ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ನಾಯಕ ಸರ್ಫರಾಜ್ ಸಂಪರ್ಕಿಸಿದ್ದಕ್ಕೆ ಇರ್ಫಾನ್‌ ನಿಷೇಧಿಸಿದ ಐಸಿಸಿ!

ICC bans Irfan Ansari for ‘approaching’ Pakistan skipper Sarfraz Ahmed

ದುಬೈ, ಫೆಬ್ರವರಿ 20: ಯುಎಇ ಮೂಲದ ಕೋಚ್ ಇರ್ಫಾನ್ ಅನ್ಸಾರಿ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 10 ವರ್ಷಗಳ ಕಾಲ ನಿಷೇಧಿಸಿದೆ. ಇರ್ಫಾನ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಸಂಪರ್ಕಿಸಿ ಸಿಕ್ಕಿಬಿದ್ದಿರುವುದು ಇದಕ್ಕೆ ಕಾರಣ.

ರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯ

ಒನ್ ಸ್ಟಾಪ್ ಟೂರಿಸಂ ಮತ್ತು ಮಲ್ಟಿಪ್ಲೆಕ್ಸ್ ಟೀಮ್‌ನ ತರಬೇತುದಾರ ಇರ್ಫಾನ್ ಅವರು ಯುಎಇಯಲ್ಲಿ ಅಕ್ಟೋಬರ್ 2017ರಲ್ಲಿ ನಡೆದಿದ್ದ ಪಾಕಿಸ್ತಾನ-ಶ್ರೀಲಂಕಾ ಸರಣಿಯ ವೇಳೆ ಸರ್ಫರಾಜ್ ಅವರನ್ನು ಸಂಪರ್ಕಿಸಿದ್ದರು. ಅಹ್ಮದ್ ಕೂಡಲೇ ಈ ವಿಚಾರದ ಬಗ್ಗೆ ಐಸಿಸಿಗೆ ದೂರಿತ್ತಿದ್ದರು.

ಇರ್ಫಾನ್ ಅವರನ್ನು ವಿಚಾರಣೆ ನಡೆಸಿರುವ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಮಿತಿಯ ನ್ಯಾಯಾಧೀಶರಿಗೆ ಅನ್ಸಾರಿ ಅವರು ಮೂರು ವಿಧಗಳಲ್ಲಿ ಐಸಿಸಿ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಹೀಗಾಗಿ ಅವರಿನ್ನು ತಪ್ಪಿತಸ್ಥರಾಗಿ ಪರಿಗಣಿಸಿ ನಿಷೇಧದ ಶಿಕ್ಷೆ ನೀಡಿದೆ.

ಏಕದಿನ ಕ್ರಿಕೆಟ್ : 24ರನ್ನಿಗೆ ಆಲೌಟ್ ಆಗಿ ದಾಖಲೆ ಬರೆದ ಒಮನ್ಏಕದಿನ ಕ್ರಿಕೆಟ್ : 24ರನ್ನಿಗೆ ಆಲೌಟ್ ಆಗಿ ದಾಖಲೆ ಬರೆದ ಒಮನ್

'ಅನ್ಸಾರಿ ಅವರು ಸರ್ಫರಾಜ್ ಅವರನ್ನು ಸಂಪರ್ಕಿಸಿದ್ದಾಗ ಸಂಪರ್ಕಿಸಿದ್ದು ಯಾವ ವಿಚಾರಕ್ಕೆ ಎಂದು ತಿಳಿದ ಸರ್ಫರಾಜ್ ನಿರಾಕರಿಸಿದ್ದರಲ್ಲದೆ ಆ ಕೂಡಲೇ ಅದನ್ನು ಐಸಿಸಿಗೆ ತಿಳಿಸಿದ್ದರು. ಹೀಗಾಗಿ ನಾನು ಸರ್ಫರಾಜ್ ಅಹ್ಮದ್ ಅವರನ್ನು ಅಭಿನಂದಿಸಲು ಬಯಸುತ್ತೇನೆ' ಎಂದು ಐಸಿಸಿ ಭ್ರಷ್ಟಾಚಾರ ವಿರೋಧಿ ಸಮಿತಿಯ ಮುಖ್ಯಸ್ಥರಾದ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.

Story first published: Wednesday, February 20, 2019, 15:44 [IST]
Other articles published on Feb 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X