯುತ್ತಮ ಫಿನಿಶರ್: ಮೈಕ್ ಹಸ್ಸಿನಾನು ನೋಡಿದವರಲ್ಲಿ ಎಂಎಸ್ ಧೋನಿ ಅತ್ಯುತ್ತಮ ಫಿನಿಶರ್: ಮೈಕ್ ಹಸ್ಸಿ

ಸಿಂಧಿಸ್ ಟಿ10 ತಂಡದ ಮಾಲಕರಾಗಿರುವ ಅಗರ್ವಾಲ್, 2018ರ ಆವೃತ್ತಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ದಾಖಲೆ ಹಾಳು ಮಾಡಿ ಬ್ರಷ್ಟಾಚಾರ ವಿರೋಧಿ ನೀತಿ ಉಲ್ಲಂಘಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಭಾಗವಹಿಸಿದ್ದ ವ್ಯಕ್ತಿಯಲ್ಲಿ ಅಗರ್ವಾಲ್, ದಾಖಲೆಗಳನ್ನು ನಾಶ ಮಾಡಲು ತಿಳಿಸಿದ್ದರು ಎನ್ನಲಾಗಿದೆ.

ಸಚಿನ್‌ಗಿದ್ದ ಪ್ರತಿಭೆಗೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು: ಕಪಿಲ್ ದೇವ್ಸಚಿನ್‌ಗಿದ್ದ ಪ್ರತಿಭೆಗೆ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು: ಕಪಿಲ್ ದೇವ್

'ಮಿಸ್ಟರ್ ಎಕ್ಸ್‌ ಅವರಲ್ಲಿ ಮಿಸ್ಟರ್ ಅಗರ್ವಾಲ್, ತಾವಿಬ್ಬರು ಸಂವಹನ ನಡೆಸಿದ ಎಲ್ಲಾ ಮೆಸೇಜ್‌ಗಳನ್ನು ಡಿಲೀಟ್ ಮಾಡಲು ಸೂಚಿಸಿದ್ದರು. ಅವರ ಮೊಬೈಲ್ ಫೋನ್‌ನಿಂದ ಇವರ ನಂಬರ್ ಅಳಿಸಿಹಾಕಿ ಬಳಿಕ ಆ್ಯಂಟಿ ಕರಪ್ಶನ್ ಇನ್ವೆಸ್ಟಿಗೇಶನ್‌ಗೆ ಹಾಜರಾಗುವಂತೆ ಅವರಲ್ಲಿ ತಿಳಿಸಿದ್ದರು,' ಎಂದು ಐಸಿಸಿ ಹೇಳಿದೆ.

Story first published: Thursday, April 30, 2020, 0:46 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X