ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇ ಕ್ರಿಕೆಟರ್ಸ್ ನವೀದ್, ಶೈಮಾನ್‌ಗೆ ನಿಷೇಧ ಹೇರಿದ ಐಸಿಸಿ

ICC bans UAE players Mohammad Naveed and Shaiman Anwar Butt for eight years

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಕ್ರಿಕೆಟರ್‌ಗಳಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 8 ವರ್ಷಗಳ ಕಾಲ ನಿಷೇಧಿಸಿದೆ. ಫಿಕ್ಸಿಂಗ್‌ ಯತ್ನದ ಆರೋಪದಡಿಯಲ್ಲಿ ಇಬ್ಬರು ಕ್ರಿಕೆಟರ್‌ಗಳು ನಿಷೇಧಕ್ಕೀಡಾಗಿದ್ದಾರೆ.

ಬಾಂಗ್ಲಾದೇಶ ಲೆಜೆಂಡ್ಸ್‌ ಸದೆಬಡಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ಬಾಂಗ್ಲಾದೇಶ ಲೆಜೆಂಡ್ಸ್‌ ಸದೆಬಡಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್

2019ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಕ್ವಾಲಿಫೈಯರ್ ಪಂದ್ಯದಲ್ಲಿ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಮ್ಯಾಚ್ ಫಿಕ್ಸಿಂಗ್ ನಡೆಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದರು. ಅಕ್ಟೋಬರ್ 16ರಂದು ಈ ಪಂದ್ಯ ನಡೆದಿತ್ತು. ಐಸಿಸಿ ಆ್ಯಂಟಿ ಕರಪ್ಶನ್ ಕೋಡ್ ನಿಯಮ ಮೀರಿದ್ದಕ್ಕಾಗಿ ಇಬ್ಬರೂ ಶಿಕ್ಷೆಗೆ ಗುರಿಯಾಗಿದ್ದಾರೆ.

33ರ ಹರೆಯದ ನಾಯಕ ಮತ್ತು ಬಲಗೈ ವೇಗಿ ನವೀದ್ ಅವರು ಯುಎಇ ಪರ 39 ಏಕದಿನ ಪಂದ್ಯ ಮತ್ತು 31 ಟಿ20ಐ ಪಂದ್ಯಗಳಲ್ಲಿ ಆಡಿದ್ದರು. ಇನ್ನು 42ರ ಹರೆಯದ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ ಬಟ್, 40 ಏಕದಿನ ಪಂದ್ಯ, 32 ಟಿ20ಐ ಪಂದ್ಯಗಳಲ್ಲಿ ಯುಎಇ ಪ್ರತಿನಿಧಿಸಿದ್ದರು.

ಭಾರತ vs ಇಂಗ್ಲೆಂಡ್: ವಿಶ್ರಾಂತಿಯಿಂದ ಮರಳಿದ ರೋಹಿತ್, ಆಡುವ ಬಳಗದಿಂದ ಹೊರಗುಳಿದ ಸೂರ್ಯಕುಮಾರ್ಭಾರತ vs ಇಂಗ್ಲೆಂಡ್: ವಿಶ್ರಾಂತಿಯಿಂದ ಮರಳಿದ ರೋಹಿತ್, ಆಡುವ ಬಳಗದಿಂದ ಹೊರಗುಳಿದ ಸೂರ್ಯಕುಮಾರ್

'ಭ್ರಷ್ಟಾಚಾರ ನಿಯಮ ಮೀರಿದ್ದರಿಂದ ಯುಎಇಯ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 8 ವರ್ಷಗಳ ಕಾಲ ನಿಷೇಧಿಸಲ್ಪಟ್ಟಿದ್ದಾರೆ' ಎಂದು ಐಸಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

Story first published: Tuesday, March 16, 2021, 19:41 [IST]
Other articles published on Mar 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X